

ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ. ಅಂದು ಮಾಡುವ ಉಪವಾಸಕ್ಕೆ ಪೂರಕವಾದ, ಆರೋಗ್ಯಕರ ಹಾಗೂ ಸುಲಭದಲ್ಲಿ ತಯಾರಿಸಬಲ್ಲ ಕಡಲೆಬೇಳೆ ಗುಗ್ಗರಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿ: ಕಡಲೇಬೇಳೆ-2 ಕಪ್ ಕತ್ತರಿಸಿದ ಹಸಿಮೆಣಸಿನಕಾಯಿ-4-5 ಕತ್ತರಿಸಿದ ಕ್ಯಾರೆಟ್ ಹೋಳುಗಳು-1 4 ಕಪ್ ಎಣ್ಣೆ-3 ಚಮಚ ಇಂಗು-14 ಚಮಚ ಜೀರಿಗೆ-1 ಚಮಚ ಶುಂಠಿ ತುರಿ-ಅರ್ಧ ಚಮಚ ತೆಂಗಿನಕಾಯಿ ತುರಿ-4 ಚಮಚ ಕರಿಬೇವಿನ ಎಲೆಗಳು-7-8 ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ ನಿಂಬೆರಸ-ಅರ್ಧ ಚಮಚ ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಕಡಲೇಬೇಳೆಯನ್ನು ಅರ್ಧ ಘಂಟೆ ನೆನೆಸಿ ಬಸಿದು ಬೇಯಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಜೀರಿಗೆ-ಇಂಗು-ಕರಬೇವಿನ ಎಲೆಗಳನ್ನು ಹಾಕಿ, ಒಗ್ಗರಣೆ ಮಾಡಿ. ಒಗ್ಗರಣೆಗೆ, ಹಸಿಮೆಣಸಿನಕಾಯಿ, ಕ್ಯಾರೆಟ್ ಹೋಳುಗಳನ್ನು ಹಾಕಿ ಬಾಡಿಸಿ, ಬೇಯಿಸಿದ ಕಡಲೇಬೇಳೆಯನ್ನು ಸೇರಿಸಿ. ಈ ಮಿಶ್ರಣಕ್ಕೆ, ಉಪ್ಪು, ಶುಂಠಿತುರಿ ನಿಂಬೆರಸ ಹಾಕಿ ಕಲಕಿ, ಒಲೆಯಿಂದ ಕೆಳಗಿರಿಸಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.