ಜೀರಿಗೆ ಮತ್ತು ಮೆಂತ್ಯೆ ಕಾಳು ಬಂದಾಗ ತೂಕ ಇಳಿಕೆಗೆ ಯಾವುದು ಬೆಸ್ಟ್ ಎಂದು ಹೇಳುವುದು ಸ್ವಲ್ಪ ಕಷ್ಟವೇ ಏಕೆಂದರೆ, ಎರಡು ಅಡುಗೆ ಮನೆಯ ಪದಾರ್ಥ ತನ್ನದೇ ವಿಧದಲ್ಲಿ ದೇಹಕ್ಕೆ ಸಹಕಾರಿಯಾಗಿದೆ. ತಿಂದ ಆಹಾರ ಜೀರ್ಣವಾಗಿ ಕ್ಯಾಲೋರಿ ಕರಗಬೇಕು ಎಂದರೆ ಅದಕ್ಕೆ ಜೀರಿಗೆ ನೀರು ಉತ್ತಮವಾಗುತ್ತದೆ. ಅದರಂತೆ, ಪದೇ ಪದೇ ಹಸಿವಾದಂತೆ ಆಗಿ ರಸ್ತೆಯಲ್ಲಿ ಕಂಡ ಅನಾರೋಗ್ಯಕರ ಪದಾರ್ಥಗಳನ್ನು ತಿನ್ನಲು ಬಿಡದೆ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಮೆಂತ್ಯೆ ಬೆಸ್ಟ್ ಎಂದು ತಜ್ಞರು ಹೇಳುತ್ತಿದ್ದಾರೆ, (ಏಜೆನ್ಸೀಸ್).