ಮೂಗಿನಲ್ಲಿ ಇದ್ದಕ್ಕಿದ್ದಂತೆ ರಕ್ತ ಬರುತ್ತಿದೆಯೇ? ಭಯಪಡಬೇಡಿ, ಇದರ ಹಿಂದಿರುವ ವೈದ್ಯಕೀಯ ಕಾರಣ ಇಲ್ಲಿದೆ.. Nose bleed

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ
  • ತೀವ್ರವಾದ ಸೂರ್ಯನ ಬೆಳಕು, ಅತಿಯಾದ ಶಾಖ ಮತ್ತು ಒಣ ಗಾಳಿಯು ದೇಹದ ಮೇಲೆ ಪರಿಣಾಮ ಬೀರುತ್ತದೆ
  • ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮೂಗಿನ ರಕ್ತಸ್ರಾವ ಅಥವಾ ಎಪಿಸ್ಟಾಕ್ಸಿಸ್ ಕೂಡಾ ಒಂದು
  • ದೇಹದಲ್ಲಿ ನೀರಿನ ಶೇಖರಣೆ ಕಡಿಮೆಯಾದಾಗ ಮೂಗಿನೊಳಗೆ ಶುಷ್ಕತೆ ಹೆಚ್ಚಾಗುತ್ತದೆ
Nose bleed: ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ತೀವ್ರವಾದ ಸೂರ್ಯನ ಬೆಳಕು, ಅತಿಯಾದ ಶಾಖ ಮತ್ತು ಒಣ ಗಾಳಿಯು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಹವಾಮಾನ ವೈಪರೀತ್ಯದಿಂದಾಗಿ ಕಾಣಿಸಿಕೊಳ್ಳುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮೂಗಿನ ರಕ್ತಸ್ರಾವ ಅಥವಾ ಎಪಿಸ್ಟಾಕ್ಸಿಸ್ ಕೂಡಾ ಒಂದು. ಇದು ಹೆಚ್ಚಾಗಿ ಮಕ್ಕಳು ಮತ್ತು ವಯಸ್ಸಾದವರಲ್ಲಿ ಇದು ಕಂಡುಬರುತ್ತದೆ.
ಜನರು ಇದನ್ನು ಸಣ್ಣ ಸಮಸ್ಯೆ ಎಂದು ತಳ್ಳಿಹಾಕುತ್ತಾರೆ. ಆದರೆ, ಇದು ನಿಯಮಿತವಾಗಿ ಸಂಭವಿಸಿದರೆ, ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು ಎಂದು ವೈದ್ಯರು ಸೂಚಿಸುತ್ತಾರೆ.

ಬೇಸಿಗೆಯಲ್ಲಿ ಮೂಗಿನ ರಕ್ತಸ್ರಾವ ಏಕೆ ಸಂಭವಿಸುತ್ತದೆ?

ಬೇಸಿಗೆಯಲ್ಲಿ ವಾತಾವರಣವು ತುಂಬಾ ಒಣಗಿರುತ್ತದೆ. ಇದು ಮೂಗಿನ ಒಳಗಿನ ಸೂಕ್ಷ್ಮ ಪದರಗಳ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಶುಷ್ಕತೆ ಉಂಟಾಗಿ ಅಲ್ಲಿನ ಸಣ್ಣ ರಕ್ತನಾಳಗಳು ದುರ್ಬಲಗೊಳ್ಳುತ್ತವೆ. ಇದರಿಂದ ರಕ್ತಸ್ರಾವ ಉಂಟಾಗಬಹುದು. ಇದಲ್ಲದೇ, ದೇಹದಲ್ಲಿ ನೀರಿನ ಕೊರತೆ ಕೂಡಾ ಒಂದಾಗಿದೆ.
ದೇಹದಲ್ಲಿ ನೀರಿನ ಶೇಖರಣೆ ಕಡಿಮೆಯಾದಾಗ ಮೂಗಿನೊಳಗೆ ಶುಷ್ಕತೆ ಹೆಚ್ಚಾಗುತ್ತದೆ. ಇದರಿಂದ ಮೂಗು ತುರಿಸುವುದು, ಅಲರ್ಜಿಗಳಂತಹ ಗಾಯಗಳು ಹೆಚ್ಚಾಗಿ ಕಂಡುಬರುತ್ತದೆ.
ಹಠಾತ್ ಮೂಗಿನ ರಕ್ತಸ್ರಾವಕ್ಕೆ ಮೊದಲು ಮೂಗು ತುರಿಕೆ, ಉರಿ ಮತ್ತು ಒಣಗುತ್ತದೆ. ಕೆಲವರಿಗೆ ತಲೆಯಲ್ಲಿ ಭಾರವಾದ ಅನುಭವ, ತಲೆತಿರುಗುವಿಕೆಯಂತಹ ಸಮಸ್ಯೆ ಉಂಟಾಗಬಹುದು. ಆದಾಗ್ಯೂ, ರಕ್ತಸ್ರಾವ ಅಧಿಕವಾಗಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.

ಮೂಗಿನ ರಕ್ತಸ್ರಾವವಾಗಿದ್ದರೆ ಏನು ಮಾಡಬೇಕು?

ನಿಮ್ಮ ಮೂಗಿನಿಂದ ರಕ್ತಸ್ರಾವವಾಗಲು ಪ್ರಾರಂಭಿಸಿದರೆ ಭಯಪಡಬೇಡಿ. ಬದಲಿಗೆ ಆರಾಮವಾಗಿ ಕುಳಿತುಕೊಂಡು ನಿಮ್ಮ ತಲೆಯನ್ನು ಸ್ವಲ್ಪ ಮುಂದಕ್ಕೆ ತಿರುಗಿಸಿ ನಂತರ ನಿಮಿಷಗಳ ಕಾಲ ನಿಮ್ಮ ಮೂಗಿನ ಮೇಲೆ ನಿಧಾನವಾಗಿ ಒತ್ತಿರಿ. ಈ ವೇಳೆ ನಿಮ್ಮ ತಲೆ ಹಿಂದೆ ತಿರುಗಿಸದಂತೆ ನೋಡಿಕೊಳ್ಳಿ. ಏಕೆಂದರೆ ಇದು ರಕ್ತವು ನಿಮ್ಮ ಗಂಟಲಿನ ಕೆಳಗೆ ಹರಿಯಲು ಕಾರಣವಾಗಬಹುದು.

ಸರಳ ಪರಿಹಾರ

1. ಮೂಗಿನ ರಕ್ತಸ್ರಾವವನ್ನು ತಪ್ಪಿಸಲು ಮಾಡಬೇಕಾದ ಪ್ರಮುಖ ವಿಷಯವೆಂದರೆ ದಿನವಿಡೀ ಆದಷ್ಟು ನೀರನ್ನು ಕುಡಿಯಿರಿ. ಜೊತೆಗೆ ನಿಂಬೆ ನೀರು, ಮೊಸರು ಮತ್ತು ಇತರ ದ್ರವಗಳನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.
2. ಬಲವಾದ ಸೂರ್ಯನ ಬೆಳಕಿಗೆ ಹೋಗುವುದನ್ನು ತಪ್ಪಿಸಿ. ಹೊರಗೆ ಹೋಗುವಾಗ ನಿಮ್ಮ ತಲೆಯನ್ನು ಟೋಪಿ ಅಥವಾ ಛತ್ರಿಯಿಂದ ರಕ್ಷಿಸಿಕೊಳ್ಳಿ. ಮೂಗನ್ನು ತೇವವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ.
3. ಆದಷ್ಟು ನಿಮ್ಮ ಕೋಣೆಯನ್ನು ತಂಪಾಗಿ ಇರಿಸಿಕೊಳ್ಳಿ. ನಿಮ್ಮ ಮೂಗನ್ನು ಪದೇ ಪದೇ ಮುಟ್ಟುವುದು, ಬಲವಾಗಿ ಸ್ವಚ್ಛಗೊಳಿಸುವುದನ್ನು ತಪ್ಪಿಸಿ.
4. ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ತುಂಬಾ ತಣ್ಣನೆಯ ಆಹಾರಗಳ ಸೇವನೆಯನ್ನು ಮಿತಗೊಳಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net