

Lyfe style: ಬಹುತೇಕ ಎಲ್ಲರ ಮನೆಗಳಲ್ಲಿ ಬಹುತೇಕ ಈ ನೊಣಗಳು ಕಂಡುಬರುತ್ತವೆ. ಆದರೆ ಕೆಲ ಮನೆಗಳಲ್ಲಂತೂ ಸಾಕಷ್ಟು ಪ್ರಮಾಣದಲ್ಲಿ ಈ ನೊಣಗಳನ್ನು ನೋಡಬಹುದು. ನೀವು ಮಾತನಾಡುತ್ತಾ ಕುಳಿತಿರಲಿ, ಏನನ್ನಾದರೂ ತಿನ್ನುತ್ತಿರಲಿ ಅಥವಾ ನಿಮ್ಮ ಮೊಬೈಲ್, ಟಿವಿಯಲ್ಲಿ ನೆಚ್ಚಿನ ಚಲನಚಿತ್ರವನ್ನು ನೋಡುತ್ತಿರಲಿ, ನೊಣಗಳು ನಿಮಗೆ ತೊಂದರೆ ನೀಡಿದಾಗ ಅದು ತುಂಬಾ ಕಿರಿಕಿರಿ ಅನಿಸುತ್ತದೆ. ನೊಣಗಳು ವಿವಿಧ ಸೂಕ್ಷ್ಮಜೀವಿಗಳಾಗಿದ್ದು, ಟೈಫಾಯಿಡ್, ಅತಿಸಾರ ಮತ್ತು ಕಾಲರಾ ಮುಂತಾದ ಅನೇಕ ರೋಗಗಳಿಗೆ ಇವು ಕಾರಣವಾಗುತ್ತವೆ.
ಇದನ್ನೂ ಓದಿ: ಅಲರ್ಜಿಗೆಲ್ಲಾ ಯಾಕ್ರೀ ಆಸ್ಪತ್ರೆಗೆ ಹೋಗ್ತಿರಾ ಸುಲಭವಾಗಿ ಮನೆಯಲ್ಲೇ ಮಾಡಿ ಈ ಮನೆಮದ್ದು| Home remidies ಅಂದಹಾಗೆ ರಾಸಾಯನಿಕ ಸಿಂಪಡಣೆಗಳು ದೇಹಕ್ಕೆ ಮತ್ತು ಪರಿಸರಕ್ಕೆ ಹಾನಿಕಾರಕ. ಹಾಗಾಗಿ, ನೊಣಗಳ ಸಮಸ್ಯೆಗಳನ್ನು ತೊಡೆದುಹಾಕಲು ಕೆಲವು ಮನೆಮದ್ದುಗಳನ್ನು ಬಳಸಬಹುದಾಗಿದೆ. ಈ ವಿಧಾನಗಳನ್ನು ನೈಸರ್ಗಿಕ ಮತ್ತು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇನ್ನೂ ನೊಣಗಳನ್ನು ತೊಡೆದುಹಾಕಲು ಕೆಲವು ಮನೆಮದ್ದುಗಳನ್ನು ತಿಳಿಯೋಣ.
ಸಣ್ಣ ಕರ್ಪೂರದ ತುಂಡನ್ನು ಒಂದು ಬಟ್ಟಲಿನಲ್ಲಿ ಇಟ್ಟು, ಕಿಟಕಿಯ ಬಳಿ ಅಥವಾ ನೊಣಗಳಿರುವ ಜಾಗದಲ್ಲಿ ಇಡಿ. ಕರ್ಪೂರದ ವಾಸನೆ ನೊಣಗಳಿಗೆ ತಡೆಯಲಾಗದು.
ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ, ನಿಂಬೆಹಣ್ಣಿನೊಳಗೆ 7 ರಿಂದ 8 ಲವಂಗ ಹಾಕಿ ಅಡುಗೆಮನೆಯಲ್ಲಿ ಅಥವಾ ಕಿಟಕಿಯ ಬಳಿ ಇರಿಸಿ. ನಿಂಬೆ ಮತ್ತು ಲವಂಗದ ಮಿಶ್ರ ವಾಸನೆಯು ನೊಣಗಳನ್ನು ದೂರವಿಡುತ್ತದೆ.
ಕೆಲವು ಬೆಳ್ಳುಳ್ಳಿ ಅಥವಾ ಅರ್ಧ ಈರುಳ್ಳಿಯನ್ನು ನೀರಿನಲ್ಲಿ ಕುದಿಸಿ. ತಣ್ಣಗಾದ ಬಳಿಕ, ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೋಣೆಯ ಮೂಲೆಗಳಲ್ಲಿ ಸಿಂಪಡಿಸಿ.
ತುಳಸಿ ಅಥವಾ ಪುದೀನಾ ಎಲೆಗಳನ್ನು ಕಿಟಕಿಗಳ ಬಳಿ ಅಥವಾ ನೊಣಗಳು ಹೆಚ್ಚಿರುವ ಜಾಗದಲ್ಲಿ ಇಡಿ. ಇವುಗಳ ಪರಿಮಳ ನೊಣಗಳನ್ನು ದೂರವಿಡುತ್ತದೆ.
ಒಂದು ಲೋಟದಲ್ಲಿ ನೀರು ತೆಗೆದುಕೊಳ್ಳಿ, ಅದಕ್ಕೆ 2 ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಉಪ್ಪು ನೀರನ್ನು ಯಾವುದೇ ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ನಂತರ ಅದನ್ನು ನೊಣಗಳ ಮೇಲೆ ಸಿಂಪಡಿಸಿ. ಇದರಿಂದ ನೊಣಗಳು ಮನೆಯಿಂದ ಓಡಿ ಹೋಗುತ್ತವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)