ತೂಕ ಇಳಿಕೆ ದೊಡ್ಡ ಸವಾಲಾಗಿದೆಯೇ?; ಈ ಸಿಂಪಲ್​ ರೆಸಿಪಿ ಟ್ರೈ ಮಾಡಿ | Health Tips

Health Tips
Published on

Health Tips | ಪ್ರಸ್ತುತ ಜೀವನ ಶೈಲಿಯಲ್ಲಿ ತೂಕ ಇಳಿಸುವುದು, ಫಿಟ್​​ನೆಸ್​​ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ಪ್ರತಿನಿತ್ಯ ಡಯಟ್​​​ ಫುಡ್​​ ಸೇವಿಸುವುದು, ಜಿಮ್​​ಗೆ ಹೋಗುವುದು ಸಾಮಾನ್ಯ. ಹೀಗೆ ಫಿಟ್‌ನೆಸ್ ಟ್ರೈನರ್​​​​ ಒಬ್ಬರು ತಾವು ಸೇವಿಸುವ ಬೆಳಗಿನ ಆಹಾರದಿಂದಲೇ 15 KG ತೂಕ ಇಳಿಸಿದ್ದಾರೆ. ಮಹಿಳೆ ಈ ಕುರಿತು ಹಂಚಿಕೊಂಡ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​​ ಆಗಿದೆ.

ಲಾರಾ ಡೆನ್ನಿಸನ್ ಫಿಟ್‌ನೆಸ್ ಟ್ರೈನರ್​​​​ ಇನ್ಟ್​ಗ್ರಾಂ ಪೇಜ್​​​ನಲ್ಲಿ ತಾನು ಸೇವಿಸುವ ಆಹಾರ ಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ಬೆಳಗಿನ ಉಪಹಾರವನ್ನು ಸೇವಿಸುವ ಮೂಲಕ 15 KG ತೂಕವನ್ನು ಸುಲಭವಾಗಿ ಇಳಿಸಲು ಅನುಕೂಲವಾಯಿತು ಎಂದು ಹೇಳಿಕೊಂಡಿದ್ದಾರೆ.

ಲಾರಾ ಅನುಸರಿಸಿದ ಉಪಹಾರ ರೆಸಿಪಿ ಇಲ್ಲಿದೆ:

ಅರ್ಧ ಕಪ್ ಓಟ್ಸ್

ಎರಡು ಚಮಚ ಚಿಯಾ ಬೀಜ

ಒಂದು ಕಪ್ ಹಾಲು

ಹಣ್ಣುಗಳು

ಒಂದು ಚಮಚ ಪೀನಟ್​​ ಬಟರ್​​​

ಮಾಡುವ ವಿಧಾನ:

ಒಂದು ಜಾರ್‌ನಲ್ಲಿ ಅರ್ಧ ಕಪ್ ಓಟ್ಸ್, ಎರಡು ಚಮಚ ಚಿಯಾ ಬೀಜಗಳು, ಒಂದು ಕಪ್ ಹಾಲು ಮತ್ತು ಕತ್ತರಿಸಿದ ಹಣ್ಣುಗಳನ್ನು ತೆಗೆದುಕೊಂಡು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ರಾತ್ರಿಯಿಡೀ ಅದನ್ನು ಫ್ರೀಜ್​ನಲ್ಲಿಡಿ. ಬೆಳಿಗ್ಗೆ ಸೇವಿಸುವ ಮೊದಲು ಒಂದು ಚಮಚ ಪೀನಟ್​​ ಬಟರ್​​​ ಸೇರಿಸಿ ತಿನ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net