Screen use to calm children:
ಈ ಹಿಂದೆ ಅಳುವ ಮಕ್ಕಳನ್ನು ಸಮಾಧಾನ ಪಡಿಸಲು ಚಂದಮಾಮಾ, ಕಾಗೆ, ನಾಯಿ ಸೇರಿದಂತೆ ಪ್ರಕೃತಿಯಲ್ಲಿರುವ ಪ್ರಾಣಿಗಳನ್ನು ತೋರಿಸುತ್ತಾ, ಗೊಗ್ಗಯ್ಯ ಬರುತ್ತಾನೆ ಎಂದು ಹೆದರಿಸುತ್ತಾ ಊಟ ಮಾಡಿಸಲಾಗುತ್ತಿತ್ತು. ಆದರೀಗ ಹಾಗಿಲ್ಲ ಸೂಪರ್ ಮಾರ್ಕೆಟ್, ರೆಸ್ಟೋರೆಂಟ್ ಅಥವಾ ದೀರ್ಘ ಪ್ರಯಾಣದ ಸಮಯದಲ್ಲಿ ಮಕ್ಕಳು ಅಳಲು ಪ್ರಾರಂಭಿಸಿದಾಗ ಅವರನ್ನು ತಕ್ಷಣವೇ ಸಮಾಧಾನಪಡಿಸಲು ಸ್ಮಾರ್ಟ್‌ಫೋನ್ ಕೊಟ್ಟು ಯೂಟ್ಯೂಬ್ ಅಥವಾ ಗೇಮ್ ಆಡಲು ಬಿಟ್ಟುಬಿಡುತ್ತಾರೆ. ಆದರೆ, ಈ ಪ್ರಕ್ರಿಯೆ ಮಕ್ಕಳ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಹೊಸ ಅಧ್ಯಯನವೊಂದರ ವರದಿಯು ಹೇಳಿದೆ.
ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕಿ ಹಾಗೂ ಲೇಖಕಿ ಜೇನ್ ಶಾಕ್ರಾಫ್ಟ್ ಪ್ರಕಾರ, ಸ್ಕ್ರೀನ್ ನೋಡುವುದು ಎಲ್ಲ ಮಕ್ಕಳ ಮೇಲೆ ಒಂದೇ ರೀತಿಯ ಪರಿಣಾಮ ಬೀರೋದಿಲ್ಲ. ಕುಟುಂಬಸ್ಥರ ಮಾನಸಿಕ ಸ್ಥಿತಿಗೆ ಅನುಗುಣವಾಗಿತ್ತದೆ. ಇದು ಮಕ್ಕಳ ನಡವಳಿಕೆ ಮಾತ್ರವಲ್ಲ ಪೋಷಕರ ಮಾನಸಿಕ ಆರೋಗ್ಯದ ಜೊತೆಗೂ ಸಂಪರ್ಕ ಹೊಂದಿರಲಿದೆ ಎಂದು ಹೇಳಲಾಗಿದೆ.
ಸಂಶೋಧಕರು ನಡೆಸಿದ ಸಂಶೋಧನೆ ಪ್ರಕಾರ, ಅಳುವ ಮತ್ತು ಹಠ ಹಿಡಿಯುವ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಲು ಕೊಟ್ಟಾಗ ಇದು, ಮಕ್ಕಳ ಪ್ರಮುಖ ಆಲೋಚನಾ ಕೌಶಲ್ಯಗಳಾದ 'ಎಕ್ಸಿಕ್ಯೂಟಿವ್ ಫಂಕ್ಷನ್ಸ್' ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ಎಕ್ಸಿಕ್ಯೂಟಿವ್ ಫಂಕ್ಷನ್ ಎಂದರೇನು?
ಎಕ್ಸಿಕ್ಯೂಟಿವ್ ಫಂಕ್ಷನ್‌ಗಳು ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಲು, ಬದಲಾಗುವ ಸಂದರ್ಭಕ್ಕೆ ಹೊಂದಿಕೊಳ್ಳಲು, ನಡವಳಿಕೆ ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಆದರೆ, ಸ್ಕ್ರೀನ್ ನೋಡುವುದು ಇದರ ಬೆಳವಣಿಗೆ ತೊಡಕುಂಟು ಮಾಡುತ್ತದೆ.
ಯಾವುದೇ ಪ್ರಭಾವಕ್ಕೆ ತಕ್ಷಣವೇ ಪ್ರೇರೇಪಿತರಾಗಿ ಪ್ರತಿಕ್ರಿಯಿಸದೆ, ಯೋಚಿಸಿ ನಿರ್ಧಾರ ಕೈಗೊಳ್ಳುವ ಅಥವಾ ಸ್ವಯಂ ನಿಯಂತ್ರಣ ಸಾಧಿಸುವ ಸಾಮರ್ಥ್ಯ. ಯಾವಾಗ ಮಕ್ಕಳಲ್ಲಿ ಈ ಕೌಶಲ್ಯಗಳು ಕಡಿಮೆಯಾಗುತ್ತವೆಯೋ, ಆವಾಗ ಅವರು ಮತ್ತಷ್ಟು ಹಠಾಮಾರಿಗಳಾಗುತ್ತಾರೆ. ಇದರಿಂದ ಬೇಸತ್ತು ಪೋಷಕರು ಭವಿಷ್ಯದಲ್ಲಿ ಅವರನ್ನು ನಿಯಂತ್ರಿಸಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ಕ್ರೀನ್‌ಗಳನ್ನು ಅವಲಂಬಿಸತೊಡಗುತ್ತಾರೆ. ಇದು ಮಕ್ಕಳ ಶಾಲಾ ಪ್ರದರ್ಶನ ಹಾಗೂ ಭವಿಷ್ಯದ ಸಾಮಾಜಿಕ ಸಂಬಂಧಗಳ ಮೇಲೆಯೂ ಪರಿಣಾಮ ಬೀರುತ್ತದೆ.
ಪೋಷಕರ ಮಾನಸಿಕ ಸ್ಥಿತಿ ಹೇಗೆ ಕಾರಣವಾಗುತ್ತದೆ?
ಪೋಷಕರು ಮಕ್ಕಳು ಅಳುವುದನ್ನು ನಿಭಾಯಿಸಲು ಕಷ್ಟ ಪಡುವ ಕಾರಣ ಕೂಡಲೇ ಮೊಬೈಲ್ ಕೊಟ್ಟು ಅದರಲ್ಲಿ ಆಟಿಕೆಗಳ ವಿಡಿಯೋ ತೋರಿಸಿ ಬೇರೆಡೆಗೆ ಮನಸ್ಸನ್ನು ಸೆಳೆಯುವಂತೆ ಮಾಡುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಅವರು ಹಠಮಾರಿಗಳಾಗುವಂತೆ ಇದು ಮಾಡುತ್ತದೆ. ತಮ್ಮದೇ ಆದ ವೈಯಕ್ತಿಕ ಮಾನಸಿಕ ಹೋರಾಟಗಳು ಅಥವಾ ಒತ್ತಡಗಳನ್ನು ನಿಭಾಯಿಸಲು ಪೋಷಕರಲ್ಲಿ ಭಾವನಾತ್ಮಕ ಶಕ್ತಿ ಇಲ್ಲದಿದ್ದಾಗ, ತಕ್ಷಣದ ಪರಿಹಾರವಾಗಿ ಅವರು ತಂತ್ರಜ್ಞಾನ ಎಂಬ ಸುಲಭ ಸಾಧನವನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ
ಮೊಬೈಲ್ ನೋಡುವುದರಿಂದ ಆಗುವ ಪರಿಣಾಮವನ್ನು ಕಂಡುಕೊಂಡ ಮೂಲಕ ನಾಳೆಯಿಂದಲೇ ಮೊಬೈಲ್ ನೋಡುವ ಅಭ್ಯಾಸವನ್ನು ಬಿಟ್ಟುಬಿಡುವುದು ಅಥವಾ ಬಿಡಿಸಿ ಬಿಡುವುದು ತಪ್ಪು. ಆರೋಗ್ಯಕರ ಮೊಬೈಲ್ ಬಳಕೆ ಮಾಡಲು ಸ್ಕ್ರೀನ್ ಸಮಯವನ್ನು ಮಿತಿಗೊಳಿಸುವುದಷ್ಟೇ ಅಲ್ಲ. ಬದಲಿಗೆ, ಮಕ್ಕಳು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಪೋಷಕರು ಪರ್ಯಾಯ ಮಾರ್ಗಗಳನ್ನು ಒದಗಿಸಬೇಕಿದೆ. ಮಕ್ಕಳನ್ನು ಹೊರಾಂಗಣದಲ್ಲಿ ಆಟವಾಡಲು ಕರೆದುಕೊಂಡು ಹೋಗುವುದು. ಮಕ್ಕಳ ಜೊತೆ ನೇರವಾಗಿ ಮಾತನಾಡುವುದು, (ಏಜೆನ್ಸೀಸ್).