ಚಿಕನ್​​ ಸ್ಕಿನ್​ ತಿನ್ನುವುದು ಆರೋಗ್ಯಕ್ಕೆ ಎಷ್ಟು ಸಹಕಾರಿ, ಅದರಲ್ಲಿರುವ ಪೋಷಕಾಂಶಗಳೇನು?; ಇಲ್ಲಿದೆ ಸಂಪೂರ್ಣ ಡಿಟೇಲ್ಸ್..​Chicken Skin Benefits

​Chicken Skin Benefits
​Chicken Skin Benefits
Published on

ಪ್ರಮುಖ ಮುಖ್ಯಾಂಶಗಳು

  • ಚಿಕನ್ ಸ್ಕಿನ್‌ನಲ್ಲಿ ಕೊಬ್ಬು, ಸ್ವಲ್ಪ ಪ್ರಮಾಣದ ಪ್ರೋಟೀನ್ ಮತ್ತು ವಿಟಮಿನ್ 'ಇ' ಪೋಷಕಾಂಶಗಳಿವೆ.
  • ಡೀಪ್ ಫ್ರೈ ಮಾಡಿದ ಚಿಕನ್ ಸ್ಕಿನ್‌ಗಿಂತ ಗ್ರಿಲ್ ಅಥವಾ ಬ್ರೇಕ್ ಮಾಡಿದ ಚಿಕನ್ ಸೇವಿಸುವುದು ಉತ್ತಮ.
  • ಕ್ಯಾಲೋರಿ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವುದರಿಂದ ಮಿತವಾಗಿ ತಿನ್ನುವುದು ಸೂಕ್ತ.
​Chicken Skin Benefits : ನಾನ್​ವೆಜ್​ ಪ್ರಿಯರಿಗೆ ಚಿಕನ್​, ಮಟನ್​ ಬೀಫ್​ ಎಂದರೆ ತಿಂದರೆ ಸಾಕು, ಅದರಲ್ಲಿ ಒಳ್ಳೇದು ಯಾವುದು, ಪೋಷಕಾಂಶ ಹೆಚ್ಚಿಸುವ ಭಾಗ ಯಾವುದು ಎನ್ನುವ ಬಗ್ಗೆ ಅರಿವಿರೋದಿಲ್ಲ. ಆದರೆ, ಕೆಲವೊಮ್ಮೆ ದೇಹಕ್ಕೆ ಯಾವುದು ಬೆಸ್ಟ್ ಎನ್ನುವ ರೂಪುರೇಷೆ ಹಾಕಿಕೊಳ್ಳೋದು ಮುಖ್ಯ.
ಸಾಮಾನ್ಯವಾಗಿ ಕೆಲವರಿಗೆ ಚಿಕನ್​ ಸ್ಕಿನ್​​ ರುಚಿ ಎನಿಸಿದರೆ, ಇನ್ನೂ ಕೆಲವರಿಗೆ ಅದನ್ನು ತಿನ್ನಲು ಇಷ್ಟವಾಗೋದಿಲ್ಲ. ಆದರೆ, ಚಿಕನ್ ಸ್ಕಿನ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಅಲ್ಲವೇ? ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ.

ಚಿಕನ್​ ಸ್ಕಿನ್​ನಲ್ಲಿದೆ ಪೋಷಕಾಂಶ

ಚಿಕನ್​ ಸ್ಕಿನ್​ನಲ್ಲಿ ಕೊಬ್ಬಿನಾಂಶ ಇರುತ್ತದೆ. ಇದರಲ್ಲಿ ಅನ್-ಸ್ಯಾಚುರೇಟೆಡ್ ಫ್ಯಾಟ್ ಕೂಡ ಸ್ವಲ್ಪ ಮಟ್ಟಕ್ಕೆ ಇರುತ್ತದೆ. ಇಷ್ಟೇ ಅಲ್ಲದೆ, ಇದರ ಜೊತೆಗೆ ವಿಟಮಿನ್​ ಇ ಸ್ವಲ್ಪ ಪ್ರಮಾಣದಲ್ಲಿದ್ದು, ಇವು ದೇಹಕ್ಕೆ ಪ್ರೋಟೀನ್​ ಹಹಾಗೂ ದೇಹಕ್ಕೆ ಶಕ್ತಿ ನೀಡುವ ಕ್ಯಾಲೋರಿಯಾಗಿದೆ.
ಚಿಕನ್​ ಸ್ಕಿನ್​ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ​ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳನ್ನು ದೇಹವು ಹೀರಿಕೊಳ್ಳಲು ಇದು ಸಹಾಯ ಮಾಡುತ್ತದೆ.​ಸ್ಕಿನ್‌ನೊಂದಿಗೆ ಬೇಯಿಸಿದ ಚಿಕನ್ ಹೆಚ್ಚು ಜ್ಯೂಸಿ ಹಾಗೂ ರುಚಿಕರವಾಗಿರುತ್ತದೆ.​ಆರೋಗ್ಯವಂತ ವ್ಯಕ್ತಿಗಳು ಮಿತ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ.

ಚಿಕನ್​ ಸ್ಕಿನ್ ತಿನ್ನುವಾಗ ತೆಗೆದುಕೊಳ್ಳಬೇಕಾದ ಜಾಗರೂಕತೆ

ಚಿಕನ್ ಸ್ಕಿನ್‌ನಲ್ಲಿ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಾಗಿರುವುದರಿಂದ ಇದನ್ನು ಎಲ್ಲರೂ ತಿನ್ನಲು ಸಾಧ್ಯವಿಲ್ಲ.
ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಚಿಕನ್​ ಬದಲಾಗಿ ಪರ್ಯಾಯ ಮಾಂಸ ಸೇವನೆ ಮಾಡುವುದು ಉತ್ತಮ. ಚಿಕನ್​ನಿಂದಾಗಿ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಾಗುವ ಸಾಧ್ಯತೆ ಇರಲಿದೆ. ಇನ್ನು ​ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವವರು ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದು.

ಹೇಗೆ ತಿಂದರೆ ಬೆಸ್ಟ್​​

ಎಣ್ಣೆಯಲ್ಲಿ ಡೀಪ್​ ಫ್ರೈ ಮಾಡಿದ ಚಿಕನ್​ ತಿನ್ನುವುದಕ್ಕಿಂತಲೂ ಗ್ರಿಲ್​ ಮಾಡಿದ ಚಿಕನ್ ಆಯ್ಕೆ ಮಾಡಿಕೊಳ್ಳಬೇಕು. ವಾರಕ್ಕೊಮ್ಮೆ ಚಿಕನ್ ತಿನ್ನುವುದು ಸಮತೋಲಿತ ಆಹಾರಕ್ಕೆ ಸಹಾಯವಾಗುತ್ತದೆ. ​ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನದೇ ನಿಯಂತ್ರಿತವಾಗಿ ತಿನ್ನಬೇಕು.

​ಆರೋಗ್ಯ ತಜ್ಞರು ಹೇಳೋದೇನು?

ಅಪರೂಪಕ್ಕೊಮ್ಮೆ ಚಿಕನ್​ ಸ್ಕಿನ್​ ತಿನ್ನಬಹುದು.ಆದರೆ ಹೃದಯ ಕಾಯಿಲೆ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಚಿಕನ್​ ಸ್ಕಿನ್​ ಲೆಸ್ ತಿನ್ನೋದೆ ಬೆಸ್ಟ್​​​.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net