ಹೀಗೆ ಉಂಗುರ ಸಿಲುಕಿಕೊಂಡಾಗ ಜನರು ಸಾಮಾನ್ಯವಾಗಿ ಭಯಭೀತರಾಗುತ್ತಾರೆ. ಗಾಬರಿಯಲ್ಲಿ ಅದನ್ನು ಬಲವಂತವಾಗಿ ಎಳೆದು ತೆಗೆಯಲು ಪ್ರಯತ್ನಿಸುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಬೆರಳಿನ ಚರ್ಮವು ಸಿಪ್ಪೆ ಸುಲಿಯುತ್ತದೆ, ರಕ್ತ ಒಸರಬಹುದು ಮತ್ತು ಬೆರಳು ಕೆಂಪಗಾಗಿ ಊತ ಮತ್ತಷ್ಟು ಹೆಚ್ಚಾಗುತ್ತದೆ. ಬೆರಳಿಗೆ ರಕ್ತ ಪರಿಚಲನೆ ಸ್ಥಗಿತಗೊಂಡಾಗ ನೋವು ಅಸಹನೀಯವಾಗುತ್ತದೆ. ಕೊನೆಗೆ ಬೇರೆ ದಾರಿ ಕಾಣದೆ ಆಭರಣವನ್ನು ಕತ್ತರಿಸಲು ಮುಂದಾಗುತ್ತಾರೆ. ಆದರೆ, ನಿಮ್ಮ ಅಮೂಲ್ಯವಾದ ಉಂಗುರಕ್ಕೆ ಯಾವುದೇ ಹಾನಿ ಮಾಡದೆ, ಬೆರಳಿಗೂ ನೋವಾಗದಂತೆ ಅತ್ಯಂತ ಸರಳವಾಗಿ ಅದನ್ನು ಹೊರತೆಗೆಯಲು ಕೆಲವು ಅದ್ಭುತ ಗೃಹೋಪಾಯಗಳು ಇಲ್ಲಿವೆ.