Instagram ನಲ್ಲಿ ವೀಕ್ಷಕರು ಹೆಚ್ಚಾಗಲು ಈ ಮೂರು ಅಂಶ ಕಾರಣ! Instagram

instagram
Published on

Instagram ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಪ್ರಸ್ತುತ ಸಮಯದಲ್ಲಿ ಪ್ರಪಂಚದಾದ್ಯಂತ ಅತೀ ಹೆಚ್ಚು ಜನರು ಉಪಯೋಗಿಸುತ್ತಿರುವ ಅಪ್ಲಿಕೇಶನ್​ ಅಂದ್ರೆ ಅದು Instagram ಎಂದು ಹೇಳಬಹುದು. ಹೆಚ್ಚಿನ ಜನರು ರೀಲ್‌ಗಳನ್ನು ನೋಡಲು ಮತ್ತು ಹೊಸ ಹೊಸ ಪೋಸ್ಟ್ ಮಾಡಲು Instagram ಅನ್ನು ಬಳಸುತ್ತಾರೆ. ಆಗಾಗ ಗ್ರಾಹಕರಿಗಾಗಿ ಕಂಪನಿಯು ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಲೇ ಇರುತ್ತದೆ. ರೀಲ್‌ಗಳಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಹಾಗೂ ಫಾಲೋವರ್ಸ್​ ಹೆಚ್ಚಾಗಲು ಸಹಾಯ ಮಾಡುವ Instagram ಕೆಲವು ಅಂಶಗಳ ಬಗ್ಗೆ ತಿಳಿಯೋಣ.

ನಾವೀನ್ಯತೆ

ಇತ್ತೀಚೆಗೆ Instagram ಗೆ Ai ನ್ನು ಸೇರಿಸಲಾಗಿದೆ. ನೀವು Instagram ಅನ್ನು ಓಪನ್​ ಮಾಡಿದಾಗಲೆಲ್ಲಾ ಮೆಸೇಜ್​ ಬರುವುದು ಹಾಗೂ ನೀವು ಏನನ್ನಾದರೂ ನೋಡಬೇಕೆಂದರೆ ಅದನ್ನು ಅಲ್ಲಿ ಹುಡುಕಬಹುದು. ಮೆಟಾದ ಈ AI ಉಪಕರಣದ ಸಹಾಯದಿಂದ ನೀವು ಯಾವುದೇ ವಿಷಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದಲ್ಲದೆ AI ಸಾಧನವು ರೀಲ್ಸ್‌ಗೆ ಸಂಬಂಧಿಸಿದ ಉತ್ತಮ ಸಲಹೆಗಳನ್ನು ನಿಮಗೆ ನಿರಂತರವಾಗಿ ನೀಡುತ್ತದೆ.

AI ಸ್ಟಿಕ್ಕರ್‌ಗಳು

ನಿಮಗೆ ಅಗತ್ಯವಿರುವ AI ಸ್ಟಿಕ್ಕರ್‌ಗಳನ್ನು ನೀವು ಪಡೆದುಕೊಂಡು ನಿಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸುತ್ತೀರಿ. ನೀವು ಕ್ಲಿಕ್ ಮಾಡಿದ ತಕ್ಷಣ, ನಿಮಗೆ AI ಚಿತ್ರದ ಆಯ್ಕೆಯನ್ನು ತೋರಿಸಲಾಗುತ್ತದೆ. ನೀವು ಈ ಸ್ಟಿಕ್ಕರ್‌ಗಳನ್ನು ಸಹ ಡೌನ್‌ಲೋಡ್ ಮಾಡಬಹುದು. ಹಾಗೂ ನೀವು ಅವುಗಳನ್ನು ನಿಮ್ಮಿಷ್ಟದಂತೆ ನಿಮ್ಮ ಪೋಸ್ಟ್ ಮೇಲೆ ಉಪಯೋಗಿಸಿಕೊಳ್ಳಬಹುದು.

ಟೆಂಪ್ಲೇಟ್‌ಗಳ ಬಳಕೆ

ನೀವು Instagram ನಲ್ಲಿ ರೀಲ್‌ಗಳಿಗಾಗಿಯೇ ಸಿಗುವ ಹೊಸ ಟೆಂಪ್ಲೇಟ್‌ಗಳನ್ನು ನೋಡುತ್ತೀರಿ. ಇದು ನಿಮ್ಮ ರೀಲ್‌ಗಳನ್ನು ಇನ್ನಷ್ಟು ಅದ್ಭುತವಾಗಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೆಚ್ಚು ಹೆಚ್ಚು ಜನರು ನಿಮ್ಮ ಖಾತೆಯನ್ನು ತೆರೆದು ನೋಡಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಖಾತೆಯ ಫಾಲೋವರ್ಸ್​ಗಳು ಹೆಚ್ಚಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net