ಇನ್ಸ್ಟಾಗ್ರಾಮ್ ಇನ್ಸ್ಟಂಟ್ ಎಂದರೆ ಇದೊಂದು ರೀತಿಯ ಸ್ನ್ಯಾಪ್ಚಾಟ್ ಫೀಚರ್ ಇದ್ದಂತೆ. ನಾವು ಕ್ಷಣಕ್ಕೂ ಮಾಹಿತಿ ಹಂಚಿಕೊಳ್ಳಬಹುದು. ಉದಾಹರಣೆಗೆ: ಎಲ್ಲಿದ್ದೇವೆ, ಶಾಪಿಂಗ್ನಲ್ಲಿ ಕೊಂಡುಕೊಂಡಿದ್ದೇನು, ಸೂರ್ಯನ ಪ್ರಖರತೆ, ಚಂದ್ರನ ಶಾಂತಿಯುತ ಬೆಳದಿಂಗಳು, ನಕ್ಷತ್ರಗಳು, ಮಳೆ, ಸ್ಪೆಷಲ್ ತಿಂಡಿ ಊಟ ಹೀಗೆ ನಾನಾ ರೀತಿಯಲ್ಲಿ ಫಿಲ್ಟರ್ ಮಾಡದ ಫೋಟೋಗಳನ್ನು ಹಂಚಿಕೊಳ್ಳಬಹುದು. ಇದನ್ನು ನಿಮ್ಮ ಫಾಲೋವರ್ಗಳು ಕೆಲ ಕ್ಷಣ ನೋಡಬಹುದು. ಇವನ್ನು ಒಂದು ವರ್ಷದವರೆಗೂ Archiveನಲ್ಲಿ ಉಳಿಸಿಕೊಳ್ಳಬಹುದಾಗಿದೆ.