

ಪ್ರಮುಖ ಮುಖ್ಯಾಂಶಗಳು
ಹಣದುಬ್ಬರದಿಂದಾಗಿ ಮಿಲೇನಿಯಲ್ಸ್ ಮತ್ತು ಜೆನ್ ಜಿ ಯುವಜನರು ದುಬಾರಿ ಹೋಟೆಲ್, ಪಬ್‌ಗಳ ಬದಲಿಗೆ ಕಡಿಮೆ ಖರ್ಚಿನ ಅಥವಾ ಬಜೆಟ್-ಫ್ರೆಂಡ್ಲಿ ಡೇಟಿಂಗ್ ಶೈಲಿಯನ್ನು ಅಳವಡಿಸಿಕೊಳ್ಳುತ್ತಿರುವುದೇ ಈ ಟ್ರೆಂಡ್
Infladating.
ಮನೆಯಲ್ಲೇ ಅಡುಗೆ ಮಾಡಿಕೊಂಡು ಸವಿಯುವಂತಹ ಕಡಿಮೆ ಖರ್ಚಿನ ಹಾಗೂ ಅರ್ಥಪೂರ್ಣ ಅನುಭವಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ
ಸ್ಟ್ರೀಟ್ನಲ್ಲಿ ಕಾಫಿ ಡೇಟ್ ಮಾಡೋದನ್ನು ನೋಡಿದ್ದೇನೆ. ಮನಸ್ಸಿನ ಶಾಂತಿಗಾಗಿ ಏನೂ ಖರೀದಿ ಮಾಡದೆ ಹೋದರು ಕೆಲವರು ಎಂಜಿ ರೋಡ್, ಟ್ರಿನಿಟಿ, ಜಯನಗದ ಬೀದಿಯಲ್ಲಿ ಕೈ ಹಿಡಿದು ಸುತ್ತಾಡೋದು ಕಂಡಿದ್ದೇನೆ. ಸದ್ಯ ಈ ಬೆಳವಣಿಗೆ ನಮ್ಮಲ್ಲಿ ಆರ್ಥಿಕ ಜವಾಬ್ದಾರಿ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ, ಸರಳವಾಗಿ ಬದುಕುವ ಮನೋಭಾವವನ್ನು ಬೆಳೆಸುತ್ತಿದೆ. ಆದರೆ, ಹಣ ಉಳಿತಾಯದ ಜೊತೆಗೆ ಸಂಬಂಧದಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವಕ್ಕೂ ಸಮಾನ ಆದ್ಯತೆ ನೀಡುವುದು ಇವುಗಳನ್ನು ಅರ್ಥಮಾಡಿಕೊಂಡು ಜೇವನ ನೆಡೆಸುವುದು ಮುಖ್ಯ ಎಂದು ಜೆನ್ ಜಿ ಪೀಳಿಗೆಗೆ ಸೇರುವ ಉದ್ಯೋಗಿ ಪ್ರಶಾಂತಿ ಹೇಳ್ತಾರೆ.
'ಮೊದಲಿನಂತೆ ಶೋ ಆಫ್ ಹಾಗೂ ಇಂಪ್ರೆಸ್ ಮಾಡಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವುದು ಈಗಿಲ್ಲ.. ನೇರಾನೇರವಾಗಿ ತಮ್ಮ ಸಂಗಾತಿಯೊಂದಿಗೆ ನನ್ನ ಹತ್ರ ಬಜೆಟ್ ಕಡಿಮೆ ಇದೆ ಅನ್ನೋದನ್ನು ಮುಕ್ತವಾಗಿ ಒಪ್ಪಿಕೊಳ್ಳೋ ಪ್ರವೃತ್ತಿ ಈಗಿನ ಜನರಲ್ಲಿದೆ. ಸುಖಾಸುಮ್ಮನೆ ನೀರಿನಂತೆ ಹಣ ಖರ್ಚು ಮಾಡೋದ್ರಿಂದ ನಮ್ಮ ಸಂಬಂಧ ಗಟ್ಟಿಯಾಗಲ್ಲ... ನಮ್ಮಿಷ್ಟಪಟ್ಟವರ ಜೊತೆಗೆ ಕ್ವಾಲಿಟಿ ಸಮಯ ಕಳೆದು, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಬಾಳುವುದೇ ಮುಖ್ಯ ಅನ್ನೋ ಅರಿವು ಇಂದಿನ ಪೀಳಿಗೆಯಲ್ಲಿ ಹೆಚ್ಚಾಗುತ್ತಿದೆ. ಇದು ನವ ಭಾರತ ಕಟ್ಟುವಲ್ಲಿಯೂ ಕೂಡ ಸಾಕಷ್ಟು ಸಹಾಯವಾಗಲಿದೆ.' ಎಂದು ಮಿಲೇನಿಯಲ್ಸ್
ಉದ್ಯೋಗಿ ಚೇತನ್ ಹೇಳಿದರು.