1 ನಿಮಿಷದ ವ್ಯಾಯಾಮದಿಂದ ನಿಮ್ಮ ಹೈಟ್​ ಹೆಚ್ಚಿಸಿಕೊಳ್ಳಿ; ಹೇಗಂತೀರಾ, ಇಲ್ಲಿದೆ ಮಾಹಿತಿ.. | Exercise

dk - 2025-03-04T154320.440
Published on

Exercise: ವ್ಯಾಯಾಮದ ಕೊರತೆ ಮತ್ತು ದೀರ್ಘಕಾಲ ಕುಳಿತುಕೊಳ್ಳುವುದು ಸೇರಿದಂತೆ ಆನೇಕ ಅಭ್ಯಾಗಳಿಂದ ನಿಮ್ಮ ಬೆನ್ನು ಮೂಳೆ ಸಂಕುಚಿತಗೊಂಡು ಕಳಪೆ ಭಂಗಿಯಿಂದ ಬಳಲುತ್ತಾರೆ. ಕಾಲಾನಂತರದಲ್ಲಿ ಈ ಕೆಟ್ಟ ಭಂಗಿಯೂ ಬೆನ್ನುಮೂಳೆಯನ್ನು ಸಂಕುಚಿತಗೊಳಿಸಿ ನಿಮ್ಮನ್ನು ಎತ್ತರಕ್ಕೆ ಬೆಳೆಯುವುದನ್ನು ತಡೆಹಿಡಿದು ನಿಮ್ಮನ್ನು ಕುಳ್ಳರನ್ನಾಗಿಸಬಹುದು.

ಹೀಗಾಗಿ, ನೀವು ಪ್ರತಿದಿನ ಮಾಡುವ ಒಂದು ನಿಮಿಷದ ವ್ಯಾಯಾಮ, ನಿಮ್ಮ ಭಂಗಿಯನ್ನು ಸರಿ ಮಾಡುವುದರ ಜತೆಗೆ ನಿಮ್ಮನ್ನು ಎತ್ತರವಾಗಿ ಬೆಳೆಯುವಂತೆ ಮಾಡುತ್ತದೆ.

ಕಳಪೆ ಭಂಗಿಯು ನಿಮ್ಮ ಎತ್ತರದ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ವ್ಯಾಯಾಮ ಮಾಡುವ ಮೊದಲು ಭಂಗಿಯು ನಿಮ್ಮ ಎತ್ತರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಮೊಬೈಲ್​ ನೋಡುತ್ತಾ ಬಾಗುವುದು, ಕುಣಿಯುವುದು ಮತ್ತು ಅಸಮತೋಲಿತ ಕುಳಿತುಕೊಳ್ಳುವ ಸ್ಥಾನವು ಕಶೇರುಖಂಡಗಳನ್ನು ಸಂಕುಚಿತಗೊಳಿಸಬಹುದು. ಇದು ನಿಮ್ಮ ನೈಸರ್ಗಿಕ ಎತ್ತರವನ್ನು ಕಡಿಮೆ ಮಾಡುತ್ತದೆ. ಈ ಬೆನ್ನುಮೂಳೆಯ ಸಂಕೋಚನವು ಬಾಗಿದ ಬೆನ್ನುಮೂಳೆ, ದುಂಡಾದ ಭುಜಗಳು ಮತ್ತು ಮುಂದಕ್ಕೆ ತಲೆಯ ಭಂಗಿಗೆ ಕಾರಣವಾಗುತ್ತದೆ, ಇದು ನಿಮ್ಮನ್ನು ಕುಳ್ಳಾಗಿ ಕಾಣುವಂತೆ ಮಾಡುತ್ತದೆ ಮಾತ್ರವಲ್ಲದೆ ಬೆನ್ನು ಮತ್ತು ಕುತ್ತಿಗೆ ನೋವನ್ನು ಸಹ ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಒಂದು ನಿಮಿಷದ ವ್ಯಾಯಾಮ ನಿಮ್ಮ ಭಂಗಿಯನ್ನು ಸರಿ ಮಾಡುತ್ತೆ

ನಿಮ್ಮ ಭಂಗಿಯನ್ನು ಸರಿಪಡಿಸಲು ಮತ್ತು ಎತ್ತರಕ್ಕೆ ಬೆಳೆಯಬೇಕೆಂದರೆ ಅದಕ್ಕೆ ಪರಿಣಾಮಕಾರಿ ವ್ಯಾಯಾಮ ವಾಲ್​ ಸ್ಟ್ರೇಚ್​(Wall Strech Exercise). ಇದನ್ನು ವ್ಯಾಯಾಮ ಮಾಡುವುದರಿಂದ ಬೆನ್ನು ಮೂಳೆ ಹಿಗ್ಗುತ್ತದೆ. ಭಂಗಿ ಸ್ನಾಯುಗಳು ಬಲಗೊಳ್ಳುತ್ತದೆ. ಅಲ್ಲದೆ, ದೇಹದ ಬೆನ್ನು ಮೂಳೆ ನೈಸರ್ಗಿಕ ಸ್ಥಾನಕ್ಕೆ ಮರುಸೇರ್ಪಡೆಗೊಳ್ಳುತ್ತೆ.

ವ್ಯಾಯಾಮ ಮಾಡೋದೇಗೆ..?

ನಿಮ್ಮ ಬೆನ್ನನ್ನು ಗೋಡೆಗೆ ನೇರವಾಗಿ ಇರಿಸಿ ನಿಂತುಕೊಳ್ಳಿ. ನಿಮ್ಮ ಹಿಮ್ಮಡಿಗಳು, ಭುಜದ ಬೆನ್ನಿನ ಭಾಗ ಗೋಡೆಗೆ ತಾಕುವಂತೆ ಖಚಿತಪಡಿಸಿಕೊಳ್ಳಿ. ನಿಮ್ಮ ಪಾದಗಳನ್ನು ಗೋಡೆಯಿಂದ ಆರು ಇಂಚು ದೂರು ಇರುವಂತೆ ನೋಡಿಕೊಳ್ಳಿ.

ನಿಮ್ಮ ತೋಳುಗಳನ್ನು ಭುಜದ ಎತ್ತರಕ್ಕೆ ಮೇಲಕ್ಕೆತ್ತಿ, ಮೊಣಕೈಗಳನ್ನು 90 ಡಿಗ್ರಿ ಕೋನದಲ್ಲಿ ಬಾಗಿಸಿ, ಗೋಲ್‌ಪೋಸ್ಟ್ ಸ್ಥಾನದಂತೆ ಇರಿಸಿ. ನಿಮ್ಮ ಮಣಿಕಟ್ಟುಗಳು ಮತ್ತು ಮೊಣಕೈಗಳನ್ನು ಗೋಡೆಯ ಸಂಪರ್ಕದಲ್ಲಿ ಇರಿಸಿ.

ಗೋಡೆಯೊಂದಿಗೆ ಸಂಪರ್ಕವನ್ನು ಉಳಿಸಿಕೊಂಡು ನಿಧಾನವಾಗಿ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ, ನಂತರ ಅವುಗಳನ್ನು ಆರಂಭಿಕ ಸ್ಥಾನಕ್ಕೆ ತನ್ನಿ. ಒಂದೆರೇಡು ಬಾರಿ ಇದನ್ನೇ ಪುನಾರವರ್ತಿಸಿ. ನೀವು ಪ್ರತಿದಿನ ಮಾಡುವ ಒಂದು ನಿಮಿಷದ ವ್ಯಾಯಾಮ, ನಿಮ್ಮ ಭಂಗಿಯನ್ನು ಸರಿ ಮಾಡುವುದರ ಜತೆಗೆ ನಿಮ್ಮನ್ನು ಎತ್ತರವಾಗಿ ಬೆಳೆಯುವಂತೆ ಮಾಡುತ್ತದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net