

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು ಪ್ರತಿದಿನ ಸ್ನಾನ ಮಾಡುವ ನೀರಿನಲ್ಲಿ ಕೆಲವು ವಿಶೇಷ ವಸ್ತುಗಳನ್ನು ಹಾಕಿ ಸ್ನಾನ ಮಾಡಿದರೆ ನಿಮ್ಮ ಸಮಸ್ಯೆಗಳು ಮತ್ತು ಆರ್ಥಿಕ ನಷ್ಟಗಳು ಕ್ರಮೇಣ ಕಣ್ಮರೆಯಾಗುತ್ತವೆ ಅದೃಷ್ಟ ಖುಲಾಯಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ನಾವು ಇಂದು ನಿಮಗೆ ಈ ಕುರಿತಾಗಿ ತಿಳಿಸಿಕೊಡಲಿದ್ದೇವೆ.
ಸ್ನಾನ ಮಾಡಲು ಸಿದ್ಧ ಮಾಡಿಕೊಂಡ ನೀರಿಗೆ ಸ್ವಲ್ಪ ಶ್ರೀಗಂಧದ ಪುಡಿ ಬೆರೆಸಿ ಸ್ನಾನ ಮಾಡಿದರೆ, ಯಶಸ್ಸು, ಸಂಪತ್ತು ಮತ್ತು ಖ್ಯಾತಿಯನ್ನು ತರುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ಬೇವೂ ಕೂಡ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಅದೃಷ್ಟವನ್ನೂ ತರುತ್ತದೆ.
ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಬಹಳಷ್ಟು ಒಳ್ಳೆಯದನ್ನು ಮಾಡುತ್ತದೆ. ಅಂತೆಯೇ, ನೀವು ಗುಲಾಬಿ ದಳಗಳು ಸ್ನಾನಕ್ಕಿಟ್ಟ ನೀರಿನಲ್ಲಿ ಹಾಕಿಕೊಳ್ಳಬಹುದು.
ಅರಿಶಿನವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದು ತುಂಬಾ ಒಳ್ಳೆಯದು. ಹೀಗೆ ಮಾಡಿದರೆ ಶುಭವಾಗಲಿ. ನಕಾರಾತ್ಮಕ ಶಕ್ತಿ ನಷ್ಟವಾಗುತ್ತದೆ. ಅದೃಷ್ಟಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗುತ್ತದೆ.
(ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ.)