ಕೂದಲುಗಳ ರಕ್ಷಣೆಗಾಗಿ ಈ ಪೇಸ್ಟ್​ಗಳನ್ನು ಬಳಸಿ! | Hair treatment

untitled-design-2025-10-01t162138259-68dd07c1c0975
Published on

Hair treatment: ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಮಲಗಿ ಎದ್ದ ನಂತರ ದಿಂಬಿನ ಮೇಲೆ ಕೂದಲುಗಳ ರಾಶಿಯನ್ನೇ ಕಾಣಬಹುದು. ಇದನ್ನು ನೋಡಿದ ತಕ್ಷಣವೇ ಜನರು ಭಯಭೀತರಾಗುತ್ತಾರೆ. ಈ ಸಮಸ್ಯೆಗಾಗಿ ಜನರು ಔಷಧಿಗಳನ್ನು ಬಳಸುವುದು, ಸಲೂನ್​ಗಳಲ್ಲಿ ಚಿಕಿತ್ಸೆ ಪಡೆಯುವಂತಹ ನಿರ್ಧಾರಗಳನ್ನು ಮಾಡುತ್ತಾರೆ. ಆದರೂ ಇದು ನಿಯಂತ್ರಣದಲ್ಲಿರುವುದಿಲ್ಲ. ಹಾಗಾಗಿ ನಿಮ್ಮ ಕೂದಲು ತುಂಬಾ ಉದುರುತ್ತಿದ್ದರೆ ಈ ರೀತಿಯ ಸಲಹೆಗಳನ್ನು ಪಾಲಿಸಿ...

1. ಮೊಸರಿನ ಹೇರ್​ ಪ್ಯಾಕ್

ಮೊಸರನ್ನು ನೈಸರ್ಗಿಕವಾಗಿ ಹೇರ್​ ಕಂಡೀಷನ್​ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿದ್ದು, ಇದು ಕೂದಲನ್ನು ಒಳಗಿನಿಂದ ಬಲಪಡಿಸುತ್ತದೆ. ಮೊಸರನ್ನು ತಲೆಗೆ ಹಚ್ಚುವುದರಿಂದ ಕೂದಲು ಒಣಗಿದ, ಒಡೆದ ಭಾಗಗಳನ್ನು ಮೃದುವಾಗಿ ಮಾಡುತ್ತದೆ. ಇದು ತಲೆಯ ಹೊಟ್ಟನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ತಲೆಗೆ ಹಚ್ಚುವುದರಿಂದ ಕೂದಲಿಗೆ ಬೇಕಾದ ತೇವಾಂಶವನ್ನು ಒದಗಿಸುತ್ತದೆ. ಇದು ನೆತ್ತಿಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

2. ಮೆಂತ್ಯ ಪೇಸ್ಟ್

​ಮೆಂತ್ಯವು ನಿಕೋಟಿನ್​ ಆಮ್ಲ ಮತ್ತು ಲೆಸಿಥಿನ್ ನಂತಹ ಪೋಷಕಾಂಶಗಳನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಯ ದರವನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ನೆನಸಿ ಅದನ್ನು ಮಿಕ್ಸಿ ಮಾಡಿ ಪೇಸ್ಟ್​ನ್ನು ಹಚ್ಚುವುದರಿಂದ ಇದು ತಲೆಯ ತುರಿಕೆ, ಹೊಟ್ಟು, ನೆತ್ತಿಯ ಮೇಲಿನ ಸಾಂಕ್ರಾಮಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಕೂದಲನ್ನು ದಪ್ಪ ಮತ್ತು ಆಳವಾಗಿ ಪೋಷಿಸುತ್ತದೆ.

3. ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಕೂದಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್​ ಇ ಇದ್ದು, ಕೂದಲನ್ನು ಆಳವಾಗಿ ಪೋಷಿಸುತ್ತದೆ. ಇದು ಕೂದಲಿನ ತೇವಾಂಶವನ್ನು ಉಳಿಸುಕೊಳ್ಳುತ್ತದೆ. ಸೀಳಿದ ತುದಿಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ವಯೋಮಾನದವರು ಬಳಸುತ್ತಾರೆ, ಏಕೆಂದರೆ ಇದು ನೈಸರ್ಗಿಕ, ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ.

4. ಕ್ಯಾಸ್ಟರ್ ಆಯಿಲ್‌ ಬಳಕೆ

ಕ್ಯಾಸ್ಟರ್ ಆಯಿಲ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ರಿಸಿನೋಲಿಕ್ ಆಮ್ಲವು ನೆತ್ತಿಯನ್ನು ಪೋಷಿಸುತ್ತದೆ ಜೊತೆಗೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಈ ಎಣ್ಣೆಯನ್ನು ಬಳಸುವುದರಿಂದ ನೆತ್ತಿ ಪೋಷಣೆ ಮಾಡಲು ಸಹಾಯ ಮಾಡುತ್ತದೆ. ಇದು ಕೂದಲನ್ನು ತುದಿಯವೆರೆಗೂ ಬಲಪಡಿಸಲು ಸಹಾಯ ಮಾಡುತ್ತದೆ.

ಉಪಯೋಗಿಸುವುದು ಹೇಗೆ?

ಮೊಸರು, ಮೆಂತ್ಯ ಬೀಜಗಳು, ತೆಂಗಿನ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಬೆರೆಸಿ ತಯಾರಿಸಿದ ಪ್ಯಾಕ್ ಕೂದಲಿಗೆ ಹಚ್ಚುವುದರಿಂದ ಇದು ಕೂದಲನ್ನು ಪೋಷಿಸುವುದರ ಜೊತೆಗೆ ಸಮೃದ್ಧಿಯಾಗಿ ಬೆಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ 2 ಟೀ ಚಮಚ ಮೆಂತ್ಯೆ ಬೀಜಗಳಿಗೆ ಮೊಸರನ್ನು ಹಾಕಿ ರಾತ್ರಿ ಇಡೀ ನೆನಸಿ ಅದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆ ಹಾಗೂ ಕ್ಯಾಸ್ಟಲ್​ ಆಯಿಲ್​ ಸೇರಿಸಿ ಪೇಸ್ಟ್​ ಮಾಡಿ. ನಂತರ ಅದನ್ನು ನಿಮ್ಮ ತಲೆಗೆ ಹಚ್ಚಿ 3 ಗಂಟೆಗಳ ಬಿಟ್ಟು ತೊಳೆಯಿರಿ. ಇದು ಕೂದಲಿನ ಒಳಗಿನಿಂದ ಪೋಷಣೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ, ತಲೆಯ ಸೋಂಕು, ತುರಿಕೆ, ಕಿರಿಕಿರಿ, ತಲೆಯ ಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net