

Transgender: ಸಮಾಜದ ಜನಪ್ರಿಯ ನಂಬಿಕೆಗಳಲ್ಲಿ ಮಂಗಳಮುಖಿಯರಿಂದ ಪಡೆದ ಒಂದು ರೂಪಾಯಿ ನಾಣ್ಯ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಆ ಒಂದು ರೂಪಾಯಿ ನಿಜವಾಗಿಯೂ ನಮ್ಮ ಅದೃಷ್ಟ, ಸಂಪತ್ತನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ಜನರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಅನೇಕ ತಂತ್ರಗಳನ್ನು ಮತ್ತು ಪರಿಹಾರಗಳ ಮೊರೆ ಹೋಗುತ್ತಾರೆ. ನಾವು ಮಂಗಳಮುಖಿಯರೊಂದಿಗೆ ಮಾತನಾಡಿದ್ರೆ ಅವರು ಹಣ, ಧವಸ ಧಾನ್ಯ, ಬಟ್ಟೆ ಇತ್ಯಾದಿಗಳನ್ನು ಕೇಳುತ್ತಾರೆ. ಜನ ತಮಗೆ ಏನು ಕೊಡಬೇಕು ಅನ್ನಿಸುತ್ತದೆಯೋ ಅದನ್ನು ಕೊಡುತ್ತಾರೆ. ಆದರೆ ಅವರು ವಿಶೇಷವಾಗಿ ಒಂದು ರೂಪಾಯಿ ನಾಣ್ಯ ವಾಪಸ್ ಕೊಟ್ಟರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.
ಹಿಂದು ಧರ್ಮದ ಪುರಾಣ, ಜ್ಯೋತಿಷ್ಯ ಶಾಸ್ತ್ರಗಳು ಏನು ಹೇಳುತ್ತವೆ?
ಹಿಂದು ಧರ್ಮದ ಗ್ರಂಥ, ಪುರಾಣಗಳಲ್ಲಿಯೂ ಮಂಗಳಮುಖಿಯರ ಬಗ್ಗೆ ವಿವರಣೆ ಕಂಡು ಬರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳಮುಖಿಯರು ಬುಧ ಗ್ರಹಕ್ಕೆ ಸಂಬಂಧಿಸಿರುತ್ತಾರೆ. ಮಂಗಳಮುಖಿಯರಿಗೆ ಹಣ ಅಥವಾ ದೇಣಿಗೆ ನೀಡುವುದರಿಂದ ಶುಭ ಕಾರ್ಯ ನಡೆಯುತ್ತದೆ ಎಂದು ಹೇಳಲಾಗುತ್ತದೆ.
ಮಂಗಳಮುಖಿಯರಿಂದ ಒಂದು ರೂಪಾಯಿ ಪಡೆದರೆ, ಅದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಅವರು ಕೇಳದೆಯೇ ನಿಮಗೆ ಒಂದು ರೂಪಾಯಿ ನಾಣ್ಯ ನೀಡಿದರೆ, ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಮತ್ತು ಆರ್ಥಿಕ ತೊಂದರೆಗಳು ದೂರವಾಗುತ್ತವೆ ಎಂಬುದರ ಸಂಕೇತವಾಗಿದೆ ಎಂದು ಪರಿಗಣಿಸಬಹದು.
1 ರೂಪಾಯಿ ಜೊತೆಗೆ 2, 5 ಅಥವಾ 10 ರೂಪಾಯಿಗಳನ್ನು ಪಡೆಯುವುದು ಸಹ ಶುಭ. ಆದರೆ ನೀವು ಅವರಿಂದ ಹಣವನ್ನು ಕೇಳಬಾರದು. ಮಂಗಳಮುಖಿ ತನ್ನ ಸ್ವಂತ ಇಚ್ಛೆಯಿಂದ ನಿಮಗೆ ಹಣವನ್ನು ನೀಡಿದ್ರೆ ಮಾತ್ರ ಅದು ನಿಮಗೆ ಒಳ್ಳೆಯದಾಗುತ್ತದೆ. ಒಂದು ವೇಳೆ ದುರಾಸೆಯಿಂದ ನೀವೇ ಅವರತ್ತಿರ ಕೇಳಿ ನಾಣ್ಯ ಪಡೆದರೆ ಯಾವುದೇ ಪ್ರಯೋಜವಾಗುವುದಿಲ್ಲ.
ಮಂಗಳಮುಖಿಯರಿಂದ ಪಡೆಯುವ ಹಣದಲ್ಲಿ ಸಕಾರಾತ್ಮಕತೆ ಇರುತ್ತದೆ, ಅದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಆದ್ದರಿಂದ, ನೀವು ಅವರಿಂದ ಒಂದು ರೂಪಾಯಿ ನಾಣ್ಯವನ್ನು ಪಡೆದರೆ, ಅದನ್ನು ದೇವರ ಆಶೀರ್ವಾದವೆಂದು ಪರಿಗಣಿಸಿ ಮತ್ತು ಅದನ್ನು ಗೌರವಿಸಿ. ಹಣವನ್ನು ಖರ್ಚು ಮಾಡುವ ಬದಲು, ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ತಿಜೋರಿ ಅಥವಾ ಪರ್ಸ್‌ನಲ್ಲಿ ಇರಿಸಿಕೊಳ್ಳಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ.