ಅಸ್ತಮದಿಂದ ಬಳಲುತ್ತಿದ್ದೀರಾ ಹಾಗಿದ್ದರೆ ಈ ಮನೆಮದ್ದು ಬಳಸಿ!| Home remidies

untitled-design-2025-09-15t180448106-68c807f2887d2
Published on

 Home remidies: ಇಂದಿನ ದಿನಗಳಲ್ಲಿ ಅಸ್ತಮವು ಕೆಲವರಲ್ಲಿ ಕಡುಬರುವಂತಹ ಸಮಾನ್ಯ ಸಮಸ್ಯೆಯಾಗಿದೆ. ಇದು ದೀರ್ಘಕಾಲಿಕ ಉಸಿರಾಟದ ಕಾಯಿಲೆಯಾಗಿದ್ದು, ಇದರಿಂದ ಕೆಮ್ಮು, ಎದೆಯ ಒತ್ತಡ, ಉರಿಯೂತ ಉಂಟಾಗುತ್ತದೆ. ಇದರಿಂದ ವ್ಯಕ್ತಿಯು ಆಘಾತಕ್ಕೊಳಗಾಗುತ್ತಾನೆ. ಹಗೆಯೇ ಅಸ್ತಮಾವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದೆ ಇದ್ದರೂ, ಕೂಡಾ ಈ ಲಕ್ಷಣಗಳನ್ನು ನಿಯಂತ್ರಿಸಲು ಮನೆಮದ್ದುಗಳಲ್ಲಿ ನೀಡಲಾಗಿದೆ.

* ತುಳಸಿ ಮತ್ತು ಜೇನುತುಪ್ಪ ಸೇವಿಸಿ

ತುಳಸಿಯಲ್ಲಿ ಉರಿಯೂತ ನಿವಾರಕ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಉಸಿರಾಟದ ಮಾರ್ಗದಲ್ಲಿ ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. 6-7 ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು, ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸವಿಯಿರಿ. ಈ ರೀತಿ ಸೇವಿಸುವುದರಿಂದ ಕೆಮ್ಮು ಮತ್ತು ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಹಾಗೆಯೇ ಜೇನುತುಪ್ಪ ಗಂಟಲು ನೋವನ್ನು ಶಮನಗೊಳಿಸುತ್ತದೆ.

* ಶುಂಠಿ ಚಹ

ಶುಂಠಿಯು ಆಂಟಿ-ಇನ್‌ಫ್ಲಮೇಟರಿ ಮತ್ತು ಉಸಿರಾಟದ ಮಾರ್ಗವನ್ನು ತೆರವುಗೊಳಿಸುವ ಗುಣವನ್ನು ಹೊಂದಿದೆ. ಹಾಗಾಗಿ ಒಂದು ಕಪ್​ ನೀರಿಗೆ ಅದಕ್ಕೆ ಚಿಕ್ಕ ಶುಂಠಿಯ ತುಂಡನ್ನು ತುರಿದು, ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದು ಕಫವನ್ನು ಕರಗಿಸಲು ಸಹಾಯ ಮಾಡುವುದರ ಜೊತೆಗೆ ಉಸಿರಾಟಕ್ಕೆ ನಡೆಸಲು ಸಹಾಯವಾಗುತ್ತದೆ.

* ಆವಿಯ ಉಸಿರಾಟ

ಆವಿಯ ಉಸಿರಾಟವು ಉಸಿರಾಟದ ಮಾರ್ಗವನ್ನು ತೇವಗೊಳಿಸಿ, ಕಫವನ್ನು ಸಡಿಲಗೊಳಿಸುತ್ತದೆ. ಒಂದು ಬೌಲ್ ಬಿಸಿನೀರಿನಲ್ಲಿ 2-3 ಹನಿ ನೀಲಗಿರಿ ಎಣ್ಣೆಯನ್ನು ಬೆರೆಸಿ, ತಲೆಯ ಮೇಲೆ ಬೆಡ್​ಶೀಟ್​ ಹೊಚ್ಚಿಕೊಂಡು 10 ನಿಮಿಷ ಆವಿಯನ್ನು ತಗೆದುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮಗೆ ಉ್ತತಮವಾಗಿ ಉಸಿರಾಡಲು ಸಹಾಯ ಮಾಡತ್ತದೆ.

* ಅರಿಶಿಣದ ಹಾಲು

ಅರಿಶಿಣವು ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಒಂದು ಗ್ಲಾಸ್ ಬೆಚ್ಚಗಿನ ಹಾಲಿನಲ್ಲಿ ಅರ್ಧ ಚಮಚ ಅರಿಶಿನವನ್ನು ಬೆರೆಸಿ, ರಾತ್ರಿ ಮಲಗುವ ಮೊದಲು ಕುಡಿಯಿರಿ. ಇದು ಗಂಟಲಿನ ಉರಿಯನ್ನು ಶಮನಗೊಳಿಸುತ್ತದೆ ಮತ್ತು ಅಸ್ತಮಾ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

* ಮೆಣಸಿನಕಾಯಿ ಮತ್ತು ಜೇನುತುಪ್ಪ

ಕಪ್ಪು ಮೆಣಸಿನಕಾಳನ್ನು ಸೇವಿಸುವುದರಿಂದ ಉಸಿರಾಟದ ಮಾರ್ಗವನ್ನು ಸುಲಭವಾಗಿಸಬಹುದು. ಒಂದು ಚಿಟಿಕೆ ಕಾಳುಮೆಣಸಿನ ಪುಡಿಗೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಸವಿಯಿಇರಿ. ಇದು ಕಫವನ್ನು ಕರಗಿಸಿ ಉಸಅಇರಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮನೆಮದ್ದುಗಳು ಆಸ್ಟಮಾದ ಲಕ್ಷಣಗಳನ್ನು ತಗ್ಗಿಸಲು ಸಹಾಯ ಮಾಡಬಹುದಾದರೂ, ಇವು ವೈದ್ಯಕೀಯ ಚಿಕಿತ್ಸೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆಸ್ಟಮಾ ದಾಳಿಗಳು ತೀವ್ರವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net