ಬೊಜ್ಜಿದ್ದರೆ ಇಂತದ್ದೆಲ್ಲ ಅನಾಹುತವಾಗುತ್ತೆ!

ಬೊಜಜು
Published on
ಹಲವಾರು ಬೇನೆಗಳು (diseases) ಕೂಡ ಹೆಚ್ಚಿನ ತೂಕಕ್ಕೆ ಕಾರಣವಾಗುತ್ತವೆ. ಥೈರಾಯ್ಡ್​ ಗ್ರಂಥಿಯ ಕಡಿಮೆ ಕಾರ್ಯ, ಸ್ಟಿರಾಯಿಡ್ ಹಾಮೋನ್​ಗಳ ಹೆಚ್ಚು ತಯಾರಿಕೆ (cushing's syndrome) ಮತ್ತು ಇನ್ನೂ ಮುಟ್ಟು ಇರುವ ಹೆಣ್ಣುಮಕ್ಕಳಲ್ಲಿ, ಅಂಡಾಣುವಿನಲ್ಲಿ (ovary) ತೊಂದರೆಯಿಂದ (Polycystic ovary syndrome - PCOS), ಬಂಜೆತನ, ಮಕ್ಕಳಾಗುವ ಸಾಧ್ಯತೆ ಕಡಿಮೆ. ನೂರಕ್ಕೆ ಹತ್ತು ಮಹಿಳೆಯರಲ್ಲಿ ಮುಖದ ಮೇಲೆ ಕೂದಲುಗಳು ಕಂಡುಬರುತ್ತವೆ. ಸುದೈವವಶಾತ್ ಈ ಎಲ್ಲ ಬೇನೆಗಳಿಗೂ ಚಿಕಿತ್ಸೆ ಇದೆ.

ಕೊಬ್ಬು ಹೆಚ್ಚುವಿಕೆಯಿಂದ ಆಗುವ ತೊಂದರೆಗಳಲ್ಲಿ ಮುಖ್ಯವಾದವುಗಳೆಂದರೆ ಹೃದಯಾಘಾತ, ಬಿ.ಪಿ., ಪಾರ್ಶ್ವವಾಯು, ಟೈಪ್-2 ಮಧುಮೇಹ, ಸ್ತನ-ಮೂತ್ರಪಿಂಡ ಮತ್ತು ಗರ್ಭಕೋಶದ ಕ್ಯಾನ್ಸರ್​ನಲ್ಲಿ ಹೆಚ್ಚಳ. ನಿದ್ರೆಯಲ್ಲಿ ಗೊರಕೆ ಹೊಡೆಯುವುದು, ನಿದ್ರೆಯಲ್ಲಿ ಅಲ್ಪಾವಧಿ ಉಸಿರಾಟ ಬಂದ್ ಆಗುವುದು (Apnoea), ಪಿತ್ತಕೋಶದಲ್ಲಿ ಹರಳು (Gallstones), ಮೊಣಕಾಲು ನೋವು (Knee osteoarthritis),, ಮುಟ್ಟಿನಲ್ಲಿ ಏರುಪೇರು ಮುಂತಾದವುಗಳು. ಈ ದೈಹಿಕ ತೊಂದರೆಗಳಲ್ಲದೆ, ಮಾನಸಿಕವಾಗಿ ಇವರು ತೀವ್ರತರ ಖಿನ್ನಾವಸ್ಥೆಗೆ (depression) ಹೋಗುವುದೂ ಉಂಟು.

ಶಾಲಾ ಕಾಲೇಜುಗಳಲ್ಲಿ ಬೊಜ್ಜು ಇರುವ ಮಕ್ಕಳಿಗೆ ಜೊತೆಗಿರುವ ಮಕ್ಕಳಿಂದ (Peer Pressure)ಮುಜುಗರಕ್ಕೆ ಗುರಿಯಾಗುವುದು ಕೂಡ ಸಾಮಾನ್ಯ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಕೂಡ ಕಡಿಮೆ. ಇದರಿಂದಾಗಿ ಇಂಥವರು ಸಾಮಾಜಿಕ ಸಂಪರ್ಕದಿಂದ ದೂರ ಉಳಿಯುವ ಪ್ರಸಂಗಗಳು ಸಾಮಾನ್ಯ.

ಬೊಜ್ಜುತನ ಕಡಿಮೆ ಮಾಡಿಕೊಳ್ಳಲು, ಮನೋಸ್ಥೈರ್ಯ, ಮಿಲಿಟರಿಯಂತಹ ಶಿಸ್ತು, ತಪಸ್ಸಿನಂತಹ ಮನೋನಿರ್ಧಾರ (Commitment, Military discipline, Mind Control Like in Meditation) ಮಹತ್ವವಾದವು. ತಜ್ಞ ವೈದ್ಯರು, ಆಹಾರ ಪಥ್ಯತಜ್ಞರು (physician's and dietitians) ಇವರೊಂದಿಗೆ ರ್ಚಚಿಸಿ ದೀರ್ಘ ಕಾಲದವರೆಗೆ ಊಟದ ಪದ್ಧತಿಯನ್ನು ಗಣನೀಯವಾಗಿ ಪಾಲಿಸಬೇಕಾಗುವುದು. ಇತ್ತೀಚಿನ ದಿನಗಳಲ್ಲಿ ನಾನಾ ಬಗೆ ಫ್ಯಾಷನ್ ಡಯಟ್ಗ(Fashion diets)ಳು ಪ್ರಚಲಿತದಲ್ಲಿವೆ. ಕೀಟೋ ಡಯಟ್ (Keto diet), ಆಟಕಿನ್ಸ್ ಡಯಟ್ (Atkins Diet) ಇತ್ಯಾದಿಗಳಲ್ಲಿ ಪಿಷ್ಟ ಪದಾರ್ಥ (Carbohydrates) ಸೇವನೆಯನ್ನು ಕಡಿಮೆ ಮಾಡಿ ಕೊಬ್ಬು ಪದಾರ್ಥ ಹೆಚ್ಚಿಸಲಾಗುವುದು. ಕೊಬ್ಬು ಕರಗಿಸಿ ಅದರಿಂದ (Ketosis) ಉತ್ಪನ್ನವಾಗುವ ಪದಾರ್ಥಗಳು (Ketone bodies, Ketosis)ದೇಹಕ್ಕೆ ಬೇಕಾಗುವ ಶಕ್ತಿ, ಕ್ಯಾಲರಿ (Calorie) ಒದಗಿಸುತ್ತವೆ. ಆದರೆ, ಈ ಥರದ ಆಹಾರಪದ್ಧತಿಗಳನ್ನು ನುರಿತ ವೈದ್ಯರ ಸಲಹೆಯಂತೆ ಪಾಲಿಸಬೇಕು. 10ರಿಂದ 15 ಕಿಲೋ  ತೂಕವನ್ನು ಕಳೆದುಕೊಳ್ಳಬಹುದು. ಆದರೆ, ಪಥ್ಯವನ್ನು ನಿರಂತರವಾಗಿ ಅನುಸರಣೆ ಮಾಡದಿದ್ದಲ್ಲಿ ಮುಂಚಿಗಿಂತಲೂ ಜಾಸ್ತಿ ತೂಕ ಬರುವ ಸಾಧ್ಯತೆ ಹೆಚ್ಚು!

ದೇಹದ ಹೆಚ್ಚಿನ ತೂಕದ 5ರಿಂದ 10 ಪ್ರತಿಶತ ಕಡಿಮೆ ಮಾಡಿದರೂ (ಶೇ. 5ರಿಂದ 10) ಸಿಗುವ ಲಾಭಗಳು ಅಪಾರ. ಇಷ್ಟರಿಂದಲೇ ಹೃದಯಾಘಾತದ ಸಂಭವ ಕಡಿಮೆ ಆಗುವುದು. ಬಿ.ಪಿ. ಇಳಿಯುವುದು. ಮಧುಮೇಹ ನಿಯಂತ್ರಣ ಹೆಚ್ಚಾಗುವುದು. ಕೊಲೆಸ್ಟರಾಲ್ ಪ್ರಮಾಣ ಕಡಿಮೆಯಾಗುವುದು. ದಿನಾಲು ಮಾಡುವ ಊಟದ ಪ್ರಮಾಣವನ್ನು ಬರೆದಿಡಬೇಕು. ಒಮ್ಮೆಲೇ ಆಹಾರಪದಾರ್ಥಗಳ ಬದಲಾವಣೆ ಕೂಡದು. ನಿಧಾನವಾಗಿ ತಿನ್ನಬೇಕು. ಊಟದ ಮಧ್ಯೆ ಹೆಚ್ಚು ನೀರು ಕುಡಿಯಬೇಕು. ತೂಕ ಇಳಿಸುವಿಕೆಯ ಗುರಿ ಇಟ್ಟುಕೊಳ್ಳಬೇಕು. ನಿಯತ ವ್ಯಾಯಾಮದ ರೂಢಿ ಬೆಳೆಸಿಕೊಳ್ಳಬೇಕು. ಒಮ್ಮೆ ತೂಕ ಇಳಿದ ನಂತರ, ನಿತ್ಯ ಒಂದು ಗಂಟೆಯಂತೆ ದೈಹಿಕ ವ್ಯಾಯಾಮ ಅವಶ್ಯ. ಬಿ.ಎಂ.ಐ. ಅಂದಾಜು 32ಕ್ಕಿಂತ ಹೆಚ್ಚಿದಲ್ಲಿ ಬಾರಿಯಾಟ್ರಿಕ್ ಆಪರೇಶನ್ ಮೂಲಕ 20ರಿಂದ 30 ಕಿಲೋ ತೂಕ ಇಳಿಸಬಹುದು. ತೂಕ ಇಳಿಸುವ ಔಷಧಗಳು ಅಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net