

ಪ್ರಪಂಚ ಕಣ್ಣುತೆರೆದು ನೋಡಿದರೆ ಅನೇಕ ಕೌತುಕಗಳು ಆಯುರ್ವೆದದಲ್ಲಿ ಹಾಸುಹೊಕ್ಕಾಗಿರುವುದು ವೇದ್ಯವಾಗುತ್ತದೆ. ತ್ವಚೆಯ ಏಳು ಪದರಗಳನ್ನು ಪ್ರತ್ಯೇಕವಾಗಿ ಹೆಸರಿಸಿ, ಅವುಗಳ ದಪ್ಪ, ಕಾರ್ಯಗಳನ್ನು ವಿವರಿಸಿ ಅವುಗಳಲ್ಲಿ ಉದ್ಭವವಾಗುವ ರೋಗಗಳನ್ನೂ ಪ್ರಸ್ತುತಪಡಿಸಿದ ಆಯುರ್ವೆದವು ನಿಜಕ್ಕೂ ವಿಶಿಷ್ಟವಾಗಿಯೇ
ಚರ್ಮವನ್ನು ಬಾಹ್ಯ ಚಿಕಿತ್ಸಾ ಪ್ರಕ್ರಿಯೆಗಳ ಮೂಲಕ ಆರೈಕೆ ಮಾಡುವುದು ಒಂದು ವಿಧವಾದರೆ ದೇಹದ ಒಳಗೆ ದ್ರವ್ಯವಿಶೇಷಗಳನ್ನು ಸೇವಿಸುವುದರ ಮೂಲಕ ಪೋಷಣೆಗೈಯುವುದು ಇನ್ನೊಂದು ವಿಧಾನವಾಗಿದೆ. ಇದಕ್ಕಾಗಿ ಆಯುರ್ವೆದ ಹಲವಾರು ನಡೆಗಳನ್ನು ಸೂಚಿಸಿದೆ. ಪ್ರತಿನಿತ್ಯ ನಮ್ಮ ದೇಹಪ್ರಕೃತಿಗೆ ಸರಿಹೊಂದುವ ಔಷಧೀಯ ತೈಲಗಳನ್ನು ಬಳಸಿ ಅಭ್ಯಂಗ ಮಾಡಿ ಆ ಬಳಿಕ
ಚರ್ಮದ ಆರೈಕೆ ಹಾಗೂ ಚಿಕಿತ್ಸೆಗೆ ಅನೇಕ ಸಸ್ಯೌಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಲೋಳೆಸರ, ಸಪ್ತಪರ್ಣಿ, ಬೆಳ್ಳುಳ್ಳಿ, ಕಾಚಿಗಿಡ, ಸ್ವರ್ಣಕ್ಷೀರಿ, ಕಹಿಬೇವು, ಬಸವನಪಾದಿ, ಪಲಾಶ, ನಾಗಕೇಶರ, ಎಕ್ಕೆಗಿಡ, ಕಕ್ಕೆಮರ, ಒಂದೆಲಗ, ಗುಗ್ಗುಲು, ಅರಶಿನ, ಭೃಂಗರಾಜ, ಅಶ್ವತ್ಥ, ಸೊಗದೆಬೇರು, ಕೊಡಸಿಗೆ, ಚಾಲ್ವೊಗರು, ಅಗಸೆ, ಹಿಪ್ಪೆಮರ, ಕರವೀರ, ತಗಟೆ, ತುಳಸಿ, ಚಿತ್ರಕ, ಹೊಂಗೆ, ಬಾಕುಚಿ, ಹರಳು, ಮಂಜಿಷ್ಠಾ, ಶ್ರೀಗಂಧ, ಕೋಷ್ಠ ಹಾಗೂ ನೆಕ್ಕಿಗಿಡಗಳು ನಮ್ಮ ಸುತ್ತಮುತ್ತಲು ದೊರೆಯುವ ತ್ವಚೆಯ ಪೋಷಕ ಸಸ್ಯಗಳು. ಯೋಗಾಸನಗಳಲ್ಲಿ ಭುಜಂಗಾಸನ, ಹಲಾಸನ, ಮತ್ಸ್ಯಾಸನ, ಪವನಮುಕ್ತಾಸನ, ಶೀರ್ಷಾಸನ, ಸಿಂಹಾಸನಗಳು ತ್ವಚೆಯ ರಕ್ಷಣೆಗೆ ನೆರವಾಗುತ್ತವೆ.