

ಇತ್ತೀಚಿನ ದಿನಗಳಲ್ಲಿ ಹಲ್ಲಿನ ಕ್ಯಾವಿಟಿ ಅಥವಾ ಹುಳುಕು ಹಲ್ಲಿನ ಸಮಸ್ಯೆ ಕೂಡ ಸಾಮಾನ್ಯವಾಗಿಬಿಟ್ಟಿದೆ. ಕ್ಯಾವಿಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಲ್ಲುಗಳು ಹಾಳಾಗುವುದು ಮತ್ತು ಬಾಯಿಯ ದುರ್ವಾಸನೆಯು ಸಹ ಸಹಜ. ಇದಲ್ಲದೆ, ಕೆಲವರಲ್ಲಿ ವಸಡುಗಳಿಂದ ರಕ್ತಸ್ರಾವವಾಗುವ ಸಾಧ್ಯತೆಗಳಿವೆ. ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ತಮ್ಮ ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ಉಳಿದ ಹಲ್ಲುಗಳ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಹಲ್ಲುಗಳನ್ನು ರಕ್ಷಿಸಲು ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು? ನಾವು ಯಾವ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂಬುದನ್ನು ನಾವೀಗ ತಿಳಿಯೋಣ.
* ಕಡಿಮೆ ಕೊಬ್ಬಿನಾಂಶ ಇರುವ ಆಹಾರಗಳು
* ಕ್ಯಾಲ್ಸಿಯಂ ಹೆಚ್ಚಿರುವ ಆಹಾರ
* ಬೀಜಗಳು
* ಮಾಂಸಾಹಾರ
* ಮೀನು
* ಸಿಟ್ರಸ್ ಹಣ್ಣುಗಳು
* ಟೊಮ್ಯಾಟೋ
* ಮೆಣಸು
* ಆಲೂಗಡ್ಡೆ
ಅನೇಕ ಜನರು ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಜ್ಜುವುದನ್ನು ತಪ್ಪಿಸುತ್ತಾರೆ. ಆದರೆ, ಈ ರೀತಿ ಮಾಡಿದರೆ ಹಲ್ಲುಗಳಿಗೆ ಹಾನಿಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾಗಿ ಸಕ್ಕರೆ ಪದಾರ್ಥಗಳನ್ನು ತಿಂದ ನಂತರ ಬ್ರಶ್ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು.
ಹಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು. ಇದರಿಂದ ಉಳಿದ ಹಲ್ಲುಗಳ ಕೊಳೆಯುವಿಕೆಯು ತಪ್ಪುತ್ತದೆ. ಹಾಗೂ ಹಲ್ಲು ಉಜ್ಜವ ವಿಧಾನದ ಬಗ್ಗೆಯೂ ಗಮನ ಇರಲಿ. ಹಲ್ಲನ್ನು ಬ್ರಶ್ನಲ್ಲಿ ಜೋರಾಗಿ ತಿಕ್ಕಬಾರದು. ಮೃಧುವಾಗಿ ಹಲ್ಲು ಉಜ್ಜಬೇಕು ಮತ್ತು 2 ನಿಮಿಷಕ್ಕಿಂತ ಹೆಚ್ಚು ಸಮಯ ಹಲ್ಲು ಉಜ್ಜಬೇಡಿ. ಮಲಗುವ ಮುನ್ನ ಹಲ್ಲು ಉಜ್ಜುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ತೀವ್ರವಾದ ಕ್ಯಾವಿಟಿ ಸಮಸ್ಯೆಯಿಂದ ಬಳಲುತ್ತಿರುವ ಜನರು ಕೂಡಲೇ ದಂತವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ಹಲ್ಲು ಹದಗೆಟ್ಟು ಇತರ ಹಲ್ಲುಗಳಿಗೂ ಹರಡುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. ಇದಲ್ಲದೆ, ಆಯುರ್ವೇದ ಸಲಹೆಗಳನ್ನು ಅನುಸರಿಸುವುದರಿಂದಲೂ ಸುಲಭವಾಗಿ ಪರಿಹಾರವನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. (ಏಜೆನ್ಸೀಸ್)