ಹಾಲನ್ನು ಕುದಿಸುವಾಗ ಒಲೆಯ ಮೇಲೆ ಚೆಲ್ಲದಂತೆ ತೆಡೆಯೊದೇಗೆ?; ಈ ಸಿಂಪಲ್​​ ಟ್ರಿಕ್ಸ್​ ಅನುಸರಿಸಿ.. | Kitchen Tricks

dk - 2025-03-07T210725.003
Published on

Kitchen Tricks: ಗ್ಯಾಸ್​ಸ್ಟಾವ್​ ಸೇರಿದಂತೆ ಎಲ್ಲ ತರಹದ ಒಲೆಯ ಮೇಲೆ ಹಾಲು ಕುದಿಸುವಾಗ ಉಕ್ಕಿ ಚೆಲ್ಲುವುದು ಸಾಮಾನ್ಯವಾಗಿದೆ. ಅಲ್ಲದೆ, ಮನೆಯಲ್ಲಿನ ಮಹಿಳೆಯರಿಗೆ ಇದು ದಿನನಿತ್ಯದ ಸಮಸ್ಯೆ ಕೂಡ ಹೌದು ಎನ್ನಬಹುದು. ಇದರಿಂದ ಬೇಸರದ ಜತೆಗೆ ಗಲೀಜಿನಿಂದಾಗಿ ಅಡುಗೆ ಮನೆಯನ್ನೇ ಕೊಳೆಯನ್ನಾಗಿಸುತ್ತದೆ. ಹೀಗಾಗಿ, ಇದನ್ನ ತಡೆಯೋದು ಹೇಗೆ ಎಂಬ ಸಿಂಪಲ್​​ ಟಿಪ್ಸ್​ ತಿಳಿಯೋಣ ಬನ್ನಿ..

ಈ ಸರಳ ಉಪಾಯಗಳಿಂದ ಹಾಲು ಚೆಲ್ಲದಂತೆ ನೋಡಿಕೊಳ್ಳಿ

1. ಸಾಮಾನ್ಯವಾಗಿ ಹಾಲು ಬಿಸಿ ಆದಾಗ ಅದರಲ್ಲಿನ ಅಂಶಗಳಿಂದ ಗುಳ್ಳೆಗಳು ಉತ್ಪತ್ತಿಯಾಗುತ್ತದೆ. ಇದರಿಂದ ಹಾಲು ಬೇಗ ಉಕ್ಕಿ ಹರಿಯುತ್ತದೆ. ಇದನ್ನು ತಡೆಯಲು ಹಗುರವಾದ ಶುದ್ಧವಾದ ಉಕ್ಕಿನ ಬಟ್ಟಲನ್ನು ಬಳಸಿ. ಇದು ಹಾಲನ್ನು ಮೇಲೆ ಬಂದು ಉಕ್ಕುವುದನ್ನು ಮತ್ತು ಹನಿ ಹಾಲು ಚೆಲ್ಲದಂತೆ ತಡೆಯುತ್ತದೆ.

2. ಸಣ್ಣ ಮತ್ತು ಹಗುರವಾದ ಬಟ್ಟಲನ್ನು ಬಳಸುವುದು ಮರೆಯಬೇಡಿ. ಇದು ಹಾಲು ಸೋರಿಕೆಯನ್ನು ತಡೆಯುತ್ತದೆ.

3.ಇನ್ನು ಹಾಲು ನಿಧಾನವಾಗಿ ಕುದಿಯಲು ಒಲೆಯ ಮಧ್ಯದ ಭಾಗದಲ್ಲಿ ಬಟ್ಟಲನ್ನು ಇರಿಸಿ. ಇದರಿಂದ ಹಾಲು ಸಮವಾಗಿ ಕುದಿಯುತ್ತದೆ. ಇದರಿಂದ ಸಾಮಾನ್ಯವಾಗಿ ಉಕ್ಕುವುದು ಕಡಿಮೆಯಾಗಲಿದೆ.

4.ಹಾಲು ಚೆಲ್ಲದಂತೆ ಮಾಡಲು ಸಲ್ಪ ದೊಡ್ಡಪಾತ್ರೆ ಇಡುವುದು ಒಳಿತು. ಇದರಲ್ಲಿ ಸಾಕಷ್ಟು ಸ್ಥಳ ಅವಕಾಶ ಇರುವುದರಿಂದ ಸಾಮಾನ್ಯವಾಗಿ ಉಕ್ಕುವ ಸಾಧ್ಯತೆ ಕಡಿಮೆ.

5.ಇನ್ನು ಪೋಷಕಾಂಶಗಳನ್ನು ಸಂರಕ್ಷಿಸಲು ಹಾಲನ್ನು ಒಮ್ಮೆ ಮಾತ್ರ ಕುದಿಸಿ. ಅಲ್ಲದೆ, ಫ್ರಿಜ್​ನಲ್ಲಿ ಸಂಗ್ರಹಿಸಿ ಇಡಿ.ಬೇಕಾದಾಗ ಮತ್ತೆ ಬಿಸಿ ಮಾಡಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net