ಚಿಕನ್ ಗ್ರೇವಿ ಹೀಗೆ ಮಾಡಿ...ರುಚಿ ಮತ್ತು ಆರೋಗ್ಯ ಎರಡೂ ನಿಮ್ಮದೇ.. Chicken Gravy Recipe

chicken gravy
Published on

Chicken Gravy Recipe : ಚಿಕನ್ ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಚಿಕನ್‌ನೊಂದಿಗೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು.  ಹೆಚ್ಚಿನವರು ಫ್ರೈಡ್ ಚಿಕನ್ ಗ್ರೇವಿಯನ್ನು ಇಷ್ಟಪಡುತ್ತಾರೆ.    ನಾನು ಇಂದು ನಿಮಗೆ ರುಚಿಯಾಗಿ  ಹೈದರಾಬಾದ್​ ಶೈಲಿಯಲ್ಲಿ ಚಿಕನ್​ ಗ್ರೇವಿ ಮಾಡುವ ವಿಧಾನವನ್ನು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ..

ಬೇಕಾಗಿರುವ ಪದಾರ್ಥಗಳು:

ಚಿಕನ್ - ಅರ್ಧ ಕೆಜಿ

ಪುಲಾವ್ ಎಲೆ- 2

ಮೆಣಸಿನಕಾಯಿ-  5

 ರುಚಿಗೆ ತಕ್ಕಷ್ಟು ಉಪ್ಪು

ಹಸಿರು ಮೆಣಸಿನಕಾಯಿಗಳು- 4

ಈರುಳ್ಳಿ- 2

ಟೊಮೆಟೊ -2

ಅರಿಶಿನ- 1 ಚಮಚ

ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ

ಗರಂ ಮಸಾಲಾ - 1ಚಮಚ

ಮೊಸರು - 1ಕಪ್​​

ಕೊತ್ತಂಬರಿ ಸೊಪ್ಪು -  ಸ್ವಲ್ಪ

ಕರಿಬೇವು - ಸ್ವಲ್ಪ

ನಿಂಬೆ ರಸ-  2 ಚಮಚ

ಚಿಕನ್ ಗ್ರೇವಿ ಮಾಡುವ ವಿಧಾನ:

ಮೊದಲು ಚಿಕನ್ ಅನ್ನು ಸ್ವಚ್ಛಗೊಳಿಸಿ. ಚಿಕನ್​ಗೆ ಅರಿಶಿನ, ಉಪ್ಪು, ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ಕರಿಬೇವು, ಕೊತ್ತಂಬರಿ ಸೊಪ್ಪು, ಮೊಸರು, ನಿಂಬೆ ರಸ ಮತ್ತು ಎಲ್ಲಾ  ಹಾಕಿ ಮಿಶ್ರಣ ಮಾಡಿ ಮತ್ತು ಕನಿಷ್ಠ ಒಂದು ಗಂಟೆ ಮ್ಯಾರಿನೇಟ್ ಮಾಡಿ ಮತ್ತು ಪಕ್ಕಕ್ಕೆ ಇರಿಸಿ.

ನಂತರ ಒಂದು ಪಾತ್ರೆಗೆ  ಎಣ್ಣೆ ಮತ್ತು ಸ್ವಲ್ಪ ತುಪ್ಪ ಸೇರಿಸಿ ಬಿಸಿ ಮಾಡಿ ಪುಲಾವ್ ಎಲೆ, ಕರಿಬೇವಿನ ಎಲೆಗಳು, ಈರುಳ್ಳಿ, ಒಣ ಮೆಣಸಿನಕಾಯಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ ಮತ್ತು ಟೊಮೆಟೊ  ಚೂರುಗಳನ್ನು ಸೇರಿಸಿ ಮತ್ತು ಮೃದುವಾಗುವವರೆಗೆ ಬೇಯಿಸಿ.

ನಂತರ, ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮತ್ತು ಅದನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿ, ಉಪ್ಪು ಹಾಕಿ ಅದನ್ನು ತಿರುಗಿಸಿ. ಚಿಕನ್ ಚೆನ್ನಾಗಿ ಬೆಂದಾಗ ಕೊತ್ತಂಬರಿ ಸೊಪ್ಪು, ಮೊಸರು ಮತ್ತು ಕರಿಬೇವಿನ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ತುಂಬಾ ರುಚಿಯಾಗಿರುವ ಹೈದರಾಬಾದ್ ಶೈಲಿಯ ಚಿಕನ್ ಗ್ರೇವಿ ರೆಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net