ಮಳೆ, ಚಳಿಗೆ ಬೆಚ್ಚಗೆ ಏನಾದರೂ ಕುಡಿಯಬೇಕು ಅನಿಸುತ್ತಾ ಇದ್ಯಾ? ಹೀಗೆ ಬಿಸಿ..ಬಿಸಿ ಚಹಾ ಮಾಡಿ...Tea

tea
Published on

ಬೆಂಗಳೂರು: (Tea) ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿದು ದಿನ ಶುರು ಮಾಡೋರು ತುಂಬಾ ಜನ ಇದ್ದಾರೆ. ಚಹಾ ಕುಡಿದ್ರೆ ಫ್ರೆಶ್ ಆಗಿರುತ್ತದೆ ಎಂದು ಹಲವರು ನಂಬುತ್ತಾರೆ. ದಿನಕ್ಕೆ ಎರಡ್ ಮೂರ್ ಕಪ್ ಚಹಾ ಕುಡಿಯೋರು ಇದ್ದಾರೆ. ಮಳೆ ಬರುವ ಹಾಗೆ ಇದೆ.. ಮೋಡ ಕವಿದಿದೆ... ಚಳಿ ಕೂಡ ಇದೆ... ತುಂಬಾ ಚಳಿ ಆಗ್ತಿದೆ ಏನಾದ್ರು ಬಿಸಿ ಬಿಸಿಯಾಗಿ ಕುಡಿಯಬೇಕು ಎಂದು ನಿಮಗೆ ಅನ್ನಿಸುತ್ತಿದ್ದರೆ.. ನಾವೆ ಇಂದು ನಿಮಗೆ  ಚಹಾ ಮಾಡುವುದನ್ನು ಹೇಳಿ ಕೊಡಲಿದ್ದೇವೆ.

ಏಲಕ್ಕಿ ಚಹಾ, ಶುಂಠಿ ಚಹಾ, ಮಸಾಲ ಚಹಾ ಹೀಗೆ ತರತರದ ಚಹಾ ಇದೆ.  ಮಳೆಗಾಲ ಹಾಗೂ ಚಳಿಗಾಲದಲ್ಲಿ ಶುಂಠಿ ಚಹಾ ಕುಡಿದ್ರೆ ಕೆಮ್ಮು, ನೆಗಡಿ, ಗಂಟಲು ನೋವಿಗೆ ಒಳ್ಳೆಯದು. ನಾವು ಇಂದು ನಿಮಗೆ ಹಾಲಿನ ಚಹಾ ಮಾಡುವ ವಿಧಾನವನ್ನು ತಿಳಿಸಿಕೊಡಲಿದ್ದೇವೆ...

2-3 ಲವಂಗ

1 ಸಣ್ಣ ದಾಲ್ಚಿನ್ನಿ ಕಡ್ಡಿ

1-2 ಪುಡಿ ಮಾಡಿದ ಏಲಕ್ಕಿ

ಸಕ್ಕರೆ

ಚಹಾ ಪೌಡರ್

ಹಾಲು

ನೀರು

ಚಹಾ ಮಾಡಲು ಬೇಕಾಗುವ ಸಾಮಗ್ರಿಗಳು:

ಮೊದಲಿಗೆ ಟೀ ಪಾತ್ರೆಯಲ್ಲಿ ನೀರು, ಏಲಕ್ಕಿ, ದಾಲ್ಚಿನ್ನಿ, ಲವಂಗ ಹಾಕಿ ಸ್ವಲ್ಪ ಹೊತ್ತು ಮಸಾಲೆ ಬಿಡುವವರೆಗು ಕುದಿಸಿ. ನಂತರ ಇದಕ್ಕೆ ಚಹಾ ಪೌಡರ್​ ಸೇರಿಸಿ 5 ನಿಮಿಷಗಳ ಕಾಲ ಕುದಿಸಲು ಬಿಡಿ. ಇದು ಕುದಿಯಲು ಪ್ರಾರಂಭಿಸಿದ ನಂತರ ನಿಮ್ಮಿಷ್ಟಕ್ಕೆ ತಕ್ಕಂತೆ ಹಾಲು ಮತ್ತು ಸಕ್ಕರೆ ಸೇರಿಸಿ 5 ನಿಮಿಷದವರೆಗೆ ಕುದಿಯಲು ಬಿಡಿ.

ಚಹಾ ಮಾಡುವ ವಿಧಾನ:

ಈ ಚಹಾದ ಮಿಶ್ರಣ ಉಕ್ಕುತ್ತದೆ, ಆದಷ್ಟು ಗಮನವಹಿಸಿ. ಕಾದ ಬಳಿಕ ಸ್ಟ್ರೈನರ್ ಬಳಸಿ ಚಹಾವನ್ನು ಕಪ್‌ಗೆ ಸೋಸಿ ಮತ್ತು ಸಖತ್‌ ಖಡಕ್‌ ಚಹಾವನ್ನು ಆನಂದಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net