ಬ್ಯಾಚುಲರ್ಸ್​ಗಾಗಿ Food Recipes; ಕಡಿಮೆ ಅಡುಗೆ ಎಣ್ಣೆಯಲ್ಲಿ, ಗರಿಗರಿಯಾದ, ಆರೋಗ್ಯಕರ ಪೂರಿ ಮಾಡಲು ಈ ಟಿಪ್ಸ್ ಬಳಸಿ

ಬ್ಯಾಚುಲರ್ಸ್​ಗಾಗಿ Food Recipes; ಕಡಿಮೆ ಅಡುಗೆ ಎಣ್ಣೆಯಲ್ಲಿ, ಗರಿಗರಿಯಾದ, ಆರೋಗ್ಯಕರ ಪೂರಿ ಮಾಡಲು ಈ ಟಿಪ್ಸ್ ಬಳಸಿ
Published on: 
  • ಗೋಧಿ ಹಿಟ್ಟಿಗೆ ಸ್ವಲ್ಪ ರವೆ ಅಥವಾ ಕಡಲೆಹಿಟ್ಟು (ಬೆಸನ್) ಬೆರೆಸುವುದರಿಂದ ಪೂರಿ ಎಣ್ಣೆ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ.

  • ಪುರಿ ಲಟ್ಟಿಸುವಾಗ ಒಣ ಹಿಟ್ಟಿಗೆ ಬದಲಾಗಿ ಎಣ್ಣೆ ಅಥವಾ ತುಪ್ಪ ಸವರಿಕೊಳ್ಳಿ.

  • ಫ್ರಿಡ್ಜ್‌ನಲ್ಲಿಟ್ಟ ಹಳೆಯ ಹಿಟ್ಟನ್ನು ಬಳಸದೆ, ತಾಜಾ ಹಿಟ್ಟಿನಿಂದ ಪುರಿ ಮಾಡಿ.

make crispy puris: ಸಾಮಾನ್ಯವಾಗಿ ಬ್ಯಾಚುಲರ್​ಗಳು ಹೆಚ್ಚು ರಿಸ್ಕಿ ಇರುವ ಆಹಾರವನ್ನು ತಯಾರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಚಿತ್ರನ್ನ, ಟೊಮ್ಯಾಟೋ ರೈಸ್, ಮೊಸರನ್ನ, ಅವಲಕ್ಕಿ, ಅನ್ನ ಇಷ್ಟಕ್ಕೆ ಸೀಮಿತರಾಗುತ್ತಾರೆ. ವಿಭಿನ್ನವಾಗಿ ಆಹಾರ ಸೇವನೆ ಮಾಡಬೇಕು ಎನ್ನುವ ಆಸೆ ಇದ್ದರೂ ಸಹ ಉತ್ತಮವಾಗಿ ಬರೋದಿಲ್ಲ ಎನ್ನುವ ಭಯವು ಕಾಡಬಹುದು. ಇಂದು ಗರಿಗರಿಯಾದ ಪೂರಿಯನ್ನು ಕಡಿಮೆ ಸಮಯದಲ್ಲಿ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಪೂರಿ ಎಣ್ಣೆಯಲ್ಲಿ ಕರಿಯುತ್ತಾರೆ ಜಿಡ್ಡು, ಆರೋಗ್ಯಕ್ಕೆ ಹಾನಿ ಎಂದು ಕೆಲವರು ತಿನ್ನಲು ಮತ್ತು ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಅತಿಯಾಗಿ ಎಣ್ಣೆ ಬಳಕೆ ಮಾಡುವುದು, ತಿನ್ನುವುದು ಹೊಟ್ಟೆ ಭಾರವಾದಂತೆ ಮಾಡಬಹುದು. ಆರೋಗ್ಯವೂ ಹದಗೆಡುತ್ತದೆ. ಹೀಗಾಗಿ, ಅತಿಯಾಗಿ ಎಣ್ಣೆಯನ್ನು ಪುರಿ ಹೀರಿಕೊಳ್ಳದಂತೆ ಮಾಡಲು ಕೆಲವು ಸರಳ ಟಿಪ್ಸ್​ ಇಲ್ಲಿ ಉಲ್ಲೇಖಿಸಲಾಗಿದೆ.

  • ಕಡಿಮೆ ಎಣ್ಣೆಯಲ್ಲಿ ಗರಿ ಗರಿ ಪುರಿಗಾಗಿ ನೀವು ಮಾಡಬೇಕಾದದ್ದು ಇಷ್ಟೇ

ಪೂರಿ ತಯಾರಿಸುವ ಮುನ್ನ ಕಲಿಸಿದ ಗೋಧಿ ಹಿಟ್ಟು ಗಟ್ಟಿಯಾಗಿ ನಾದಿಕೊಳ್ಳಬೇಕು. ಚಪಾತಿಗೆ ಬೇಕಾದಂತೆ ಹಿಟ್ಟು ಮೃದುವಾಗಿರದೆ ಗಟ್ಟಿಯಾಗಿರಲಿ. ಹಿಟ್ಟಿಗೆ ಕಡಿಮೆ ನೀರುಬಳಕೆ ಮಾಡಿ.

  • ಹಿಟ್ಟಿಗೆ ರವೆ ಅಥವಾ ಕಡಲೆಹಿಟ್ಟು ಬೆರಸಿ

ನೀವು 2 ಕಪ್ ಗೋಧಿ ಹಿಟ್ಟನ್ನು ಕಲಿಸಿಕೊಂಡರೆ ಅದಕ್ಕೆ 2 ಚಮಚ ರವೆ ಹಾಕಿ ಇಲ್ಲವೆ ಕಡಲೆ ಹಿಟ್ಟನ್ನು ಹಾಕಿ ಪುರಿ ತಯಾರಿ ಮಾಡಿ. ಇದು ಅತಿಯಾದ ಎಣ್ಣೆಯನ್ನು ಹೀರಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.

  • ಲಟ್ಟಿಸಲು ಒಣ ಹಿಟ್ಟು ಬಳಕೆ ಮಾಡ್ಬೇಡಿ

ಸಾಮಾನ್ಯವಾಗಿ ಚಪಾತಿ ಅಥವಾ ಪೂರಿಯನ್ನು ಲಟ್ಟಿಸುವಾಗ ಗೋಧಿ ಹುಡಿ ಬಳಕೆ ಮಾಡುತ್ತೇವೆ. ಆದರೆ, ಪೂರಿ ಮಾಡುವಾಗ ಬೇಡ. ಒಣ ಹಿಟ್ಟು ಎಣ್ಣೆಗೆ ಬಿದ್ದು ಮುಂದೆ ಬಳಕೆ ಮಾಡದಂತೆ ಆಗಬಹುದು. ಹೀಗಾಗಿ ಪೂರಿಯನ್ನು ಲಟ್ಟಿಸುವಾಗ ಎಣ್ಣೆ ಅಥವಾ ತುಪ್ಪವನ್ನು ಸವರಿಕೊಳ್ಳುವುದು ಉತ್ತಮ.

  • ಹಳೆ ಹಿಟ್ಟು ಬಳಕೆ ಅವಾಯ್ಡ್​ ಮಾಡಿ

ಫ್ರಿಡ್ಜ್​ನಲ್ಲಿ ಕಲಸಿಟ್ಟಿರುವ ಹಳೇ ಹಿಟ್ಟನ್ನು ಬಳಕೆ ಮಾಡೋದು ತಪ್ಪಿಸಿ. ಇದು ಎಣ್ಣೆಯನ್ನು ಹೀರಿಕೊಂಡು ಉಬ್ಬದಂತೆ ಮಾಡುತ್ತದೆ. ಗರಿಗರಿಯಾದ ಪೂರಿಗಾಗಿ ಹಳೆಯ ಹಿಟ್ಟು ಬಳಕೆ ಮಾಡದೆ ಇರುವುದೇ ಸೂಕ್ತ. ಉತ್ತಮ ಫಲಿತಾಂಶಕ್ಕಾಗಿ, ಯಾವಾಗಲೂ ತಾಜಾವಾಗಿ ನಾದಿದ ಹಿಟ್ಟನ್ನು ಬಳಸಿ.

  • ಎಣ್ಣೆ ಬಿಸಿ ಹೀಗಿರಲಿ

ಕರಿಯುವ ತಿಂಡಿ ಮಾಡುವಾಗ ಸಾಮಾನ್ಯಾವಾಗಿ ಎಣ್ಣೆಯ ತಾಪ ಸಮತೋಲನವಾಗಿರಬೇಕು. ಎಣ್ಣೆ ಹೆಚ್ಚು ಬಿಸಿ ಅಥವಾ ತೀರ ಬೆಚ್ಚಗೆ ಇರಕೂಡದು. ಹೆಚ್ಚು ಬಿಸಿ ಪೂರಿಯನ್ನು ಕರಕಲು ಮಾಡಿದ್ರೆ, ಕಡಿಮೆ ಬಿಸಿ ಪೂರಿ ಮೇಲೆಳದಂತೆ ಮಾಡುತ್ತದೆ. ಎಣ್ಣೆಯನ್ನು ಚೆನ್ನಾಗಿ ಕಾಯಿಸಿ ಮತ್ತು ಪುರಿಗಳನ್ನು ಮಧ್ಯಮ-ಹೆಚ್ಚಿನ ಉರಿಯಲ್ಲಿಟ್ಟು ಪೂರಿ ಕರಿಯಿತಿ

ಹೀಗೆ ಮಾಡ್ಬೇಡಿ, ಹೀಗೆ ಮಾಡಿ

  • ನೀವು ಬಿಸಿ ಎಣ್ಣೆಯಲ್ಲಿ ಪುರಿಯನ್ನು ಹಾಕಿದ ತಕ್ಷಣ, ಅದು ಉಬ್ಬಿಕೊಳ್ಳಲು ಸಹಾಯ ಮಾಡಲು ರಂಧ್ರವಿರುವ ಸೌಟಿನಿಂದ ನಿಧಾನವಾಗಿ ಒತ್ತಿ. ಪದೇ ಪದೇ ತಿರುಗಿಸಬೇಡಿ.

  • ಪೂರಿಯನ್ನು ಅಡುಗೆ ಮನೆಯ ಟವಲ್ ಅಥವಾ ಟಿಶ್ಯೂ ಪೇಪರ್ ಮೇಲೆ ಇರಿಸಿ. ಇದು ಪೂರಿಯಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net