ಮನೆಯಲ್ಲಿ ಎಬಿಸಿ ಜ್ಯೂಸ್ ಮಾಡುವುದು ಹೇಗೆ? ಇಲ್ಲಿದೆ ಸುಲಭವಾದ ಮಾರ್ಗ..ABC Juice

 ABC Juice
ABC Juice
Published on
ಬೆಂಗಳೂರು: ( ABC Juice ) ಚಳಿಗಾಲದಲ್ಲಿ ತಾಜಾ ಹಣ್ಣು ಮತ್ತು ತರಕಾರಿ ಜ್ಯೂಸ್ ಮಾತ್ರ ದೇಹಕ್ಕೆ ಪ್ರಯೋಜನಕಾರಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಜ್ಯೂಸ್‌ಗಳು ಕೇವಲ ಸಕ್ಕರೆ ಪಾನೀಯಗಳಾಗಿವೆ, ಇದರಲ್ಲಿ ಸಕ್ಕರೆ, ಬಣ್ಣ ಮತ್ತು ಸುವಾಸನೆ ಮಾತ್ರ ಇರುತ್ತವೆ.
ನೀವು ಮಾರುಕಟ್ಟೆಗೆ ಹೋಗಿ ಜ್ಯೂಸ್ ಮಾರಾಟಗಾರರಿಂದ ಜ್ಯೂಸ್ ಖರೀದಿಸಿ ಕುಡಿಯಬೇಕಾಗಿಲ್ಲ. ನೀವು ಮನೆಯಲ್ಲಿ ಆರೋಗ್ಯಕರವಾದ ಎಬಿಸಿ ಜ್ಯೂಸ್​​ ಮಾಡಿ ಕುಡಿಯಬಹುದು. ನಾವು ಇಂದು ಎಬಿಸಿ ಜ್ಯೂಸ್​​ ಮಾಡುವ ವಿಧಾನ ತಿಳಿಸಿ ಕೊಡಲಿದ್ದೇವೆ.

ಎಬಿಸಿ ಜ್ಯೂಸ್​​ ಮಾಡುವ ವಿಧಾನ:

1) ಈ ರಸಗಳನ್ನು ಪ್ರತಿದಿನ 2 ತಿಂಗಳ ಕಾಲ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಣೆ ದೊರೆಯುತ್ತದೆ ಮತ್ತು ನಿಮ್ಮ ಮುಖಕ್ಕೆ ವಿಭಿನ್ನ ಹೊಳಪು ಬರುತ್ತದೆ.
2) 4 ಕ್ಯಾರೆಟ್, 1 ಬೀಟ್ರೂಟ್, ಸೇಬುಹಣ್ಣು ಮತ್ತು 1 ಇಂಚಿನ ಶುಂಠಿಯನ್ನು ತೆಗೆದುಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ಸಣ್ಣ ತುಂಡುಗಳಾಗಿ ಕತ್ತರಿಸಿ.
3) ಒಂದು ಸಣ್ಣ ಮಿಕ್ಸರ್ ಜಾರ್ ತೆಗೆದುಕೊಂಡು, ಎಲ್ಲಾ ಪದಾರ್ಥಗಳನ್ನು ಸೇರಿಸಿ, 1 ಕಪ್ ನೀರು ಸೇರಿಸಿ, ಅವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಜರಡಿ ಅಥವಾ ಹತ್ತಿ ಬಟ್ಟೆ ಮೇಲೆ ಈಗಾಗಲೇ ರುಬ್ಬಿದ ಈ ಮಿಶ್ರಣವನ್ನು ಹಾಕಿ. ಬಿಗಿಯಾಗಿ ಹಿಂಡಿ. ಎಲ್ಲಾ ರಸವು ಸುಲಭವಾಗಿ ಹೊರಬರುವಂತೆ ಮಾಡಿ. ಸೊಸಿಕೊಂಡು ರಸವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಿ.
4) ರಸದ ರುಚಿಯನ್ನು ಹೆಚ್ಚಿಸಲು, ನೀವು ಒಂದು ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಬಹುದು. ನೀವು ಈ ರಸವನ್ನು ಪ್ರತಿದಿನ ಒಂದು ಲೋಟ ಕುಡಿಯಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net