

ಬೆಂಗಳೂರು: ಮಳೆ ಜೋರಾಗಿ ಸುರಿಯುತ್ತಿದೆ. ಮಳೆ, ಚಳಿ ಎಂದು ಸುಮ್ಮನೆ ಇರಬೇಡಿ. ಬಿಸಿ ಬಿಸಿಯಾಗಿ ಏನಾದ್ರು ತಿನ್ನಬೇಕು ಅನ್ಸಿದ್ರೆ ವೆಜಿಟೇಬಲ್ ಪಲಾವ್ ( Vegetable Pulao )ತುಂಬಾ ಆರೋಗ್ಯಕರವಾದ ಬ್ರೇಕ್ ಫಾಸ್ಟ್ ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು :
ಅಕ್ಕಿ - 2 ಕಪ್
ಈರುಳ್ಳಿ- ಸಣ್ಣದಾಗಿ ಕೊಚ್ಚಿದ ( ಅರ್ಧ ಕಪ್)
ಟೊಮೆಟೊ ಸಣ್ಣದಾಗಿ ಕಟ್ ಮಾಡಿರುವುದು ( ಅರ್ಧ ಕಪ್)
ಹಸಿರು ಬಟಾಣಿ (ಮಟರ್) - 1/4 ಕಪ್
ಸಣ್ಣದಾಗಿ ಕೊಚ್ಚಿದ ಫ್ರೆಂಚ್ ಬೀನ್ಸ್,ಕ್ಯಾರೆಟ್, ಕ್ಯಾಪ್ಸಿಕಂ- 1 ಕಪ್
ದಾಲ್ಚಿನ್ನಿ, ಲವಂಗ, ಪಲಾವ್ ಎಲೆ
ಗರಂ ಮಸಾಲಾ ಪೌಡರ್- 1 ಚಮಚ
ಅರಿಶಿನ ಪುಡಿ- 1 ಚಮಚ
ರೆಡ್ ಚಿಲ್ಲಿ ಪೌಡರ್- 1 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಅಡುಗೆ ಎಣ್ಣೆ - 4 ಚಮಚ
ತುಪ್ಪ- 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ತುಪ್ಪ ಮತ್ತು ಎಣ್ಣೆಯನ್ನು ಕುಕ್ಕರ್‌ನಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಪಲಾವ್ ಎಲೆ, ದಾಲ್ಚಿನ್ನಿ, ಲವಂಗ ಸೇರಿಸಿ ಕಾಲ ಹುರಿಯಿರಿ.
ನಂತರ ಈರುಳ್ಳಿ , ಟೊಮೆಟೊ, ಹಸಿರು ಬಟಾಣಿ, ಫ್ರೆಂಚ್ ಬೀನ್ಸ್ ಮತ್ತು ಕ್ಯಾರೆಟ್, ಕ್ಯಾಪ್ಸಿಕಂ ಸೇರಿಸಿ.
ಹುರಿಯಿರಿ.
ಈದೆ ಕುಕ್ಕರ್ಗೆ ಅಕ್ಕಿ, ಗರಂ ಮಸಾಲಾ ಪುಡಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಅಕ್ಕಿಯ ಅಳತೆಗೆ ತಕ್ಕಂತೆ ನೀರು ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಶ್ರಣ ಮಾಡಿ.
ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ 2 ಸೀಟಿಗಳವರೆಗೆ ಬೇಯಿಸಿ. 1 ನೇ ಸೀಟಿ ಮುಗಿದ ನಂತರ, ಉರಿಯನ್ನು ಕಡಿಮೆ ಮಾಡಿ ಮತ್ತು ಇನ್ನೊಂದು ಸೀಟಿ ಬರುವವರೆಗೆ ಬೇಯಿಸಿ.
ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ...