ಸಖತ್​ ಸಂಡೇಗೆ ನಾಟಿ ಸ್ಟೈಲ್​ನಲ್ಲಿ ಚಿಕನ್ ಚಾಪ್ಸ್! ಒಂದು ಬಾರಿ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುವ naati Style Chicken Chops

naati Style Green Chicken Chops (1)
Published on

naati Style Chicken Chops : ಭಾನುವಾರ (Sunday Funday) ಬಂದ್ರೆ ಸಾಕು  ತಿಂದು ಮಸ್ತ್ ಮಜಾ ಮಾಡಬೇಕು ಅನ್ಕೋತಿರಾ. ನಿಮಗೆ  ಒಳ್ಳೆಯ  ರುಚಿಯಾದ ಊಟ ತಿನ್ನಬೇಕು ಅನಿಸ್ತಾ ಇದೆಯಾ? ಹಾಗಾದ್ರೆ ಸಿಂಪಲ್ ಆಗಿ ನಾಟಿ ಸ್ಟೈಲ್​ನಲ್ಲಿ ಚಿಕನ್ ಚಾಪ್ಸ್ ಮನೆಯಲ್ಲಿ ಮಾಡಿ ಎಂಜಾಯ್ ಮಾಡಿ.

ನಾಟಿ ಸ್ಟೈಲ್ ಸಿಂಪಲ್ ಚಿಕನ್ ಚಾಪ್ಸ್​ಗೆ ಬೇಕಾಗುವ ಸಾಮಗ್ರಿಗಳು : 

ಮಟನ್  -  ಅರ್ಧ ಕೆಜಿ

ಈರುಳ್ಳಿ, ಟೊಮೆಟೊ - 2

ಹಸಿಮೆಣಸಿನಕಾಯಿ - 4 ರಿಂದ 5

ತೆಂಗಿನಕಾಯಿ ತುರಿ - ಅರ್ಧ ಕಪ್​

ಎಲಕ್ಕಿ 2, ಚೆಕ್ಕೆ

ಕೊತ್ತಂಬರಿಸೊಪ್ಪು- ಸ್ವಲ್ಪ

ಲವಂಗ - ಸ್ವಲ್ಪ

ಪುದೀನಾ ಸೊಪ್ಪು- ಸ್ವಲ್ಪ

ಅಡುಗೆ ಎಣ್ಣೆ - ಅರ್ಧ ಕಪ್​​

ರುಚಿಗೆ ತಕ್ಕಷ್ಟು ಉಪ್ಪು

ಕಾಳುಮೆಣಸಿನ ಪುಡಿ- ಸ್ವಲ್ಪ

ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ

ಮಾಡುವ ವಿಧಾನ:

ಬಾಣಲಿಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಹಸಿಮೆಣಸಿನಕಾಯಿ ಟೊಮೆಟೊ ಹಾಕಿ ಹುರಿದುಕೊಳ್ಳಿ. ನಂತರ ತೆಂಗಿನತುರಿ ಮತ್ತು ಮಸಾಲೆ ಹಾಕಿ ಮಿಕ್ಸ್​ರ್​ನಲ್ಲಿ ರುಬ್ಬಿಕೊಳ್ಳಿ.

ಅದೇ ಬಾಣಲಿಯಲ್ಲಿ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಚೆನ್ನಾಗಿ ಎಲಕ್ಕಿ 2, ಚೆಕ್ಕೆ, ಈರುಳ್ಳಿ ಹಾಕಿ ಪ್ರೈ ಮಾಡಿ. ನಂತರ ತೊಳೆದಿರುವ ಮಟನ್ ಪೀಸ್ ಹಾಕಿ, ಅದಕ್ಕೆ ಅರ್ಧ ಚಮಚ ಅರಿಶಿಣ, ಸ್ವಲ್ಪ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಒಂದು ನಿಮಿಷ ಪ್ರೈ ಮಾಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್,  ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಿ.

ನಂತರ ಗ್ರೈಂಡ್ ಮಾಡಿರುವ ಮಸಾಲೆ ಸ್ವಲ್ಪ ನೀರು ಹಾಕಿ ಕುಕ್ಕರ್​ನಲ್ಲಿ ನಾಲ್ಕು ವಿಜ್ವಲ್ ಹೊಡಿಸಿ. ನಂತರ ಸವಿಸಿರಿ ರುಚಿಯಾದ ನಾಟಿ ಸ್ಟೈಲ್ ಚಿಕನ್ ಚಾಪ್ಸ್ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net