ಮಳೆ, ಚಳಿ...ಸಂಜೆ ವೇಳೆ ಬಿಸಿ ಬಿಸಿ ಎಗ್​ ರೈಸ್ ಮಾಡಿ ಸವಿಯಿರಿ...Egg Rice

egg rice
Published on

ಬೆಂಗಳೂರು: ಇಂದು ಭಾನುವಾರ ರಜೆಯಾಗಿರುವುದರಿಂದ ಮನೆಯಲ್ಲಿಯೇ ಎಲ್ಲರು ಇರುತ್ತಾರೆ. ಆದರೆ ಮಳೆ, ಚಳಿ ಎಂದು ಸುಮ್ಮನೆ ಇರಬೇಡಿ. ಬಿಸಿ ಬಿಸಿಯಾಗಿ ಏನಾದ್ರು ತಿನ್ನಬೇಕು ಅನ್ಸಿದ್ರೆ ನಾವು ಹೇಳಿದಂತೆ ಎಗ್​ರೈಸ್ ( Egg Rice )​​ ಮಾಡಿ ಸವಿಯಿರಿ....

(.Egg Rice ) ಎಗ್​​ರೈಸ್​​ ಮಾಡಲು ಬೇಕಾಗುವ ಸಾಮಗ್ರಿಗಳು:

ಉಪ್ಪು – ರುಚಿಗೆ ತಕ್ಕಷ್ಟು

ಜೀರಿಗೆ- 1 ಚಮಚ

ಅರಿಶಿನ ಪುಡಿ – ಚಿಟಿಕೆ

ಕೊತ್ತಂಬರಿ ಸೊಪ್ಪು – ಸ್ವಲ್ಪ

ನಿಂಬೆಹಣ್ಣು – 1

ಗರಂ ಮಸಾಲ –1 ಚಮಚ

ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 2 ಚಮಚ

ಅಡುಗೆ ಎಣ್ಣೆ - ಅರ್ಧ ಕಪ್​

ಈರುಳ್ಳಿ,ಹಸಿ ಮೆಣಸಿನಕಾಯಿ - ಸ್ವಲ್ಪ

ಅನ್ನ – 2 ಕಪ್​​

ಮೊಟ್ಟೆ- 3

 ಮಾಡುವ ವಿಧಾನ: 

ಮೊದಲಿಗೆ ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಜೀರಿಗೆ ಹಾಕಿ ಫ್ರೈ ಮಾಡಿರಿ. ಬಳಿಕ ಅದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಸೇರಿಸಿ ಫ್ರೈ ಮಾಡಿ.

ನಂತರ ಇದೆ ಮಸಲಾಗೆ  ಮೊಟ್ಟೆ ಒಡೆದು ಹಾಕಿ ಕಲಸಿರಿ.

egg rice

ನಂತರ ಈ ಮಿಶ್ರಣಕ್ಕೆ ಬೇಯಿಸಿದ ಅನ್ನ, ಗರಂ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿರಿ. ನಿಂಬೆಹಣ್ಣು ಹಿಂಡಿ ಮತ್ತೊಮ್ಮೆ ತಿರುಗಿಸಿ.

ಈಗ ಬಿಸಿಬಿಸಿಯಾದ ರುಚಿರುಚಿಯಾದ ಎಗ್ ರೈಸ್ ಸವಿಯಲು ಸಿದ್ಧ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net