Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

Crab Sukka
Published on

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು ಮಾಂಸದ ಊಟಕ್ಕೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ. ನಾವು ನಿಮಗೆ ಇಂದು ಬಹಳ ಸುಲಭ ಮತ್ತು ಟೇಸ್ಟಿಯಾಗಿರುವ  ಏಡಿ ಸುಕ್ಕ ( Crab Sukka )  ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತೇವೆ..

Crab Sukka

 ಬೇಕಾಗುವ ಸಾಮಗ್ರಿಗಳು: 

ಏಡಿ ( ಅರ್ಧ ಕೆಜಿಯಷ್ಟು ಶುಚಿಯಾಗಿ ತೊಳೆದು ಕ್ಲೀನ್​​ ಮಾಡಿಟ್ಟುಕೊಳ್ಳಿ)

ಈರುಳ್ಳಿ -3

ಟೊಮೆಟೊ- 3

ಹಸಿಮೆಣಸಿನಕಾಯಿ - 4 ರಿಂ5

ಅರಿಶಿನ- 2 ಸ್ಪೂನ್​​

ಉಪ್ಪು- ರುಚಿಗೆ ತಕ್ಕಷ್ಟು

ಮೆಣಸಿನಕಾಯಿ- 5 ರಿಂದ 6

ಗರಂ ಮಸಾಲ- 2 ಚಮಚ

ಅಡುಗೆ ಎಣ್ಣೆ- ಅರ್ಧ ಕಪ್

ಕರಿಬೇವು, ಕೊತ್ತಂಬರಿ ಸೊಪ್ಪು- ಸ್ವಲ್ಪ

ಬಿರಿಯಾನಿ ಎಲೆ, ಗಸಗಸೆ, ದಾಲ್ಚಿನ್ನಿ, ಲವಂಗ

ಶುಂಠಿ, ಬೆಳ್ಳುಳ್ಳಿ ಪೇಸ್ಟ್​​ : ಅರ್ಧ ಕಪ್​​

 ಮಾಡುವ ವಿಧಾನ: 

 ಏಡಿಗಳಿಗೆ ಅರಿಶಿನ, ಉಪ್ಪು ಮತ್ತು ಮೊಸರು ಸೇರಿಸಿ ಮತ್ತು ಏಡಿಗಳನ್ನು ಸ್ವಚ್ಛವಾಗಿ ತೊಳೆಯಿರಿ.

 ಮಿಕ್ಸಿಂಗ್ ಜಾರ್‌ನಲ್ಲಿ ಶುಂಠಿ, ಬೆಳ್ಳುಳ್ಳಿ, ಗಸಗಸೆ, ದಾಲ್ಚಿನ್ನಿ, ಲವಂಗ ಸೇರಿಸಿ ಮತ್ತು ನಯವಾದ ಪೇಸ್ಟ್ ಮಾಡಿ ಒಂದು ಕಪ್​ನಲ್ಲಿ ಹಾಕಿಟ್ಟುಕೊಳ್ಳಿ...

 ಮಿಕ್ಸಿಂಗ್ ಜಾರ್‌ನಲ್ಲಿ ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿ.

 ಒಂದು ಬಾಣಲೆಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಕರಿಬೇವು, ಬಿರಿಯಾನಿ ಎಲೆಗಳನ್ನು ಹಾಕಿ ಫ್ರೈ ಮಾಡಿ. ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೋ ಹಾಕಿ ಹುರಿಯಿರಿ.  ನಂತರ ಇದೆ ಬಾಣಲೆಗೆ ಏಡಿಗಳನ್ನು ಫ್ರೈ ಮಾಡಿ. ಇವು ಬೇಯುತ್ತಿರುವಾಗ ಟೊಮೇಟೊ ಚೂರುಗಳು ಮತ್ತು ಮಿಕ್ಸ್ ಮಾಡಿದ ಪೇಸ್ಟ್ ಅನ್ನು ಹಾಕಿ ಕಡಿಮೆ ಉರಿಯಲ್ಲಿ ಹತ್ತು ನಿಮಿಷ ಫ್ರೈ ಮಾಡಿ.

Crab Sukka

ಇವೆಲ್ಲವನ್ನೂ ತ್ವರಿತವಾಗಿ ರುಚಿಗೆ ತಕ್ಕಷ್ಟು ಮೆಣಸು ಮತ್ತು ಉಪ್ಪಿನೊಂದಿಗೆ ಬೆರೆಸಬೇಕು ಮತ್ತು ಒಂದೆರಡು ನಿಮಿಷಗಳ ಕಾಲ ಮತ್ತೆ ಮಿಶ್ರಣ ಮಾಡಬೇಕು. ಅದರ ನಂತರ ನೀರು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಇಳಿಸುವ ಮೊದಲು ಗರಂ ಮಸಾಲ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಉದುರಿಸಿ ಪಾತ್ರೆಯಲ್ಲಿ ಕುದಿಸಿ ಕೆಳಗಿಳಿಸಿ. ಟೇಸ್ಟಿ ಏಡಿ ತುಂಡುಗಳನ್ನು ಹೇಗೆ ತಯಾರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net