

ಸಂಜೆ ಸ್ನ್ಯಾಕ್ಸ್ ಅಂದರೆ ಸಮೋಸಾ ಚಾಟ್, ಪಾನಿಪುರಿ, ವಡಾಪಾವೊ, ಬಜ್ಜಿ ಹೀಗೆ ಹಲವು ರುಚಿಕರ ಖಾದ್ಯಗಳು ಕಣ್ಮುಂದೆ ಬರುತ್ತದೆ. ಆದರೆ ಈ ಬೇಸಿಗೆಯಲ್ಲಿ ಬಿಸಿಲಿನಿ ಶಾಖಕ್ಕೆ ಇದೆಲ್ಲಾ ತಿನ್ನಲು ಕಷ್ಟ ಎನ್ನಿಸುತ್ತದೆ. ಸೇವಿಸುವ ತಿಂಡಿ ರುಚಿಯಾಗಿ ಇರಬೇಕು ಜತೆಗೆ ಆರೋಗ್ಯಕರವಾಗಿಯೂ ಇರಬೇಕು. ಯಾವ ಸ್ನ್ಯಾಕ್ಸ್ ಬೇಟರ್ ಎಂದು ಆಲೋಚಿಸುವವರಿಗೆ ಇಲ್ಲಿದೆ ಒಂದು ಚಾಯ್ಸ್. ಅದು ಗೋಡಂಬಿ ಪೆಸ್ಟೊ ಪಾಸ್ತಾ - ಆರೋಗ್ಯಕರ ಹಾಗೂ ತಿನ್ನಲು ಟೇಸ್ಟಿ.. ಇಲ್ಲಿದೆ ರುಚಿಕರ ಗೋಡಂಬಿ ಪೆಸ್ಟೊ ಪಾಸ್ತಾದ ರೇಸಿಪಿ....
ಗೋಡಂಬಿ ಪೆಸ್ಟೊ ಪಾಸ್ತಾ ಮಾಡಲು ಬೇಕಿರುವ ಪದಾರ್ಥಗಳು :
10-15 ಗೋಡಂಬಿ
1½ ಕಪ್ ತಾಜಾ ತುಳಸಿ ಎಲೆಗಳು
8-10 ಕರಿಮೆಣಸು
10-15 ಬೆಳ್ಳುಳ್ಳಿ ಲವಂಗ
1½ ಚಮಚ ಪಾರ್ಮೆಸನ್ ಚೀಸ್ ಪೌಡರ್
½ ಕಪ್ ಮತ್ತು 2 ಟೆಬಲ್ ಸ್ಪೂನ್ ಆಲಿವ್ ಎಣ್ಣೆ
1 tbsp ಕತ್ತರಿಸಿದ ಬೆಳ್ಳುಳ್ಳಿ
¼ ಕಪ್ ಬೇಯಿಸಿದ ಸ್ವೀಟ್ ಕಾರ್ನ್
5-6 ಚೆರ್ರಿ ಟೊಮ್ಯಾಟೊ
ರುಚಿಗೆ ಉಪ್ಪು
2 ಕಪ್ ಬೇಯಿಸಿದ ಪೆನ್ನೆ ಪಾಸ್ತಾ
ಅಲಂಕರಿಸಲು ತುರಿದ ಪಾರ್ಮೆಸನ್ ಚೀಸ್
ತಾಜಾ ತುಳಸಿ ಚಿಗುರು
ಮಾಡುವ ವಿಧಾನ:
ಗ್ರೈಂಡರ್ ಜಾರ್‌ನಲ್ಲಿ ತುಳಸಿ ಎಲೆಗಳು, ಕರಿಮೆಣಸು, ಬೆಳ್ಳುಳ್ಳಿ, ಪಾರ್ಮೆಸನ್ ಚೀಸ್ ಪೌಡರ್, ½ ಕಪ್ ಆಲಿವ್ ಎಣ್ಣೆ ಮತ್ತು ಗೋಡಂಬಿ ಸೇರಿಸಿ ಒರಟಾದ ರೀತಿಯಲ್ಲಿ ಪೇಸ್ಟ್ ರುಬ್ಬಿಕೊಳ್ಳಿ.
ಪಾತ್ರೆಯಲ್ಲಿ ನೀರನ್ನು ಕುದಿಸಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಪಾಸ್ತಾವನ್ನು ಬೇಯಿಸಿಕೊಳ್ಳಿ. ನಂತರ ಮತ್ತೊಂದು ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಬೆಳ್ಳುಳ್ಳಿ ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ.
ನಂತರ ಸ್ವೀಟ್ ಕಾರ್ನ್, ಚೆರ್ರಿ ಟೊಮ್ಯಾಟೊ, ಬೇಯಿಸಿದ ಪಾಸ್ತಾ ಸೇರಿಸಿ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಹದಕ್ಕೆ ಬಂದ ನಂತರ ಪ್ಲೇಟ್ಗೆ ಸರ್ವ್ ಮಾಡಿ. ಪಾಸ್ತಾ ಮೇಲೆ ತುರಿದ ಪಾರ್ಮೆಸನ್ ಚೀಸ್ ಮತ್ತು ತುಳಸಿ ಎಲೆಗಳನ್ನು ಬಳಸಿ ಅಲಂಕರಿಸಿ.