ಬಾಳೆಹಣ್ಣು ಕಪ್ಪಾಗದಂತೆ ಕಾಪಾಡುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ..Banana Storage Tips

black spot banana
Published on

Banana Storage Tips : ಪ್ರತಿಯೊಂದು ಮನೆಯಲ್ಲೂ ಪ್ರತಿದಿನ ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ವರ್ಷಪೂರ್ತಿಯಾಗಿ  ಸಿಗುವ ಹಣ್ಣುಗಳಲ್ಲಿ ಬಾಳಹಣ್ಣು ಕೂಡಾ ಒಂದಾಗಿದೆ.  ಬಾಳೆಹಣ್ಣುಗಳು ಕೆಲವೇ ದಿನಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದು ಅನೇಕ ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ.

ಬಾಳ ಹಣ್ಣು ಒಣಗಲು ಅಥವಾ ಕೊಳೆಯಲು ಪ್ರಾರಂಭಿಸುತ್ತಾರೆ. ಆದರೆ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಬಾಳೆಹಣ್ಣನ್ನು ಹೆಚ್ಚು ದಿನಗಳವರೆಗೆ ತಾಜಾವಾಗಿರಿಸಿಕೊಳ್ಳಬಹುದು.

ಬಾಳೆಹಣ್ಣುಗಳನ್ನು ಪ್ಲಾಸ್ಟಿಕ್ ಹೊದಿಕೆ ಅಥವಾ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತುವುದರಿಂದ ಅವು ಬೇಗನೆ ಕಪ್ಪು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಹೀಗೆ ಮಾಡುವುದರಿಂದ ಹೆಚ್ಚು ದಿನ ಫ್ರೆಶ್ ಆಗಿರುತ್ತದೆ.

ಬಾಳೆಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿಡಲು ಇನ್ನೊಂದು ವಿಧಾನವೆಂದರೆ ಅವುಗಳನ್ನು ನೇತುಹಾಕುವುದು. ಈ ವಿಧಾನದಲ್ಲಿ ಬಾಳೆಹಣ್ಣುಗಳು ಗಾಳಿಗೆ ತೆರೆದುಕೊಳ್ಳುತ್ತವೆ ಮತ್ತು ಪರಿಣಾಮವಾಗಿ ಅವು ವೇಗವಾಗಿ ಹಣ್ಣಾಗುತ್ತವೆ ಮತ್ತು ಹೆಚ್ಚು ಕಾಲ ತಾಜಾವಾಗಿರುತ್ತವೆ.

ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ವಿನೆಗರ್ ಸೇರಿಸಿ. ಈಗ ಆ ವಿನೆಗರ್ ನೀರಿನಲ್ಲಿ ಬಾಳೆಹಣ್ಣುಗಳನ್ನು ಅದ್ದಿ. ಹೀಗೆ ಮಾಡುವುದರಿಂದ ಬಾಳೆಹಣ್ಣಿನ ಮೇಲಿನ ಕಪ್ಪು ಕಲೆಗಳು ಕಡಿಮೆಯಾಗುತ್ತವೆ. 

ಬಾಳೆಹಣ್ಣುಗಳು ಬೇಗನೆ ಹಣ್ಣಾಗುವುದನ್ನು ತಡೆಯಲು ಇತರ ಹಣ್ಣುಗಳ ಜೊತೆಯಲ್ಲಿ ಇಡದಿರುವುದು ಉತ್ತಮ. ಇತರ ಹಣ್ಣುಗಳಿಂದ ಬಿಡುಗಡೆಯಾಗುವ ಎಥಿಲೀನ್ ಅನಿಲವು ಬಾಳೆಹಣ್ಣುಗಳು ಹಣ್ಣಾಗಲು ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net