ಜೀವನದಲ್ಲಿ ಸಂತೋಷವಾಗಿರೋದು ಹೇಗೆ?; ನಿಮ್ಮ ದೈನಂದಿನ ದಿನಚರಿಯಲ್ಲಿರಲಿ ಈ ಅಭ್ಯಾಸಗಳು..How to Be Happy

How to Be Happy tips
How to Be Happy tips
Published on
How to Be Happy : ಕೆಲಸ, ಮನೆ, ಟ್ರಾಫಿಕ್​ನಲ್ಲೇ ದಿನ ದೂಡುವ ಈ ಕಾಲಘಟ್ಟದಲ್ಲಿ ಮೊಬೈಲ್​ನೊಂದಿಗೆ ಹೆಚ್ಚು ಕಾಲ ಕಳೆದು ಸಂತೋಷವನ್ನೇ ಮರೆತು ಬಿಟ್ಟಿರುತ್ತೇವೆ. ಮುಕ್ತವಾಗಿ ನಕ್ಕ ದಿನಗಳೇ ಇರೋದಿಲ್ಲ. ಇವು ನಮ್ಮ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರೋದಲ್ಲದೇ, ಸಮಸ್ಯೆಗಳ ಜೊತೆ ಹೋರಾಡೋಕೆ ಸ್ಪಂದಿಸಲು ಸಹಾಯ ಮಾಡುವುದಿಲ್ಲ. ಆನಂದದಿಂದ ಜೀವನವನ್ನು ದೂಡಿಕೊಂಡು ಹೋಗೋದು ತುಂಬಾ ಕಷ್ಟದ ಕೆಲಸವೇನಲ್ಲ. ಸಿಕ್ಕ ಸಮಯದಲ್ಲೇ ನಮ್ಮನ್ನು ನಾವು ಯಾವ ರೀತಿ ತೊಡಗಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ.
ನಿತ್ಯ ಒತ್ತಡದಿಂದ ದೂರವಾಗಲು, ಮೂಡ್​ ಸ್ವಿಂಗ್ಸ್​ನಿಂದ ಪಾರಾಗಲು ಬಯಸುತ್ತಿದ್ದರೆ, ಈ ಒಳ್ಳೆಯ ಪದ್ಧತಿಗಳನ್ನು ಫಾಲೋ ಮಾಡಿ. ಇದರಿಂದ ನೀವು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ವ್ಯಾಯಾಮ ಮಾಡುವುದು ರೂಢಿ ಮಾಡಿಕೊಳ್ಳಿ

ದಿನನಿತ್ಯ ಒಂದು ಅರ್ಧ ಅಥವಾ ಒಂದು ಗಂಟೆಗಳ ಕಾಲ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಅತಿಯಾದ ಶ್ರಮವನ್ನು ತಪ್ಪಿಸುತ್ತದೆ. ನಿಮ್ಮ ಮೆದುಳಿನಲ್ಲಿ ಖಿನ್ನತೆ, ಒತ್ತಡಕ್ಕೆ ಕಾರಣವಾಗುವ ರಾಸಾಯನಿಕವನ್ನು ಸಮತೋಲನಗೊಳಿಸಲು ಇದು ಸಹಾಯ ಮಾಡುತ್ತದೆ. ಸಣ್ಣದಾಗಿ ವ್ಯಾಯಾಮ ಮಾಡಲು ಶುರು ಮಾಡಿದರೂ..ಮುಂದಿನ ದಿನಗಳಲ್ಲಿ ಇದರ ಪ್ರತಿಫಲವನ್ನು ನೀವು ಕಾಣಬಹುದಾಗಿದೆ.

ಹೆಚ್ಚೆಚ್ಚು ನಿದ್ದೆ ಮಾಡಿ

ದಿನಕ್ಕೆ ಏಳು ಗಂಟೆ ನಿದ್ದೆ ಅಗತ್ಯವಿದೆ. ಹೀಗಾಗಿ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಮಾಡಿ ಹೆಚ್ಚು ನಿದ್ದೆ ಮಾಡುವುದರಿಂದ ನಿಮ್ಮ ಮೆದುಳು ದಿನ ಬೆಳಗಾದಂತೆ ಹೊಸತಾಗಿ ಯೋಚನೆ ಮಾಡಲು ಶುರು ಮಾಡುತ್ತದೆ. ನಿಮ್ಮ ಯೋಚನಾ ಶಕ್ತಿಯನ್ನು ನಿದ್ರೆ ಕಾಪಾಡುತ್ತದೆ. ಆಗಾಗ್ಗೆ ಕಾಡುವ ಮೂಡ್​ ಸ್ವಿಂಗ್ಸ್, ಕೋಪ, ಕಿರಿಕಿರಿಯನ್ನು ತಡೆಯುವುದಲ್ಲದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಮೊಬೈಲ್​ ಬಿಟ್ಟು ಸಂಬಂಧಗಳನ್ನು ಕಟ್ಟಿಕೊಳ್ಳಿ

ಆಳವಾದ ಸಂಬಂಧವಲ್ಲದೇ ಇದ್ದರೂ ಸಹ ನಿಮ್ಮ ಸುತ್ತಮುತ್ತಲಿನ ಜನರ ಜೊತೆ ಚೆನ್ನಾಗಿ ಮಾತಾನಾಡೋದನ್ನು ರೂಢಿ ಮಾಡಿಕೊಳ್ಳಿ. ಖಾಲಿ ಹರಟೆ ಅಥವಾ ಇತರರನ್ನು ನಿಂದಿಸುವ ಬದಲಾಗಿ ಎಲ್ಲರನ್ನು ಒಳಗೊಂಡು ಸಕರಾತ್ಮಕ ಮಾತುಗಳನ್ನು ಆಡಿ, ಆಗಾಗ್ಗೆ ಗೆಳೆಯ-ಗೆಳತಿಯರನ್ನು ಭೇಟಿ ಮಾಡಿ, ಇದು ಸಹ ನೀವು ಸಂತೋಷವಾಗಿರಲು ಸಹಾಯ ಮಾಡುವ ಒಂದು ಸೂತ್ರವಾಗಿದೆ.

ನಿಮಗೆ ನೀವು ಸಮಯ ಕೊಟ್ಟುಕೊಳ್ಳಲು ಕಲಿಯಿರಿ

ಕೆಲಸ, ಕುಟುಂಬ ಹೀಗೆ ಸಾಕಷ್ಟು ವಿಚಾರದಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಂಡಾಗ ನಿಮಗೆ ಕೆಲಸ ಅಥವಾ ಜೀವನವೇ ಬೋರ್​ ಎನಿಸಿ, ಯಾಕಾಗಿ ಇನ್ನು ಬದುಕಿದ್ದೇವೆ ಎಂದು ಕಾಡೋದು ಸಹಜ. ಹೀಗಾಗಿ, ಆಗಾಗ್ಗೆ ನಿಮಗೆ ನೀವು ಸಮಯ ಕೊಟ್ಟುಕೊಳ್ಳಿ. ನಿಮ್ಮಿಷ್ಟ ಡ್ರಾಯಿಂಗ್, ದೇವಸ್ಥಾನ ಅಥವಾ ಪ್ರವಾಸಿ ಸ್ಥಳ, ಊಟ, ಕಾಫಿ ಕುಡಿಯರಿ. ನಿಮ್ಮಿಷ್ಟದ ಬಟ್ಟೆ ಧರಿಸಿ ಇವು ನಿಮ್ಮ ಮೆದುಳಿನ ಒತ್ತಡ ಕಡಿಮೆ ಮಾಡಿ ಸಕರಾತ್ಮಕವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ನಿಮ್ಮನ್ನು ನೀವು ಯಾರಿಗೂ ಹೋಲಿಸಿಕೊಳ್ಳಬೇಡಿ

ಸಾಮಾನ್ಯವಾಗಿ ನಮ್ಮ ಬಳಿ ಇರದಿರುವ ವಸ್ತು ಅಥವಾ ಕ್ರಿಯಾಶೀಲತೆಯನ್ನು ನೆನೆದು ನಿತ್ಯ ಬೇಸರ ಮಾಡಿಕೊಳ್ಳುತ್ತೇವೆ. ಆದರೆ ಮೊದಲು ಅಂತಹ ಗುಣವನ್ನು ನಾವು ಬಿಡಬೇಕು. ಹಾಗಾದಾಗ ಮಾತ್ರ ಚಿಂತೆಗಳು ದೂರವಾಗಿ ಸಂತೋಷ ಕಾಣಿಸಿಕೊಳ್ಳುತ್ತದೆ.
ಇಷ್ಟೇ ಅಲ್ಲದೇ, ಹಾಡು ಕೇಳುವುದು, ಕಲಿಯುವುದು. ನೃತ್ಯ ಕ್ಲಾಸ್​ಗಳಿಗೆ ಜಾಯ್ನ್​ ಆಗುವುದು. ಹೊಸದಾಗಿ ಕಲಿಕೆಗಳನ್ನು ರೂಢಿ ಮಾಡಿಕೊಳ್ಳುವುದು ಸಹ ನಿಮ್ಮ ಮೆದುಳನ್ನು ಸೃಜನಾತ್ಮಕವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net