ಉಸಿರಾಟಕ್ಕೆ ತೊಂದರೆ ಮಾಡುವ ನಾಸಲ್​​ ಪಾಲಿಪ್ಸ್​ ಬಗ್ಗೆ ನಿಮಗೆಷ್ಟು ಗೊತ್ತು; ಅದರ ಲಕ್ಷಣ, ಕಾರಣ ಏನಿರಬಹುದು? ಇಲ್ಲಿದೆ ಮಾಹಿತಿ

Untitled-design-2024-07-09T200019.084
Published on: 

ಸಾಮಾನ್ಯವಾಗಿ ಮಳೆಗಾಲ, ಚಳಿಗಾಳ ಬಂತೆಂದರೆ ಸಾಕು ಉಸಿರಾಟದ ತೊಂದರೆ ಎದುರಾಗುತ್ತದೆ. ಮೂಗಿನಿಂದ ಸುಲಭವಾಗಿ ಉಸಿರಾಡಲು ಸಾಧ್ಯವಾಗದಿದ್ದಾಗ ಅದು ಭಯಾನಕವಾಗಬಹುದು. ಬಾಯಿಯ ಮೂಲಕ ನಿರಂತರವಾಗಿ ಉಸಿರಾಡಲು ಒತ್ತಾಯಿಸಬಹುದು.ವಾತಾವರಣದಿಂದ ಈಗಾಗುತ್ತಿದೆ ಎಂದು ಅಂದುಕೊಳ್ಳುವವರೆ ಹೆಚ್ಚು. ಆದರೆ ಅದು ಸಾಮಾನ್ಯ ಶೀತವೋ ಅಥವಾ ನೀವು ನಾಸಲ್​​​ ಪಾಲಿಪ್ಸ್​​ನಿಂದ ಬಳಲುತ್ತಿರುತ್ತೀರಿ ಎಂದು ತಿಳಿಯಲು ಮೂಗು ಮತ್ತು ಸೈನಸ್ ವೈದ್ಯರನ್ನು ಭೇಟಿ ಮಾಡಿದರೆ ಒಳಿತು. ನಾಸಲ್​​​ಪಾಲಿಪ್ಸ್‌ನಿಂದ ಉಂಟಾಗುವ ಉಸಿರಾಟದ ತೊಂದರೆಗಳ ಕುರಿತು ಮಾಹಿತಿ ನೀಡಲಾಗಿದೆ.

ನಾಸಲ್​ ಪಾಲಿಪ್ಸ್​​​: ನಾಸಲ್ ಪಾಲಿಪ್ಸ್ ಉರಿಯೂತದ ಅಂಗಾಂಶಗಳಾಗಿವೆ. ಅದು ಮೂಗಿನ ಅಥವಾ ಸೈನಸ್ ಕುಳಿಗಳ ಒಳಗಿನ ಅಂಗಾಂಶಗಳ ಒಳಪದರದಿಂದ ಬೆಳೆಯುತ್ತದೆ. ಒಂದೇ ಸಮಯದಲ್ಲಿ ಮೂಗಿನ ಎರಡು ಒಳ್ಳೆಗಳಲ್ಲಿ ಬೆಳೆಯುತ್ತದೆ. ಆದರೆ ಅದು ಕ್ಯಾನ್ಸರ್​ ಅಲ್ಲ ಜತೆಗೆ ನೋವುಂಟು ಮಾಡುವುದಿಲ್ಲ. ಅನೇಕ ಜನರು ಮೂಗಿನ ಪಾಲಿಪ್ಸ್​​​ಗಳನ್ನು ಹೊಂದಿರುತ್ತಾರೆ ಆದರೆ ಆ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ. ನಾಸಲ್​ ಪಾಲಿಪ್ಸ್​ ಇದೆ ಎಂದು ತಿಳಿಯುವುದು ಹೇಗೆ..? ಅದರ ಲಕ್ಷಣಗಳೇನು ಇಲ್ಲಿದೆ ಮಾಹಿತಿ..

ನಾಸಲ್​ ಪಾಲಿಪ್ಸ್​​​ ರೋಗದ ಲಕ್ಷಣಗಳು: ಮೂಗಿನಿಂದ ರಕ್ತಸ್ರಾವ, ಮೇಲಿನ ಹಲ್ಲುಗಳಲ್ಲಿ ನೋವು, ಆಗಾಗ್ಗೆ ಸ್ರವಿಸುವ ಮೂಗು, ಗೊರಕೆ ಹೊಡೆಯುವುದು, ವಾಸನೆ ಗ್ರಹಿಸುವುದು ಕಡಿಮೆಯಾಗುವುದು, ರುಚಿಯ ಪ್ರಜ್ಞೆ ಕಡಿಮೆಯಾಗುವುದು, ದೀರ್ಘಕಾಲದ ಸೈನಸ್ ಸೋಂಕುಗಳು, ನಿರಂತರ ಕೆಮ್ಮು ಇವು ನಾಸಲ್​​ ಪಾಲಿಪ್ಸ್​​ನ ಲಕ್ಷಣವಾಗಿವೆ. ಆದರೆ ನಿಮಗೆ ಇದೆಲ್ಲಾ ಸಾಮಾನ್ಯ ಶೀತದ ಲಕ್ಷಣಗಳು ಎಂದು ಗೊಂದಲವಾಗಬಹುದು. ಈ ಲಕ್ಷಣಗಳಲ್ಲಿ ಹೆಚ್ಚಿನವು ಶೀತ, ಜ್ವರ ಮತ್ತು ಇತರ ಸೋಂಕುಗಳಿಗೆ ಲಕ್ಷಣವೇ ನಿಜ. ಆದರೆ ಈ ರೋಗಲಕ್ಷಣಗಳು ದೀರ್ಘಕಾಲದವರೆಗೆ (ಸಾಮಾನ್ಯವಾಗಿ 2 ವಾರಗಳವರೆಗೆ) ಮುಂದುವರಿದರೆ ನಾಸಲ್ ಪಾಲಿಪ್ಸ್​​ ಇದೆ ಎಂದು ಅರ್ಥ. ಆ ಸಮಯದಲ್ಲಿ ಒಮ್ಮೆ ವೈದ್ಯರನ್ನು ಸಂಪರ್ಕಿಸಿದರೆ ಉತ್ತಮ.

ನಾಸಲ್​ ಪಾಲಿಪ್ಸ್​​ಗೆ ಕಾರಣ ಏನೀರಬಹುದು?:

  • ಅಸ್ತಮಾ: ಅಸ್ತಮಾದಿಂದ ಬಳಲುತ್ತಿರುವವರಿಗೆ ನಾಸಲ್​​ ಪಾಲಿಪ್ಸ್ ಬರುವ ಸಾಧ್ಯತೆ ಹೆಚ್ಚು. NIH ನಡೆಸಿದ ಅಧ್ಯಯನದ ಪ್ರಕಾರ ಅಸ್ತಮಾ ಹೊಂದಿರುವ 7 ರಿಂದ 15 ಪ್ರತಿಶತದಷ್ಟು ಜನರು ನಾಸಲ್​​ ಪಾಲಿಪ್ಸ್ ಹೊಂದಿರುತ್ತಾರೆ.
  • ಅನುವಂಶಿಕ ಕಾರಣಗಳು: ನಾಸಲ್​​ ಪಾಲಿಪ್ಸ್​​​​ ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ಅದರಿಂದ ಪ್ರಭಾವಿತವಾಗುವ ಸಾಧ್ಯತೆಗಳು ಇರುತ್ತವೆ. ಇತರ ಆರೋಗ್ಯ ಸಮಸ್ಯೆಗಳು: ಸಿಸ್ಟಿಕ್ ಫೈಬ್ರೋಸಿಸ್​​​​ನಂತಹ ಸಮಸ್ಯೆಗಳು ನಾಸಲ್​ ಪಾಲಿಪ್ಸ್​​ಗೆ ಕಾರಣವಾಗಬಹುದು.