Uncooked Chicken : ಭಾನುವಾರದ ರಜೆ ಬಂತೆಂದರೆ ಸಾಕು ಮಾಂಸಾಹಾರಿಗಳ ಮನೆಯಲ್ಲಿ ಚಿಕನ್ ಘಮಘಮಿಸಲೇಬೇಕು. ಚಿಕನ್ ಬಿರಿಯಾನಿ, ಕಬಾಬ್, ಗ್ರೇವಿ, ಫ್ರೈ ಹೀಗೆ ಬಗೆಬಗೆಯ ಖಾದ್ಯಗಳನ್ನು ಸವಿಯಲು ಹೆಚ್ಚಿನವರು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಮಯ ಉಳಿಸಲು ಹಾಗೂ ಆಫರ್‌ಗಳ ಲಾಭ ಪಡೆಯಲು ಅನೇಕರು ಒಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಚಿಕನ್ ಖರೀದಿಸಿ ತಂದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ, ಹಸಿ ಚಿಕನ್ ಅನ್ನು ಎಷ್ಟು ದಿನಗಳ ಕಾಲ ಸುರಕ್ಷಿತವಾಗಿ ಇಡಬಹುದು ಮತ್ತು ಅದನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಬಹುತೇಕರಲ್ಲಿ ಸ್ಪಷ್ಟತೆ ಇರುವುದಿಲ್ಲ. ಸರಿಯಾದ ಜ್ಞಾನವಿಲ್ಲದೆ ಸಂಗ್ರಹಿಸಿಟ್ಟರೆ, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಆಹಾರ ವಿಷಪೂರಿತವಾಗುವ ಅಪಾಯವಿರುತ್ತದೆ.