ಸಂತಾನ ಹೀನತೆಗೆ ಹೋಮಿಯೋ ಚಿಕಿತ್ಸೆ; ಪುರುಷರ ಬಂಜೆತನಕ್ಕೂ ಟ್ರೀಟ್​ಮೆಂಟ್

Infertility 30 Dec 19
Published on
ಇಂದು ಸಂತಾನ ಹೀನತೆ ಬಹಳ ದೊಡ್ಡ ಸಮಸ್ಯೆಯಾಗಿದೆ ಶೇ. 7 ರಿಂದ 8 ರಷ್ಟು ದಂಪತಿ ಸಂತಾನಹೀನತೆಯಿಂದ ಬಳಲುತ್ತಿದ್ದಾರೆ.

ಸಂತಾನ ಹೀನತೆಯ ಎರಡು ವಿಧಗಳು: ಪ್ರೈಮರಿ ಇನ್ ಫರ್ಟಿಲಿಟಿ: ವಿವಾಹದ ನಂತರ ಒಂದು ವರ್ಷಗಳ ಕಾಲ ಸಾಧಾರಣ ಲೈಂಗಿಕ ಜೀವನ ನಡೆಸಿಯೂ ಗರ್ಭ ಧರಿಸದಿರುವುದು.

ಸೆಕೆಂಡರಿ ಇನ್​ಫರ್ಟಿಲಿಟಿ: ಒಂದು ಬಾರಿ ಗರ್ಭ ಧರಿಸಿದ ನಂತರ 2ನೇ ಬಾರಿ ಗರ್ಭ ಧರಿಸದೇ ಇರುವುದು ಅಥವಾ ಗರ್ಭಪಾತಕ್ಕೆ ಗುರಿಯಾಗುವುದು.

ಮಹಿಳೆಯರಲ್ಲಿ ಸಂತಾನ ಹೀನತೆಗೆ ಕಾರಣಗಳು: 1) ಬದಲಾಗುತ್ತಿರುವ ಜೀವನ ಶೈಲಿ, ಅತಿಯಾದ ಮಾನಸಿಕ ಒತ್ತಡ , ಇತ್ಯಾದಿ. 2) ವಯಸ್ಸು ಹೆಚ್ಚಾದಂತೆ ಸಂತಾನ ಹೀನತೆಯ ಸಾಧ್ಯತೆ ಹೆಚ್ಚಾಗುವುದು. 3) ಧೂಮಪಾನ. 4) ಫೋಲಿಕ್ ಆ್ಯಸಿಡ್​ ಕೊರತೆ, ಕಬ್ಬಿಣದ ಅಂಶ ಕಡಿಮೆ ಇರುವುದು. 5)ವ್ಯಾಯಾಮಗಳಿಲ್ಲದ ಜೀವನ ಶೈಲಿ.  6)ರಾಸಾಯನಿಕಗಳಿಗೆ ಪದೇ ಪದೇ ದೇಹ ತೆರೆದುಕೊಂಡಾಗ (ಉದಾ: ಕೀಟನಾಶಕಗಳು, ಲೋಹಗಳು) 7) ಮಾನಸಿಕ ಒತ್ತಡ. 8) ಗರ್ಭಕೋಶದಲ್ಲಿನ ಸಮಸ್ಯೆಗಳು. 9)ಹಾರ್ಮೋ ನ್ ಸಮಸ್ಯೆಗಳು 10) ಮುಟ್ಟು ಬೇಗನೆ ನಿಂತುಹೋಗುವುದು. 11)ಗರ್ಭನಾಳದಲ್ಲಿನ ಅಡಚಡಣೆಗಳು 12)ಚಿಕ್ಕದಾದ ಗರ್ಭಾಶಯ. 13)ಪದೇಪದೇ ಗರ್ಭಪಾತ. 14) ಚಿಕ್ಕದಾದ ಯೋನಿ, ಮುಟ್ಟಿನ ಸಮಸ್ಯೆ ಇವೆಲ್ಲವೂ ಬಂಜೆತನಕ್ಕೆ ಕಾರಣವಾಗುತ್ತದೆ.

ಪುರುಷರಲ್ಲಿ ಬಂಜೆತನಕ್ಕೆ ಕಾರಣಗಳು: 1)ಕಡಿಮೆ ವೀರ್ಯಾಣುಗಳ ಸಂಖ್ಯೆ ಅಥವಾ ವೀರ್ಯಾಣುಗಳು ಇಲ್ಲದೇ ಇರುವುದು. 2)ವೀರ್ಯಾಣುಗಳ ಉತ್ಪತ್ತಿ ಹಾಗು ಅದರ ಚಲನೆ ಕಡಿಮೆ ಇರುವುದು. 3)ವೀರ್ಯಾಣು ಉತ್ಪತ್ತಿ ಇದ್ದು ಅದರ ಬೆಳವಣಿಗೆ ಕಡಿಮೆ ಇರುವುದು. 4)ವೃಷಣದಲ್ಲಿ ದ್ರವ ತುಂಬಿಕೊಳ್ಳುವುದು.ಅತಿಯಾದ ಹಸ್ತ ಮೈಥುನ-ಅವಧಿಗೆ ಮುನ್ನವೇ ಸ್ಖಲನ. 5)ಮಧುಮೇಹ, ಹೈಪೋಥೈರಾಯಿಡ್, ಉದ್ರೇಕದ ಸಮಸ್ಯೆ, ನರಗಳ ದೌರ್ಬಲ್ಯ, ಬೊಜ್ಜು.  6)ಅತಿಯಾದ ಉಷ್ಣಾಂಶ ಕೂಡ ಸಂತಾನ ಹೀನತೆಗೆ ಕಾರಣವಾಗಬಹುದು.

ಜೆನಿಟಿಕ್ ಕಾನ್ಸಿಟ್ಯೂಷನಲ್

ಹೋಮಿಯೋ ಕೇರ್ ಇಂಟರ್ ನ್ಯಾಷನಲ್​ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸ್ತ್ರೀಯರಲ್ಲಿರುವ ಹಾಗೆಯೆ ಪುರುಷರಲ್ಲಿರುವ ಕಾರಣಗಳನ್ನು ಪತ್ತೆಹಚ್ಚಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ವ್ಯಕ್ತಿಯ ಶಾರೀಕ, ಮಾನಸಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ, ಇಲ್ಲಿ ಚಿಕಿತ್ಸೆ ಪಡೆದು ಬಹಳಷ್ಟು ಜನರು ಸಂತಾನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net