ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ಘಮಘಮಿಸುವ ನಾಟಿ ಕೋಳಿ ಡ್ರೈ ಫ್ರೈ! Nati Koli Dry Fry

Nati Koli Dry Fry ಸಾಂದರ್ಭಿಕ ಚಿತ್ರ
Nati Koli Dry Fry ಸಾಂದರ್ಭಿಕ ಚಿತ್ರ
Published on
Nati Koli Dry Fry: ಚಿಕನ್​ ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಮಾಂಸಹಾರಿಗಳು ಚಿಕನ್​ನಿಂದ ಮಾಡಿದ ಎಲ್ಲಾ ಆಹಾರವನ್ನು ಸಿಕ್ಕಾ ಪಟ್ಟೆ ಇಷ್ಟ ಪಟ್ಟು ತಿನ್ನುತ್ತಾರೆ. ಆಹಾರ ಸೇವನೆಗಾಗಿ ಎಷ್ಟೋ ದೂರ ಪ್ರಯಾಣ ಬೆಳೆಸಲು ಕೂಡಾ ಮುಂದಾಗಿರುತ್ತಾರೆ. ಹಾಗಾಗಿ ನಾವಿಂದು ಚಿಕನ್​ ಪ್ರಿಯರಿಗಾಗಿ   ನಾಟಿ ಕೋಳಿ ಡ್ರೈ ಫ್ರೈ ಮಾಡುವುದನ್ನು ಹೇಳಿ ಕೊಡಲಿದ್ದೇವೆ. ಇನ್ಯಾಕೆ ತಡ ಈಗ್ಲೇ ರೆಸಿಪಿ ಟ್ರೈ ಮಾಡಿ...

ಬೇಕಾಗುವ ಪದಾರ್ಥಗಳು   

* ½ ಕೆಜಿ ನಾಟಿ ಕೋಳಿ ಮಾಂಸ
*1 ಕಪ್ ಕೊತ್ತಂಬರಿ ಸೊಪ್ಪು: 
*½ ಕಪ್ ಪುದೀನಾ ಸೊಪ್ಪು
*4 ರಿಂದ 5 ಹಸಿಮೆಣಸಿನಕಾಯಿ
*1 ಇಂಚು ಶುಂಠಿ
*10-12 ಬೆಳ್ಳುಳ್ಳಿ ಎಸಳು
*3-4 ಚಮಚ ಎಣ್ಣೆ ಅಥವಾ ತುಪ್ಪ
*2 ಈರುಳ್ಳಿ
*ಕರಿಬೇವು
*1 ಸಣ್ಣದು ಟೊಮೆಟೊ
*½ ಚಮಚ ಅರಿಶಿನ ಪುಡಿ
*1 ಚಮಚ ಅಚ್ಚಖಾರದ ಪುಡಿ
*1 ಚಮಚ ಧನಿಯಾ ಪುಡಿ
*1 ಚಮಚ ಗರಂ ಮಸಾಲಾ ಪುಡಿ
*1 ಚಮಚ ಕಾಳುಮೆಣಸಿನ ಪುಡಿ 
*ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ, ಪುದೀನಾ, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಅಲ್ಪ ಪ್ರಮಾಣದ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿ ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
ನಂತರ ಒಂದು ಕುಕ್ಕರ್‌ನಲ್ಲಿ 1 ಚಮಚ ಎಣ್ಣೆ ಕಾಯಿಸಿ, ಅದಕ್ಕೆ ತೊಳೆದ ನಾಟಿ ಕೋಳಿ ಮಾಂಸ, ಸ್ವಲ್ಪ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ನಿಮಿಷ ಚೆನ್ನಾಗಿ ಬಾಡಿಸಿ. ಮಾಂಸದಿಂದ ನೀರು ಬಿಡಲು ಆರಂಭಿಸಿದಾಗ, ಸುಮಾರು ½ ಕಪ್ ನೀರು ಸೇರಿಸಿ, ಕುಕ್ಕರ್ ಮುಚ್ಚಿ 3 ರಿಂದ 4 ವಿಸಿಲ್ ಕೂಗಿಸಿಕೊಳ್ಳಿ.
ಈಗ ಒಂದು ಕಡಾಯಿಗೆ 3 ಚಮಚ ಎಣ್ಣೆ/ತುಪ್ಪ ಹಾಕಿ ಕಾಯಿಸಿಕೊಳ್ಳಿ. ಎಣ್ಣೆ ಕಾಯ್ದ ನಂತರ ಕರಿಬೇವು ಮತ್ತು ಹೆಚ್ಚಿದ ಈರುಳ್ಳಿ ಹಾಕಿ, ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೊ ಸೇರಿಸಿ ಅದು ಸಾಫ್ಟ್ ಆಗುವವರೆಗೆ ಬಾಡಿಸಿಕೊಳ್ಳಿ. ಈಗ ನಾವು ಮೊದಲೇ ರುಬ್ಬಿಟ್ಟುಕೊಂಡ ಹಸಿ ಮಸಾಲೆ ಪೇಸ್ಟ್ ಅನ್ನು ಸೇರಿಸಿ, ಅದರ ಹಸಿ ವಾಸನೆ ಹೋಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
ಹಸಿ ಮಸಾಲೆ ಬೆಂದ ನಂತರ ಅಚ್ಚಖಾರದ ಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಒಂದು ನಿಮಿಷ ಕೈಯಾಡಿಸಿ. ಈಗ ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಂಡ ನಾಟಿ ಕೋಳಿ ತುಂಡುಗಳನ್ನು ಬಾಣಲೆಗೆ ಹಾಕಿ ಮಸಾಲೆಯೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ.
ಉರಿಯನ್ನು ಮಧ್ಯಮದಲ್ಲಿಟ್ಟು, ನೀರೆಲ್ಲಾ ಪೂರ್ತಿಯಾಗಿ ಇಂಗಿ, ಮಸಾಲೆ ಕೋಳಿ ತುಂಡುಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳುವವರೆಗೆ (ಡ್ರೈ ಆಗುವವರೆಗೆ) ಕೈಯಾಡಿಸುತ್ತಾ ಇರಿ. ಕೊನೆಯಲ್ಲಿ ಮೇಲಿನಿಂದ 1 ಚಮಚ ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ, ಮಿಕ್ಸ್ ಮಾಡಿ ಒಲೆಯಿಂದ ಇಳಿಸಿದರೆ ಘಮಘಮಿಸುವ ನಾಟಿ ಕೋಳಿ ಡ್ರೈ ಫ್ರೈ ಸವಿಯಲು ಸಿದ್ಧ (ಏಜೆನ್ಸೀಸ್). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net