Dark Neck: ಕುತ್ತಿಗೆ ಭಾಗ ಕಪ್ಪು ಬಣ್ಣಕ್ಕೆ ತಿರುಗಿದೆಯೇ? ಹೀಗೆ ಮಾಡಿದರೆ ಸುಲಭವಾಗಿ ಕಡಿಮೆಯಾಗುತ್ತದೆ ನೋಡಿ...

darkneck
Published on

Dark Neck: ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಅವರು ಯಾವಾಗಲೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ.  ಕೆಲವು ಮಹಿಳೆಯರಲ್ಲಿ ಕಪ್ಪು ಕುತ್ತಿಗೆ ಸಮಸ್ಯೆ ತೀವ್ರವಾಗಿರುತ್ತದೆ.  ಅಂತಹವರಿಗೆ ಕೆಲವು ಉತ್ತಮ ಮನೆಮದ್ದುಗಳು ಇಲ್ಲಿವೆ...

ಪಪ್ಪಾಯಿಯನ್ನು ಪೇಸ್ಟ್ ಮಾಡಿಕೊಳ್ಳಬೇಕು. ಅದಕ್ಕೆ ರೋಸ್ ವಾಟರ್ ಮತ್ತು ಸ್ವಲ್ಪ ಮೊಸರು ಸೇರಿಸಿ.. ಪ್ಯಾಕ್ ಮಾಡಿ ಸಂಪೂರ್ಣವಾಗಿ ಕುತ್ತಿಗೆಗೆ ಹಚ್ಚಬೇಕು. ಅದು ಒಣಗಿದ ನಂತರ, ನೀರಿನಿಂದ ಸ್ವಚ್ಛಗೊಳಿಸಿ. ಇದರಿಂದ ಕತ್ತಿನ ಭಾಗ ಹೊಳೆಯುತ್ತದೆ.

ಆಲೂಗೆಡ್ಡೆಯ ಸಿಪ್ಪೆ ತೆಗೆದು ಮೃದುವಾಗಿ ಮಾಡಿ. ನಂತರ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ. ನಂತರ ಮಿಶ್ರಣವನ್ನು ಸಮಸ್ಯೆಯ ಪ್ರದೇಶಕ್ಕೆ ಅನ್ವಯಿಸಿ. ಅರ್ಧ ಗಂಟೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.

ಆಲೋವೇರಾ ಜೆಲ್ ಅನ್ನು, ಕಪ್ಪಾಗಿ ರುವ, ಕುತ್ತಿಗೆಯ ಭಾಗಕ್ಕೆ ಹಚ್ಚಿ ಸುಮಾರು ಹತ್ತು ನಿಮಿಷಗಳ ಕಾಲ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಆ ಬಳಿಕ ಅರ್ಧ ಗಂಟೆ ಬಿಟ್ಟು ಶುದ್ಧವಾದ ನೀರಿನಿಂದ ತೊಳೆದುಕೊಳ್ಳಿ.

ಅರ್ಧ ಕಪ್ ಆಗುವಷ್ಟು ನೀರಿಗೆ, ಎರಡು ಟೇಬಲ್ ಚಮಚ ದಷ್ಟು ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಕೊಳ್ಳಿ.

ಓಟ್ಸ್‌ನಲ್ಲಿ ಮೊಸರನ್ನು ಬೆರೆಸಿ ಸ್ವಲ್ಪ ಸಮಯ ನೆನೆಸಿಡಿ. ಈ ಓಟ್ಸ್ ಮೃದುವಾಗುತ್ತದೆ. ಈಗ ಅದನ್ನು ಕುತ್ತಿಗೆಗೆ   ಹಚ್ಚಿಕೊಳ್ಳಿ.. ಒಣಗಿದ ನಂತರ ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ಕತ್ತಿನ ಮೇಲಿನ ಕಪ್ಪಾಗುವುದು ಕಡಿಮೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net