ಮನೆರುಚಿ: ಹೆಸರುಕಾಳಿನ ಜ್ಯೂಸ್ ಮಾಡುವ ವಿಧಾನ

hesarukalina juice feb 17 2020
Published on

ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ. ಅಂದು ಮಾಡುವ ಉಪವಾಸಕ್ಕೆ ಪೂರಕವಾದ, ಆರೋಗ್ಯಕರ ಹಾಗೂ ಸುಲಭದಲ್ಲಿ ತಯಾರಿಸಬಲ್ಲ ಹೆಸರುಕಾಳಿನ ಜ್ಯೂಸ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿ: ಹೆಸರುಕಾಳು-1 ಕಪ್ ತೆಂಗಿನಕಾಯಿ ತುರಿ-ಅರ್ಧ ಕಪ್ ಬೆಲ್ಲದ ತುರಿ-ಅರ್ಧ ಕಪ್ ಪುದಿನಾ 7-8 ಏಲಕ್ಕಿ ಪುಡಿ-ಅರ್ಧ ಚಮಚ ನಿಂಬೆರಸ-1 ಚಮಚ ಉಪ್ಪು-ಅರ್ಧ ಚಮಚ

ಮಾಡುವ ವಿಧಾನ: ಹೆಸರುಕಾಳುಗಳನ್ನು ಐದು ಗಂಟೆ ನೆನೆಸಿ ಬಸಿದು, ತೆಂಗಿನಕಾಯಿ ತುರಿ, ಬೆಲ್ಲದ ತುರಿ, ಪುದಿನಾ ಎಲೆಗಳನ್ನು ಸೇರಿಸಿ ನುಣ್ಣಗೆ ಅರೆಯಿರಿ. ಅರೆದ ಮಿಶ್ರಣಕ್ಕೆ, ಏಲಕ್ಕಿ ಪುಡಿ, ನಿಂಬೆರಸ, ಉಪ್ಪು ಸೇರಿಸಿ ಚೆನ್ನಾಗಿ ಕಲಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net