ಹಿಮೋಗ್ಲೋಬಿನ್ ಕೊರತೆಯೇ; ಈ ಸಿಂಪಲ್​ ಜ್ಯೂಸ್​ನಿಂದ ಸಿಗಲಿದೆ ಪರಿಹಾರ

Untitled-design-63
Published on

ಆರೋಗ್ಯಕರವಾಗಿರಲು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ತಪ್ಪಿಸುವುದು ಬಹಳ ಮುಖ್ಯ. ಹಿಮೋಗ್ಲೋಬಿನ್ ಒಂದು ಪ್ರೋಟೀನ್. ಇದು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ. ವ್ಯಕ್ತಿಯ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸಿದರೆ ಅದು ರಕ್ತಹೀನತೆ ಜತೆಗೆ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಿದ್ದರೆ ಅದರಿಂದ ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಬೇಕು. ದೇಹದಲ್ಲಿನ ಹಿಮೋಗ್ಲೋಬಿನ್ ಕೊರತೆಯನ್ನು ಹೋಗಲಾಡಿಸಿ ಆರೋಗ್ಯವಾಗಿಡಬಲ್ಲ ಮನೆಯಲ್ಲೇ ಮಾಡಬಹುದಾದ ಜ್ಯೂಸ್​ಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಸ್ಪಿನಾಚ್-ಮಿಂಟ್ ಜ್ಯೂಸ್: ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಲು ಪಾಲಕ್​​​ ಮತ್ತು ಪುದೀನಾ ಜ್ಯೂಸ್​​ ಕುಡಿಯಬಹುದು. 4 ಕಪ್ ಕತ್ತರಿಸಿದ ಪಾಲಕ್ ಸೊಪ್ಪಿಗೆ 1 ಕಪ್ ಪುದೀನ ಎಲೆಗಳು ಮತ್ತು ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಮಿಶ್ರಣವನ್ನು ಫಿಲ್ಟರ್ ಮಾಡಿ, 1 ಚಮಚ ನಿಂಬೆ ರಸ ಮತ್ತು 1 ಚಮಚ ಜೀರಿಗೆ ಪುಡಿ ಸೇರಿಸಿ ಕುಡಿಯಿರಿ. ಇದು ರಕ್ತದ ಪ್ರಮಾಣವನ್ನು ಹೆಚ್ಚಿಸುವುದರ ಜತೆಗೆ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.
  • ದಾಳಿಂಬೆ ಜ್ಯೂಸ್: ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ದಾಳಿಂಬೆ ಉತ್ತಮ ಆಯ್ಕೆಯಾಗಿದೆ. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ದಾಳಿಂಬೆ ಜ್ಯೂಸ್​​ ಕುಡಿಯಬಹುದು. ದಾಳಿಂಬೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಮತ್ತು ವಿಟಮಿನ್ ಸಿ ಕಂಡುಬರುತ್ತದೆ. ಪ್ರತಿದಿನ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
  • ಹಲೀಮ್ ಜ್ಯೂಸ್​​: ಹಲೀಮ್ ಜ್ಯೂಸ್​​ನಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಫೈಬರ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಇರುತ್ತದೆ. ಅರ್ಧ ಕಪ್ ನೀರಿಗೆ 1 ಚಮಚ ಹಲೀಮ್ ಮತ್ತು 2 ಚಮಚ ನಿಂಬೆ ರಸವನ್ನು ಬೆರೆಸಿ 2 ಗಂಟೆಗಳ ಕಾಲ ಇಟ್ಟು ನಂತರ ಕುಡಿಯಿರಿ. ನಿಮ್ಮ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ.
  • ಬೀಟ್ರೂಟ್ ರಸ: ಬೀಟ್ರೂಟ್ ನಮ್ಮ ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಕಬ್ಬಿಣದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಬೀಟ್ರೂಟ್​ನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಬೀಟ್ರೂಟ್ ರಸವು ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸುತ್ತದೆ. ಇದನ್ನು ಕುಡಿಯುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ. ಆಮ್ಲಜನಕದ ಪೂರೈಕೆಯೂ ಉತ್ತಮವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net