ಮೋದಿಯವರ ಮೆಚ್ಚಿನ ಝಲ್ಮುರಿ ಸೀಕ್ರೆಟ್ ರೆಸಿಪಿ ಇಲ್ಲಿದೆ: ಕೇವಲ 5 ನಿಮಿಷದಲ್ಲಿ ರೆಡಿ! Jhalmuri Recipe

 Jhalmuri Recipe ಸಾಂದರ್ಭಿಕ ಚಿತ್ರ
Jhalmuri Recipe ಸಾಂದರ್ಭಿಕ ಚಿತ್ರ
Published on
Jhalmuri Recipe: ಪಶ್ಚಿಮ ಬಂಗಾಳದ ಪ್ರಸಿದ್ಧ ಬೀದಿ ಬದಿಯ ಆಹಾರವಾದ 'ಝಲ್ಮುರಿ' ಪ್ರಧಾನಿ ನರೇಂದ್ರ ಮೋದಿ ಅವರು ಸವಿದ ನಂತರ ದೇಶಾದ್ಯಂತ ಈಗ ಬಹಳ ಸುದ್ದಿಯಲ್ಲಿದೆ. ನಮ್ಮ ಊರಿನ ಮಸಾಲೆ ಮಂಡಕ್ಕಿಗಿಂತ ತುಸು ಭಿನ್ನವಾಗಿರುವ ಈ ಚಟಪಟ ತಿನಿಸನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವುದು ಹೇಗೆ ಎಂಬುದನ್ನು ನಾವಿಂದು ಹೇಳಿಕೊಡಲಿದ್ದೇವೆ.

ಬೇಕಾಗುವ ಸಾಮಗ್ರಿಗಳು

*2-3 ಕಪ್ ಮಂಡಕ್ಕಿ
*1-2 ಚಮಚ ಸಾಸಿವೆ ಎಣ್ಣೆ
*ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ
*ಸೌತೆಕಾಯಿ, ಬೇಯಿಸಿದ ಆಲೂಗಡ್ಡೆ ಚೂರುಗಳು
*ಹುರಿದ ಕಡಲೆಕಾಯಿ,
*ಹಸಿರು ಮೆಣಸಿನಕಾಯಿ
*ಮಿಕ್ಸ್ಚರ್
*ನಿಂಬೆ ರಸ, ಉಪ್ಪು, ಕಪ್ಪು ಉಪ್ಪು
*ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಒಂದು ದೊಡ್ಡ ಪಾತ್ರೆಗೆ ಮಂಡಕ್ಕಿಯನ್ನು ಹಾಕಿಕೊಂಡು ಒಂದು ನಿಮಿಷ ಬಾಣಲೆಯಲ್ಲಿ ಬಿಸಿ ಮಾಡಿಟ್ಟುಕೊಳ್ಳಿ.
ಮತ್ತೊಂದು ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ಹಸಿರು ಮೆಣಸಿನಕಾಯಿ ಮತ್ತು ಬೇಯಿಸಿದ ಕಡಲೆಕಾಳನ್ನು ಸೇರಿಸಿ ಮಿಕ್ಸ್​ ಮಾಡಿ. ಇದಕ್ಕೆ 1-2 ಚಮಚ ಹಸಿ ಸಾಸಿವೆ ಎಣ್ಣೆ, ಎಲ್ಲಾ ಮಸಾಲ ಪುಡಿ, ಉಪ್ಪು ಹಾಗೂ ನಿಂಬೆ ರಸ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
ನಂತರ ಮಂಡಕ್ಕಿ, ಹುರಿದ ಕಡಲೆಕಾಯಿ ಮತ್ತು ಮಿಕ್ಸ್ಚರ್ ಅನ್ನು ಸೇರಿಸಿ ವೇಗವಾಗಿ ಕೈಯಾಡಿಸಿ. ಮೇಲೆ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ಚೂರುಗಳನ್ನು ಉದುರಿಸಿ ಬೇಗನೆ ಸೇವಿಸಿ ಇಲ್ಲವಾದರೆ ಮಂಡಕ್ಕಿ ಮೆತ್ತಗಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net