ನಾವೆಲ್ಲರೂ ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚೆರಿಕೆ ಕ್ರಮಗಳು ಇವೇ ನೋಡಿ| rainy season

rain effect
Published on

rainy season; ಭಾರತದಲ್ಲಿ ಮಳೆಗಾಲವು ವಿಶೇಷವಾಗಿ ಕರ್ನಾಟಕದಲ್ಲಿ ಒಂದು ಪ್ರಮುಖ ಋತುವಾಗಿದೆ. ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಈ ಮಳೆಗಾಲ ಇರುತ್ತದೆ. ಕರ್ನಾಟಕದಲ್ಲಿ ಮಳೆಗಾಲವು ಕೆಲವೊಮ್ಮೆ ಭಾರೀ ಪ್ರವಾಹವನ್ನು ತಂದೊಡ್ಡುತ್ತದೆ. ಇನ್ನೂ ನಿಯಮಿತವಾಗಿ ಸುರಿಯುವ ಮಳೆ ಪ್ರಕೃತಿಯ ಸೌಂದರ್ಯವನ್ನು ಹಸಿರುಗೊಳಿಸುವವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ ಈ ಮಳೆಗಾಲದಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳನ್ನು ನಾವುಗಳು ಎದುರಿಸಬೇಕಾಗಿರುತ್ತದೆ. ಹಾಗಿದ್ರೆ ಮಳೆಗಾಲದಲ್ಲಿ ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುವುದನ್ನು ತಿಳಿಯೋಣ.

ನೀರಿನ ಶುದ್ಧತೆ: ಕುಡಿಯುವ ನೀರನ್ನು ಕುದಿಸಿ ಅಥವಾ ಫಿಲ್ಟರ್ ಮಾಡಿ ಕುಡಿಯಿರಿ. ಏಕೆಂದರೆ ಮಳೆಗಾಲದಲ್ಲಿ ನೀರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆರೋಗ್ಯಕರ ಆಹಾರ: ತಾಜಾ ಆಹಾರ ಸೇವನೆ ಮಾಡುವುದು ಜೊತೆಗೆ ಬೇಯಿಸಿದ ಆಹಾರವನ್ನು ಸೇವಿಸುವುದು ತುಂಬಾ ಒಳ್ಳೆಯದು. ಏಕೆಂದರೆ ಹೊರಗಿನ ಆಹಾರ ನಾನಾ ಸೋಂಕಿಗೆ ಕಾರಣವಾಗಬಹುದು.

ಒಣ ಉಡುಪು: ಒದ್ದೆಯಾದ ಉಡುಪುಗಳನ್ನು ತಕ್ಷಣ ಬದಲಾಯಿಸಿ, ಒಣ ಉಡುಪುಗಳನ್ನು ಧರಿಸುವುದರಿಂದ ಚರ್ಮದ ಸೋಂಕು ತಡೆಗಟ್ಟಬಹುದಾಗಿದೆ.

ವಿದ್ಯುತ್ ಸುರಕ್ಷತೆ: ಒದ್ದೆಯಾದ ವಿದ್ಯುತ್ ಉಪಕರಣಗಳನ್ನು ಬಳಸದಿರಿ, ವಿದ್ಯುತ್ ಆಘಾತ ತಡೆಗಟ್ಟಲು.

ಪ್ರಯಾಣದ ಸುರಕ್ಷತೆ: ಮಳೆಯ ಸಂದರ್ಭದಲ್ಲಿ ಧರಿಸಬಹುದಾದ ಬಟ್ಟೆ, ರೇನ್‌ಕೋಟ್, ಅಥವಾ ಛತ್ರಿಗಳನ್ನು ಬಳಸಿದರೆ ಉತ್ತಮ.

ರಸ್ತೆ ಸುರಕ್ಷತೆ: ಮಳೆಗಾಲದ ಸಂದರ್ಭದಲ್ಲಿ ವಾಹನಗಳನ್ನು ರಸ್ತೆಯ ಮೇಲೆ ತೆಗೆದುಕೊಂಡು ಹೋದಾಗ ಜಾಗೃತೆ ವಹಿಸಿ. ಏಕೆಂದರೆ ಈ ಸಂದರ್ಭದಲ್ಲಿ ವಾಹನಗಳು ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಸಂಭವ ಕೂಡ ಇರುತ್ತದೆ. ಜೊತೆಗೆ ರಸ್ತೆ ಗುಂಡಿಗಳ ಮೇಲೆ ನಿಂತಿರುವ ನೀರಿನ ಮೇಲೆ ವಾಹನಗಳು ಸಾಗುವುದರಿಂದ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹವಾಮಾನ ಮಾಹಿತಿ: ಪ್ರಯಾಣಕ್ಕೆ ಮುಂಚೆ ಹವಾಮಾನ ವರದಿಯನ್ನು ಪರಿಶೀಲಿಸಿ.

(ಏಜೆನ್ಸೀಸ್)

ಈ ಕ್ರಮಗಳನ್ನು ಅನುಸರಿಸುವುದರಿಂದ ಮಳೆಗಾಲದಲ್ಲಿ ಆರೋಗ್ಯ, ಸುರಕ್ಷತೆ, ಮತ್ತು ಆರಾಮದಾಯಕ ಜೀವನವನ್ನು ಕಾಪಾಡಿಕೊಳ್ಳಬಹುದು.

ಸೊಳ್ಳೆ ತಡೆಗಟ್ಟುವಿಕೆ: ನೀರು ನಿಲ್ಲದಂತೆ ತಡೆಯಿರಿ ಮನೆಯ ಸುತ್ತಲೂ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಿ, ಏಕೆಂದರೆ ಇದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ  ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net