ತೂಕ ಇಳಿಸುವುದಕ್ಕೆಂದೇ ಇದೆ ಇಲ್ಲೊಂದು ಹಣ್ಣು...

Tranqline
Published on

ಕಿತ್ತಳೆಹಣ್ಣು ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯದ ದೃಷ್ಟಿಯಿಂದ ಕೂಡ ಉಪಯುಕ್ತವಾದುದು. ಕಿತ್ತಳೆಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿರುವ ಈ ಹಣ್ಣಿನಲ್ಲಿ ಅನೇಕ ಕಾಯಿಲೆಗಳನ್ನು ಹೊಡೆದೋಡಿಸುವ ಶಕ್ತಿಯಿದೆ. ಇದರಲ್ಲಿ ವಿಟಮಿನ್ ಬಿ -6, ಫೊಲೇಟ್, ಪ್ಯಾಂಟೊಥೆನಿಕ್ ಆಮ್ಲ, ರಂಜಕ, ಮೆಗ್ನೀಶಿಯಂ, ಸೆಲೆನಿಯಮ್ ಮತ್ತು ತಾಮ್ರ ಇರುತ್ತದೆ.

ಆಂಟಿ ಆಕ್ಸಿಡೆಂಟ್​ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆಹಣ್ಣಿನ ಸೇವನೆಯು ಚರ್ಮದ ಹೊಳಪಿಗೆ ಕಾರಣವಾಗುತ್ತದೆ. ಕಣ್ಣಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಈ ಹಣ್ಣಿನಲ್ಲಿರುವುದರಿಂದ ಇದರ ಸೇವನೆಯು ದೃಷ್ಟಿಶಕ್ತಿಯನ್ನು ಉತ್ತಮಗೊಳಿಸುತ್ತದೆ.

ಕಿತ್ತಳೆಹಣ್ಣಿನಲ್ಲಿರುವ ಫೈಬರ್ ಕರುಳಿನ ಜೀರ್ಣಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿನ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಸಿ ವಿಟಮಿನ್ ಬಿಳಿ ರಕ್ತಕಣಗಳನ್ನು ಹೆಚ್ಚಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಕಿತ್ತಳೆಹಣ್ಣಿನ ನಿಯತ ಸೇವನೆಯು ತೂಕ ಇಳಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಕ್ಯಾಲ್ಶಿಯಂ ಅಂಶವು ಮೂಳೆ ಹಾಗೂ ಹಲ್ಲನ್ನು ಗಟ್ಟಿಗೊಳಿಸುತ್ತದೆ. ಕಿತ್ತಳೆ ಸಿಪ್ಪೆಯಿಂದ ಮೂರು ನಿಮಿಷ ಹಲ್ಲುಜ್ಜಿದಲ್ಲಿ ಹಲ್ಲು ಹೊಳಪಾಗುವುದು. ಕಿತ್ತಳೆಹಣ್ಣಿನಲ್ಲಿರುವ ಪೋಷಕಾಂಶಗಳು ಗರ್ಭಿಣಿಯರಿಗೆ ಆರೋಗ್ಯಕರ. ಅವರು ಆರು ತಿಂಗಳ ನಂತರ ನಿತ್ಯ ಕಿತ್ತಳೆಹಣ್ಣು ಸೇವಿಸಿದರೆ ಹೆರಿಗೆ ಸಮಯದಲ್ಲಿ ಅನುಕೂಲ. ಫೋಲೇಟ್ ಮತ್ತು ಫೋಲಿಕ್ ಆಮ್ಲಗಳು ಮಿದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಮಗುವಿಗೆ ನರದ ಕಾಯಿಲೆ ಬರದಂತೆ ತಡೆಯುತ್ತದೆ.

ಹೃದಯಸಂಬಂಧಿ ರೋಗಗಳನ್ನು ದೂರ ಮಾಡಲು ಕಿತ್ತಳೆಹಣ್ಣಿನ ಸೇವನೆಯಿಂದ ಸಾಧ್ಯವಿದೆ. ಇದರಲ್ಲಿರುವ ಡಿ - ಲಿಮೋನೆನ್ ಎಂಬ ಸಂಯುಕ್ತವು ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮುಂತಾದ ವಿವಿಧ ರೀತಿಯ ಕ್ಯಾನ್ಸರ್ ಗಳನ್ನು ತಡೆಯುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net