ಮನೆಯೂಟ ತಿಂದರೂ ಕಾಡ್ತಿದೆ ಅನಾರೋಗ್ಯ, ಎಡವ್ತಿರೋದು ಎಲ್ಲಿ?; ಒಮ್ಮೆ ಹೀಗೆ ನಿಮ್ಮ ಆಹಾರ ಶೈಲಿ ಬದಲಾಯಿಸಿ ನೋಡಿ..Eat Healthy Food

ಮನೆಯೂಟ ತಿಂದರೂ ಕಾಡ್ತಿದೆ ಅನಾರೋಗ್ಯ, ಎಡವ್ತಿರೋದು ಎಲ್ಲಿ?; ಒಮ್ಮೆ ಹೀಗೆ ನಿಮ್ಮ ಆಹಾರ ಶೈಲಿ ಬದಲಾಯಿಸಿ ನೋಡಿ..Eat Healthy Food
Published on: 
  • ಆರೋಗ್ಯಕರ ಜೀವನ ಶೈಲಿಗಾಗಿ ನಿಮ್ಮ ಆಹಾರದಲ್ಲಿ ಬದಲಾವಣೆ ತನ್ನಿ.

  • ಮೊಟ್ಟೆ, ಮಾಂಸ, ಬೇಳೆ ಕಾಳು ವಿಧವಾದ ತರಕಾರಿ, ಹಣ್ಣು ತಟ್ಟೆಯಲ್ಲಿರಲಿ.

  • ನಿತ್ಯ ಹೆಚ್ಚು ನೀರು ಕುಡಿಯುವುದು, ಮೊಬೈಲ್​ ಬಿಟ್ಟು ಊಟ ಮಾಡುವುದು ಉತ್ತಮ.

Eat Healthy Food: ಆರೋಗ್ಯಕರ ಆಹಾರ ಎನ್ನುವ ಕಾರಣಕ್ಕೆ ನಿತ್ಯ ಅದೇ ಅನ್ನ, ಅದೇ ತರಕಾರಿ, ಇಡ್ಲಿ, ಪೊಂಗಲ್, ಚಪಾತಿ ತಿಂದರೆ ಸಾಲದು. ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು, ಊಟಕ್ಕೆ ವಿವಿಧ ಬಗೆಯ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸುವುದು, ನವಣೆ, ಸಿರಿಧಾನ್ಯ, ಡ್ರೈ ಫ್ರೂಟ್ಸ್ ತಿನ್ನುವುದು ದೇಹದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ.

ಈ ಬಗ್ಗೆ ಖ್ಯಾತ ಪೌಷ್ಟಿಕತಜ್ಞೆ ನಮಾಮಿ ಅಗರ್ವಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ನಾವು ಸೇವಿಸುವ ಸರಳ ಆಹಾರವನ್ನು ಹೇಗೆ ಪೌಷ್ಟಿಕ ಆಹಾರವಾಗಿ ಪರಿವರ್ತಿಸಿಕೊಳ್ಳಬಹುದು ಮತ್ತು ಯಾವ ಆರೋಗ್ಯಕರ ಅಭ್ಯಾಸಗಳನ್ನು ನಮ್ಮ ಆಹಾರ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

ಆಹಾರದಲ್ಲಿ ಬದಲಾವಣೆ ಇರಲಿ

ಇಡ್ಲಿ, ದೋಸೆ, ಚಿತ್ರನ್ನ, ಚಪಾತಿ, ಪೊಂಗಲ್​ ಇಷ್ಟಕ್ಕೆ ನಿಮ್ಮ ದೈನಂದಿನ ಆಹಾರವನ್ನು ಸೀಮಿತವಾಗಿಸಿಕೊಂಡರೆ, ನಿಮ್ಮ ಕರುಳಿನ ಆರೋಗ್ಯ ದೃಷ್ಟಿಯಲ್ಲಿ ಒಳ್ಳೆಯದಲ್ಲ. ನಮ್ಮ ಕರಳಿನಲ್ಲಿರುವ ಟ್ರಿಲಿಯನ್​ ಗಟ್ಟಲೇ ಬ್ಯಾಕ್ಟೀರಿಯಗಳು ಕರುಳಿನ ಆರೋಗ್ಯ ಕಾಪಾಡಲು ಮತ್ತು ಕೆಲಸ ಮಾಡಲು ನಿತ್ಯ ವಿವಿಧ ಆಹಾರವನ್ನು ಬಯಸುತ್ತದೆ. ಹೀಗಾಗಿ ವಿಭಿನ್ನ ಹಣ್ಣುಗಳು ಮತ್ತು ತರಕಾರಿಗಳು, ವಿಟಮಿನ್‌ಗಳು ಅಂಶವಿರುವ ಆಹಾರ ಸೇವನೆ ಮಾಡಬೇಕು.

ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ

ದೇಹಕ್ಕೆ ನೀರಿನ ಅಗತ್ಯ ಹೆಚ್ಚಿರುತ್ತದೆ. ದೇಹ ಹೈಡ್ರೇಟ್​ ಆಗಿ ಇಟ್ಟುಕೊಳ್ಳಲು ಹೆಚ್ಚು ನೀರು ಕುಡಿಯುವ ಅಗತ್ಯ ಇರುತ್ತದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ದಿನವಿಡೀ ನೀರು ಕುಡಿಯುವುದು ನಿಮಗೆ ನೀರಿನಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮೊಟ್ಟೆ, ಬೇಳೆ ಊಟದಲ್ಲಿರಲಿ

ಸ್ನಾಯುಗಳ ನಿರ್ವಣೆಗೆ, ಬೆಳವಣಿಗೆಗೆ ಹಾಗೂ ದುರಸ್ತಿಗೆ ಪ್ರೋಟಿನ್ ಮುಖ್ಯ,. ಹೀಗಾಗಿ ನಿತ್ಯವಲ್ಲದಿದ್ದರು ವಾರಕ್ಕೆ ಮೂರು ಬಾರಿಯಾದರೂ ನಿಮ್ಮ ತಟ್ಟೆಯಲ್ಲಿ ಮೊಟ್ಟೆ, ಬೇಳೆ, ಬೀನ್ಸ್, ಪನೀರ್, ಮೊಸರು, ಮೀನು ಅಥವಾ ಕೋಳಿ ಮಾಂಸದಂತಹ ಪ್ರೊಟೀನ್ ಭರಿತ ಆಹಾರವಿರಲಿ.

ಅರಾಮಾಗಿ ತಿನ್ನಿ

ತಿನ್ನುವಾಗ ಸಮಯ ಆಗೋಯ್ತು ಎಂದೋ, ಮೊಬೈಲ್ ನೋಡುತ್ತಲೋ ತಿನ್ನುವುದನ್ನು ನಿಲ್ಲಿಸಿ. ಊಟದತ್ತ ಗಮನವಿಟ್ಟು ಅದರ ಸ್ವಾದವನ್ನು ಆಸ್ವಾದಿಸುತ್ತಾ ತಿನ್ನುವುದು ಹೊಟ್ಟೆಗೆ ಉತ್ತಮ. ಜಾಗರೂಕತೆಯಿಂದ ಆಹಾರದ ಸ್ವಾದದ ಬಗ್ಗೆ ಚಿಂತಿಸುತ್ತ ತಿನ್ನುವುದು ನಿಮಗೆ ಹೊಟ್ಟೆ ತುಂಬಿದ ಭಾವನೆಯನ್ನು ಮೂಡಿಸುತ್ತದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net