ಕ್ಯಾಲ್ಸಿಯಂ, ಐರನ್ ಹಾಗೂ ನಾರಿನಾಂಶಕ್ಕಾಗಿ ಪಾಲಕ್​ ಬಿಟ್ಟು, ಈ 5 ಸೊಪ್ಪುಗಳನ್ನು ತಿನ್ನಿ..leafy vegetables

  5 Indian leafy vegetables that may offer more calcium, iron, and fibre
5 Indian leafy vegetables that may offer more calcium, iron, and fibre
Published on

ಪ್ರಮುಖ ಮುಖ್ಯಾಂಶಗಳು

  • ಐರನ್ ಮತ್ತು ಕ್ಯಾಲ್ಸಿಯಂ ವಿಚಾರದಲ್ಲಿ ಮೆಂತ್ಯ, ನುಗ್ಗೆಸೊಪ್ಪು, ದಂಟು ಪಾಲಕ್​ಗಿಂತ ಬೆಸ್ಟ್​.
  • 100 ಗ್ರಾಂ ಪಾಲಕ್‌ನಲ್ಲಿ 4.14 ಗ್ರಾಂ ನಾರಿನಾಂಶವಿದೆ. ನುಗ್ಗೆ ಸೊಪ್ಪು ಬಿಟ್ಟರೆ ಇದನ್ನು ತಿನ್ನುವುದು ಒಳಿತು.
  • ಮೆಂತ್ಯ ಸೊಪ್ಪಿನಲ್ಲಿ ಪಾಲಕ್‌ಗಿಂತ ಸುಮಾರು ಎರಡು ಪಟ್ಟು ಹೆಚ್ಚು ಐರನ್ ಮತ್ತು ಕ್ಯಾಲ್ಸಿಯಂ ಅಂಶವಿದೆ.
5 Indian leafy vegetables that may offer more calcium, iron, and fibre: ಭಾರತೀಯರು ಹೆಚ್ಚಾಗಿ ಸೊಪ್ಪನ್ನು ಸೇವನೆ ಮಾಡುತ್ತಾರೆ. ಅದರಲ್ಲು ಹೆಚ್ಚಾಗಿ ನೆನಪಾಗೋದು ಪಾಲಕ್ ಸೊಪ್ಪು. ಇದರಲ್ಲಿ ಕಬ್ಬಿಣಾಂಶ, ಪೋಷಕಾಂಶ ಎಲ್ಲವೂ ಇದೆ ಎಂದು ಹೇಳಲಾಗುತ್ತದೆ. ಆದರೆ, ಭಾರತೀಯ ಆಹಾರ ಸಂಯೋಜನಾ ಕೋಷ್ಟಕ (IFCT 2017) ಪ್ರಕಾರ, ಪಾಲಕ್​​ ಸೊಪ್ಪಿಗಿಂತಲು ಕ್ಯಾಲ್ಸಿಯ, ಐರನ್​ ಮತ್ತು ನಾರಿನಾಂಶ ಇರುವ ಸೊಪ್ಪುಗಳಿವೆ ಎಂದು ಹೇಳಿದೆ.
ಹಾಗಾದ್ರೆ ಐರನ್, ಕ್ಯಾಲ್ಸಿಯಂ ಮತ್ತು ನಾರಿನಾಂಶವನ್ನು ಹೊಂದಿರುವ ಆ ಐದು ಸೊಪ್ಪು ಯಾವುದು ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

ಐದು ಸೊಪ್ಪು ಯಾವುದು?

ಮೆಂತ್ಯ ಸೊಪ್ಪನ್ನು ಸಾರು ಹಾಗೂ ಪಲಾವ್​ಗೆ ಬಳಕೆ ಮಾಡಲಾಗುತ್ತದೆ. ಪಾಲಕ್​ಗೆ ಹೋಲಿಕೆ ಮಾಡಿದರೆ ಮೆಂತ್ಯ ಸೊಪ್ಪಿನಲ್ಲಿ ಅಧಿಕ ಐರನ್​ ಹಾಗೂ ಕ್ಯಾಲ್ಸಿಯಂ ಅಂಶವಿದೆ. IFCT ಪ್ರಕಾರ, ಪ್ರತಿ 100 ಗ್ರಾಂ ಮೆಂತ್ಯದಲ್ಲಿ 5.69 ಮಿ.ಗ್ರಾಂ ಐರನ್ ಮತ್ತು 274 ಮಿ.ಗ್ರಾಂ ಕ್ಯಾಲ್ಸಿಯಂ ಇದೆ. ಪಾಲಕ್‌ನಲ್ಲಿ ಐರನ್ 2.95ಮಿ.ಗ್ರಾಂ ಹಾಗೂ ಕ್ಯಾಲ್ಸಿಯಂ 142ಮಿ.ಗ್ರಾಂ ಮಾತ್ರ ಇರುತ್ತದೆ ಎಂದು ಮಾಹಿತಿ ಬಿಚ್ಚಿಟ್ಟಿದೆ

ದಂಟಿನ ಸೊಪ್ಪು

ಸಾಮಾನ್ಯವಾಗಿ ದಂಟನ್ನು ಮಸ್ಸೊಪ್ಪಿಗೆ ಅಥವಾ ಬಸ್ಸಾರಿಗೆ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಪ್ರೊಟೀನ್​ ಮತ್ತು ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಇದು ಪಾಲಕ್​ಗಿಂತ ಹೆಚ್ಚು ಉತ್ತಮ ಆಹಾರವಾಗಿದೆ. ಈ ಸೊಪ್ಪು ಹಸಿರು ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿರುತ್ತದೆ.ಪ್ರತಿ 100 ಗ್ರಾಂ ಹಸಿರು ದಂಟು ಸೊಪ್ಪಿನಲ್ಲಿ 194 ಮಿ.ಗ್ರಾಂ ಕ್ಯಾಲ್ಸಿಯಂ, 4.64 ಮಿ.ಗ್ರಾಂ ಐರನ್ ಹಾಗೂ 3.91 ಗ್ರಾಂ ಪ್ರೋಟೀನ್ ಇದೆ.

ನುಗ್ಗೆ ಸೊಪ್ಪು

ಮಲ ಬದ್ಧತೆಗೆ ಸೇರಿದಂತೆ ನಾನಾ ಆರೋಗ್ಯ ವಿಚಾರಕ್ಕೆ ನುಗ್ಗೆ ಸೊಪ್ಪು ಬೆಸ್ಟ್​​ ಇದರಲ್ಲಿರುವ ಪ್ರೋಟೀನ್​, ನಾರಿನಾಂಶ ಮತ್ತು ಐರನ್​​ ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಪಾಲಕ್​ನ್ನೇ ಪ್ರತಿಬಾರಿ ಕೊಳ್ಳುವ ಬದಲಾಗಿ ಒಂದೊಮ್ಮೆ ನುಗ್ಗೆ ಸೊಪ್ಪು ಬಳಕೆ ಮಾಡುವುದು ಸೂಕ್ತ. ನುಗ್ಗೆ ಸೊಪ್ಪಿನಲ್ಲಿ ಪ್ರತಿ 100 ಗ್ರಾಂ ಹಸಿರು ನುಗ್ಗೆಸೊಪ್ಪಿನಲ್ಲಿ 6.41 ಗ್ರಾಂ ಪ್ರೋಟೀನ್, 282 ಮಿ.ಗ್ರಾಂ ಕ್ಯಾಲ್ಸಿಯಂ, 5.62 ಗ್ರಾಂ ನಾರಿನಾಂಶ ಮತ್ತು 4.56 ಮಿ.ಗ್ರಾಂ ಐರನ್ ದೊರೆಯುತ್ತದೆ.

ಕೆಸುವಿನ ಎಲೆ

ಪತ್ರೊಡೆಗೆ ಬಳಕೆ ಮಾಡುವ ಕೆಸುವಿನ ಎಲೆಯಲ್ಲಿ ಕ್ಯಾಲ್ಸಿಯಂ ಮತ್ತು ನಾರಿನಾಂಶ ಸಮೃದ್ಧವಾಗಿ ಇದೆ. ಪ್ರತಿ 100 ಗ್ರಾಂನಲ್ಲಿ 182 ಮಿ.ಗ್ರಾಂ ಕ್ಯಾಲ್ಸಿಯಂ, 3.69 ಗ್ರಾಂ ನಾರಿನಾಂಶ ಮತ್ತು 3.41 ಮಿ.ಗ್ರಾಂ ಐರನ್ ಇದೆ. ನೆನಪಿಡಿ ಇದನ್ನು ಎಂದಿಗೂ ಹಸಿಯಾಗಿ ತಿನ್ನಬೇಡಿ. ಬದಲಾಗಿ ಬೇಯಿಸಿ ತಿನ್ನುವುದು ಸೂಕ್ತ.

ಸಾಸಿವೆ ಸೊಪ್ಪು

ಚಳಿಗಾಲದ ವಿಶೇಷ ಸೊಪ್ಪು. ಇದು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಪ್ರತಿ 100 ಗ್ರಾಂ ಹಸಿರು ಸಾಸಿವೆ ಸೊಪ್ಪಿನಲ್ಲಿ ಬೀರಿದಂತೆ 403 ಮಿ.ಗ್ರಾಂ ಕ್ಯಾಲ್ಸಿಯಂ, 2.41 ಗ್ರಾಂ ನಾರಿನಾಂಶ ಹಾಗೂ 2.41 ಮಿ.ಗ್ರಾಂ ಐರನ್ ಇರುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net