

ನಿತ್ಯ ರಾತ್ರಿ ಹಾಲು ಕುಡಿಯುವ ಅಭ್ಯಾಸವಿದೆಯೇ, ಅದರೊಂದಿಗೆ ಅರಿಶಿನ ಸೇರಿಸಿ.
ಎನರ್ಜಿಟಿಕ್ ಪೇಯಕ್ಕಿಂತ ಹಾಲು, ಅರಿಶಿನ ದೇಹದ ಆರೋಗ್ಯಕ್ಕೆ ಬೆಸ್ಟ್.
ಜೀರ್ಣಾಂಗ ವ್ಯವಸ್ಥೆ ಬಲಪಡಿಸಲು, ಮೂಳೆ ಗಟ್ಟಿ ಮಾಡಲು, ರೋಗನಿರೋಧ ಶಕ್ತಿ ಹೆಚ್ಚಿಸಲು ಹಾಲು ಸಹಕಾರಿ.
Know The Amazing Benefits Of Turmeric Milk: ಹಾಲಿನ ವಾಸನೆಯಿಂದಾಗಿ ಕೆಲವರು ಅದನ್ನು ಹೊಟ್ಟೆಗಿಳಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರು ಬೂಸ್ಟ್, ಬಾದಾಮಿ ಹೀಗೆ ನಾನಾ ರೀತಿಯ ಕಾಂಬಿನೇಷನ್ ಜೊತೆಗೆ ಹೀರುತ್ತಾರೆ. ಒಂದು ಖುಷಿಯ ವಿಚಾರ ಎಂದರೆ ಇಷ್ಟೆಲ್ಲ ಗೋಜಲಿಗೆ ಸಿಲುಕಿ ಹಾಲು ಕುಡಿಯುವ ಸಮಸ್ಯೆಯೇ ಇನ್ಮುಂದೆ ನಿಮಗೆ ಬೇಡ. ದುಬಾರಿ ಪುಡಿಗಳಿಗೆ ಹಣ ಕೊಡುವ ಅಗತ್ಯವೂ ಇಲ್ಲ. ಮನೆಯಲ್ಲಿ ಸದಾ ಬಳಕೆಯಾಗುವ ಅರಿಶಿನವನ್ನು ಬೆರಸಿ ಹಾಲು ಕುಡಿಯುವುದು ಆರೋಗ್ಯಕ್ಕೂ ಉತ್ತಮ.
ಹೌದು, ಹಾಲಿಗೆ ಅರಿಶಿನ ಬೆರಸಿಕುಡಿಯುವುದರಿಂದ, ಇದರಲ್ಲಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಕಬ್ಬಿಣ, ಪ್ರೊಟಿನ್ನಂತಹ ಖನಿಜಾಂಶಗಳು ನಿಮ್ಮ ಹೊಟ್ಟೆಯ ಮೂಲಕ ದೇಹ ಸೇರಲು ಸಹಾಯ ಮಾಡುತ್ತದೆ. ಹೀಗಾಗಿ ಹಿರಿಯರು ಮಲಗುವ ಮುನ್ನ ಹಾಲಿಗೆ ಅರಿಶಿನ ಹಾಕಿ ಕುಡಿಯುವ ವಾಡಿಕೆಯನ್ನು ಇಟ್ಟುಕೊಂಡಿದ್ದಾರೆ. ನಾವೀಗ ಇದ್ರಿಂದ ಸಿಗುವ ಕೆಲವು ನಿಖರ ಲಾಭದ ಬಗ್ಗೆ ತಿಳಿದುಕೊಳ್ಳೋಣ.
ರಾತ್ರಿ ಮಲಗುವಾಗ ಹಾಲು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆ, ಉರಿಯೂತ ಕಡಿಮೆಯಾಗುವಂತೆ ಮಾಡುತ್ತದೆ. ಯಕೃತ್ತಿನಲ್ಲಿ ಹೆಚ್ಚು ಉತ್ಪಾದನೆಯಾಗುವ ಪಿತ್ತರಸವು ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಅದನ್ನು ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶವು ತಡೆಯೊಡ್ಡುತ್ತದೆ. ಬೆಚ್ಚಗಿನ ಹಾಲು ಕರುಳಿನ ಸ್ನಾಯುವನ್ನು ಶಾಂತಗೊಳಿಸಿ..ಮಲವಿಸರ್ಜನೆಗೆ ಸಹಾಯ ಮಾಡುತ್ತದೆ.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕೊಲೆಸ್ಟ್ರಾಲ್, ಉರಿಯೂತ, ರಕ್ತ ಹೆಪ್ಪುಗಟ್ಟುವಿಕೆ ನಿಯಂತ್ರಣ, ರಕ್ತದೊತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಅರಿಶಿನವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಪರೋಕ್ಷವಾಗಿ ಕೆಲಸ ಮಾಡುತ್ತದೆ. ರಕ್ತನಾಳದಲ್ಲಿರುವ ಉರಿಯೂತ ಕಡಿಮೆ ಮಾಡಲು ಈ ಅರಿಶಿನದ ಹಾಲು ಸಹಾಯ ಮಾಡುತ್ತದೆ.
ರಾತ್ರಿ ಮಲಗುವಾಗ ಅರಿಶಿನ ಹಾಲು ಕುಡಿದು ಮಲಗುವುದು ಉತ್ತಮ ನಿದ್ರೆಗೆ ನಾಂದಿ ಹಾಡುತ್ತದೆ. ಅರಿಶಿನದಲ್ಲಿರುವ ಅಂಶವು ಮನಸ್ಸಿನ ಶಾಂತಿ ಒದಗಿಸಿ..ಸಿರೊಟೋನಿನ್ ಮತ್ತು ಡೊಪೊಮಿನ್ ಉತ್ತೇಜಿಸಲು ಸಹಾಯ ಮಾಡುತ್ತದೆ. ನೋವು ನಿವಾರಣೆಗೆ ಸಹಕಾರಿ, ಕೀಲು, ಸ್ನಾಯು ನೋವಿನ ನಿವಾರಣೆಗೆ ಇದು ಸಹಾಯ ಮಾಡುತ್ತದೆ.
ಕಾದ 200 ಮಿ.ಲೀ ಹಾಲಿಗೆ ಅರ್ಧ ಚಮಚ ಅರಿಶಿನ, ಚಿಟಿಕೆ ಕಾಳು ಮೆಣಸಿನ ಪುಡಿ ಹಾಕಿ, ಕಡಿಮೆ ಫ್ಲೇಮ್ನಲ್ಲಿ ಕುದಿಸಿ. ಮಲಗುವ ಅರ್ಧಗಂಟೆ ಮುಂಚೆ ನಿತ್ಯ ಹಾಲು ಕುಡಿದು ಮಲಗುವ ಅಭ್ಯಾಸ ಮಾಡಿಕೊಳ್ಳಿ ಇದು...ನೈಸರ್ಗಿಕವಾಗಿ ದೇಹಕ್ಕೆ ಎನರ್ಜಿ ಕೊಡಲು ಸಹಾಯ ಮಾಡುತ್ತದೆ. ಆದರೆ, ಗಮನಿಸಿ ಹಾಲಿನಲ್ಲಿರುವ ಲ್ಯಾಕ್ಟೋಸ್ ನಿಮಗೆ ಅಲರ್ಜಿಯನ್ನುಂಟು ಮಾಡುತ್ತದೆ ಎಂದರೆ, ಅದನ್ನು ಅವಾಯ್ಡ್ ಮಾಡುವುದು ಬೆಸ್ಟ್ ಆಯ್ಕೆಯಾಗಿರುತ್ತದೆ, (ಏಜೆನ್ಸೀಸ್).