ಕ್ಯಾನ್ಸರ್‌ ಬರುವ ಮುನ್ನವೇ ತಡೆಯಬಹುದೇ? ಅಗ್ಗದ ವಿಟಮಿನ್‌ ಸಿ ಬಗ್ಗೆ ವಿಜ್ಞಾನಿಗಳ ಹೊಸ ಸಂಶೋಧನೆ!..vitamin c

ಕ್ಯಾನ್ಸರ್‌ ಎಂಬ ಮಾರಕ ಕಾಯಿಲೆ ಬರುವ ಮೊದಲೇ ಅದನ್ನು ತಡೆಯಲು ಸಾಧ್ಯವೇ? ಸಾಮಾನ್ಯವಾಗಿ ಎಲ್ಲೆಡೆ ಸುಲಭವಾಗಿ ಸಿಗುವ ವಿಟಮಿನ್ ಸಿ ಈ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ. ರಕ್ತದ ಕ್ಯಾನ್ಸರ್‌ ಅಪಾಯ ಹೊಂದಿರುವವರ ಮೇಲೆ ನಡೆಸಿದ ಕ್ಲಿನಿಕಲ್ ಪ್ರಯೋಗದಲ್ಲಿ ವಿಜ್ಞಾನಿಗಳಿಗೆ ಕೆಲವು ಆಶಾದಾಯಕ ಫಲಿತಾಂಶಗಳು ದೊರೆತಿವೆ...vitamin c
ವಿಟಮಿನ್‌ ಸಿ
ವಿಟಮಿನ್‌ ಸಿ AI image WEB
Published on: 

Vitamin C: ಕ್ಯಾನ್ಸರ್‌ ಎಂಬ ಹೆಸರು ಕೇಳಿದರೇ ಸಾಕು ಆತಂಕ ಶುರುವಾಗುತ್ತದೆ. ಅದರಲ್ಲೂ ರಕ್ತದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ಬರುವ ಅಪಾಯವಿದ್ದರೆ ಹೇಳುವುದೇ ಬೇಡ. ಆದರೆ, ನಮ್ಮ ಸುತ್ತಮುತ್ತಲಿನಲ್ಲೇ ಸುಲಭವಾಗಿ ಸಿಗುವ, ಕಡಿಮೆ ಬೆಲೆಯ ವಿಟಮಿನ್‌ವೊಂದು ಇಂತಹ ಅಪಾಯವನ್ನು ತಗ್ಗಿಸಲು ನೆರವಾಗಬಹುದೇ? ಹೌದು, ವಿಟಮಿನ್ ಸಿ ಕುರಿತು ವಿಜ್ಞಾನಿಗಳು ನಡೆಸಿರುವ ಹೊಸ ಕ್ಲಿನಿಕಲ್ ಪ್ರಯೋಗದಲ್ಲಿ ಇಂತಹದ್ದೊಂದು ಕುತೂಹಲಕಾರಿ ಸುಳಿವು ಸಿಕ್ಕಿದೆ. 109 ಜನರನ್ನು ಒಳಗೊಂಡ ಈ ಅಧ್ಯಯನ ಭವಿಷ್ಯದಲ್ಲಿ ರಕ್ತದ ಕ್ಯಾನ್ಸರ್ ತಡೆಗಟ್ಟುವ ಸಂಶೋಧನೆಗೆ ಹೊಸ ನಿರೀಕ್ಷೆ ಮೂಡಿಸಿದೆ.

ಕ್ಯಾನ್ಸರ್‌ ಎಂಬ ಮಾರಕ ಕಾಯಿಲೆ ಬರುವ ಮೊದಲೇ ಅದನ್ನು ತಡೆಯಲು ಸಾಧ್ಯವೇ? ಸಾಮಾನ್ಯವಾಗಿ ಎಲ್ಲೆಡೆ ಸುಲಭವಾಗಿ ಸಿಗುವ ವಿಟಮಿನ್ ಸಿ ಈ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ. ರಕ್ತದ ಕ್ಯಾನ್ಸರ್‌ ಅಪಾಯ ಹೊಂದಿರುವವರ ಮೇಲೆ ನಡೆಸಿದ ಕ್ಲಿನಿಕಲ್ ಪ್ರಯೋಗದಲ್ಲಿ ವಿಜ್ಞಾನಿಗಳಿಗೆ ಕೆಲವು ಆಶಾದಾಯಕ ಫಲಿತಾಂಶಗಳು ದೊರೆತಿವೆ.

ಡೆನ್ಮಾರ್ಕ್‌ನ ಕೋಪನ್‌ಹೇಗನ್ ವಿಶ್ವವಿದ್ಯಾಲಯ ಮತ್ತು ವ್ಯಾನ್ ಆಂಡೆಲ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಇದರಲ್ಲಿ ಒಟ್ಟು 109 ಜನರು ಭಾಗವಹಿಸಿದ್ದರು. ಇವರಿಗೆ CCUS ಅಥವಾ ಮೈಲೋಡಿಸ್ಪ್ಲಾಸ್ಟಿಕ್ ಸಿಂಡ್ರೋಮ್ ಎಂಬ ರಕ್ತದ ಸಮಸ್ಯೆಗಳು ಪತ್ತೆಯಾಗಿದ್ದವು. ಇವು ಮುಂದೆ ಅಕ್ಯೂಟ್ ಮೈಲಾಯ್ಡ್ ಲ್ಯುಕೇಮಿಯಾ ಎಂಬ ಗಂಭೀರ ರಕ್ತದ ಕ್ಯಾನ್ಸರ್‌ಗೆ ತಿರುಗುವ ಅಪಾಯ ಹೊಂದಿವೆ.

ಇದನ್ನೂ ಓದಿ: ಬಾವಲಿಗಳ ಕಣ್ಣಿಗೆ ಮಣ್ಣೆರೆಚಲು ಪತಂಗಗಳು ಜನನಾಂಗದಿಂದ ವಿಚಿತ್ರ ಸೌಂಡ್ ಮಾಡುತ್ತವೆ ಅಂದ್ರೆ ನಂಬ್ತೀರಾ ? ಇಲ್ಲಿದೆ ಅಚ್ಚರಿ ಸಂಗತಿ...Moths

ವಿಟಮಿನ್ ಸಿ ಹೇಗೆ ಕೆಲಸ ಮಾಡುತ್ತದೆ?

ಸಂಶೋಧಕರ ಪ್ರಕಾರ, ವಿಟಮಿನ್ ಸಿ ದೇಹದಲ್ಲಿರುವ TET2 ಎಂಬ ಕಿಣ್ವದ ಕಾರ್ಯನಿರ್ವಹಣೆಗೆ ನೆರವಾಗುತ್ತದೆ. ಈ ಕಿಣ್ವವು ಜೀವಕೋಶಗಳಲ್ಲಿನ ಜೀನ್‌ಗಳ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ದೇಹದಲ್ಲಿ ವಿಟಮಿನ್ ಸಿ ಪ್ರಮಾಣ ಸರಿಯಾಗಿದ್ದರೆ ಈ ರಕ್ಷಣಾತ್ಮಕ ಪ್ರಕ್ರಿಯೆಗೆ ನೆರವಾಗಬಹುದು ಎಂಬುದು ವಿಜ್ಞಾನಿಗಳ ನಿರೀಕ್ಷೆ.

109 ಜನರ ಪ್ರಯೋಗದಲ್ಲಿ ಕಂಡಿದ್ದೇನು?

ವಿಟಮಿನ್ ಸಿ ಪಡೆದವರಲ್ಲಿ ಐದು ಜನರು ಹೆಚ್ಚಿನ ಅಪಾಯದ ಆಕ್ರಮಣಕಾರಿ ರಕ್ತದ ಕ್ಯಾನ್ಸರ್ ಹಂತಕ್ಕೆ ತಲುಪಿದ್ದರೆ, ಪ್ಲಸೀಬೊ ಪಡೆದವರಲ್ಲಿ ಈ ಸಂಖ್ಯೆ ಒಂಬತ್ತು ಆಗಿತ್ತು. ಅಲ್ಲದೆ, ವಿಟಮಿನ್ ಸಿ ಪಡೆದವರಲ್ಲಿ ಕೆಲವು ಉರಿಯೂತದ ಸೂಚಕಗಳ ಏರಿಕೆಯೂ ಕಡಿಮೆಯಾಗಿರುವುದು ಕಂಡುಬಂದಿದೆ. ಆರಂಭದಲ್ಲಿ ವಿಟಮಿನ್ ಸಿ ಕೊರತೆ ಹೊಂದಿದ್ದವರಲ್ಲಿ ಅದರ ಮಟ್ಟ ಸಾಮಾನ್ಯ ಸ್ಥಿತಿಗೆ ಮರಳಿದೆ.

ಆದರೆ, ಈ ಫಲಿತಾಂಶವೇ ವಿಟಮಿನ್ ಸಿ ಕ್ಯಾನ್ಸರ್ ತಡೆಯುತ್ತದೆ ಎಂಬುದಕ್ಕೆ ಅಂತಿಮ ಸಾಕ್ಷಿಯಲ್ಲ. ಪ್ರಯೋಗದಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆ ಇರುವುದರಿಂದ ಕಂಡುಬಂದ ವ್ಯತ್ಯಾಸವು ಸಂಖ್ಯಾಶಾಸ್ತ್ರೀಯವಾಗಿ ಮಹತ್ವ ಪಡೆದಿಲ್ಲ. ಈ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಇನ್ನೂ ಹೆಚ್ಚಿನ ಜನರನ್ನು ಒಳಗೊಂಡ ಮೂರನೇ ಹಂತದ ಪ್ರಯೋಗದ ಅಗತ್ಯವಿದೆ.ಸಾಮಾನ್ಯವಾಗಿ ಸುಲಭವಾಗಿ ಲಭ್ಯವಾಗುವ ವಿಟಮಿನ್ ಸಿ ಭವಿಷ್ಯದಲ್ಲಿ ರಕ್ತದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸಬಹುದೇ ಎಂಬ ಕುತೂಹಲಕ್ಕೆ ಈ ಅಧ್ಯಯನ ಹೊಸ ದಿಕ್ಕು ನೀಡಿದೆ. ಈ ಸಂಶೋಧನೆಯು ಕ್ಯಾನ್ಸರ್​ಜರ್ನಲ್‌ನಲ್ಲಿ ಪ್ರಕಟವಾಗಿದೆ. ( ಏಜೇನ್ಸಿಸ್​)