

ಹೊಟ್ಟೆಯುಬ್ಬರ ಮತ್ತು ಮುಟ್ಟಿನ ಸಮಯದ ಸಮಸ್ಯೆಗಳಿಗೆ ರಾಮಬಾಣ ಈ ಪಾನೀಯ.
ನಿತ್ಯ ಮಲಗುವ ಮುನ್ನ ಅಜ್ವಾನ, ಧನಿಯಾ, ಅರಿಶಿನ ಬೆರಸಿದ ನೀರು ಕುದಿಸಿ ಕುಡಿಯಿರಿ.
ಬೊಜ್ಜು ಕರಗಿಸಲು ಪರಿಣಾಮಕಾರಿಯಾಗಿ ಸಹಾಯ ಮಾಡುವ ಅಜ್ವಾನ, ಧನಿಯಾ, ಅರಿಶಿನ ನೀರು.
Lose Belly Fat: ಹೊಟ್ಟೆಯ ಕೊಬ್ಬು ದೇಹದ ಸೌಂದರ್ಯಕ್ಕೆ ಧಕ್ಕೆ ತರೋದಲ್ಲದೆ, ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಕೆಲವರಿಗೆ ಬೊಜ್ಜು ಕರಗಿಸುವುದೇ ಒಂದು ದೊಡ್ಡ ಸಮಸ್ಯೆ. ಯೋಗ, ಜಿಮ್ ಹೀಗೆ ನಾನಾ ವಿಧಾನಗಳ ಮೂಲಕ ಬೊಜ್ಜಿಗೆ ಗುಡ್ಬೈ ಹೇಳಲು ಪ್ರಯತ್ನಿಸುತ್ತಾರೆ. ಆದರೆ, ಸರಳ ವಿಧಾನದಲ್ಲಿ ಬೊಜ್ಜು ಕರಗಿಸಲು ಸಾಧ್ಯ ಎಂದು ಆಹಾರ ತಜ್ಞೆ ಖ್ಯಾತಿ ರೂಪಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹೌದು ರಾತ್ರಿ ಮಲಗುವ ಮುನ್ನ ಸಿಹಿ ತಿಂಡಿಗಳನ್ನು ತಿನ್ನುವ ಬದಲು...ಅಜ್ವಾನ ಅಥವಾ ಸೋಂಪು ಹಾಗೂ ಧನಿಯಾ ಕಾಳು, ಅರಿಶಿನ ಬೆರೆಸಿ ಚಹಾದಂತೆ ಸೇವಿಸುವುದರಿಂದ ಉತ್ತಮ ನಿದ್ರೆ, ಹೊಟ್ಟೆಯುಬ್ಬರ ನಿಯಂತ್ರಣ ಸೇರಿದಂತೆ ಆರೋಗ್ಯಕರ ದೇಹವನ್ನು ರೂಪಿಸಿಕೊಳ್ಳಬಹುದು ಎನುತ್ತಾರೆ ರೂಪಾನಿ.
ಅಜ್ವಾನ ಮತ್ತು ಸೊಂಪು ಕಾಳುಗಳಮಿಶ್ರಣದ 1 ತುಂಬಿದ ಚಮಚ ತೆಗೆದುಕೊಳ್ಳಿ.
ಇದಕ್ಕೆ 1/4 ಚಮಚ ತಾಜಾ ಅರಿಶಿನ ಪುಡಿ ಮತ್ತು 1 ಚಮಚ ಕೊತ್ತಂಬರಿ ಬೀಜಗಳನ್ನು ಸೇರಿಸಿ.
ಈ ಮಸಾಲೆ ಮಿಶ್ರಣದ ಮೇಲೆ 500-600 ಮಿಲಿ ಕುದಿಯುವ ನೀರನ್ನು ಹಾಕಿ.
ಮಿಶ್ರಣವನ್ನು ಸ್ಟೌವ್ ಮೇಲೆ ಇಟ್ಟು ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ.
ಬಳಿಕ ಚಹಾವನ್ನು ಹೆಚ್ಚುವರಿಯಾಗಿ 15 ನಿಮಿಷಗಳ ಕಾಲ ನೆನೆಯಲು ಬಿಡಿ.
ಕೊನೆಯಲ್ಲಿ ಚಹಾವನ್ನು ಸೋಸಿ, ಮಲಗುವ ಮುನ್ನ ಉಗುರುಬೆಚ್ಚಗಿನ ಸ್ಥಿತಿಯಲ್ಲಿ ಸವಿಯಿರಿ.
ಅಜ್ವಾನ ಅಥವಾ ಸೋಂಪಿನ ನೀರು. ಹೊಟ್ಟೆ ಉಬ್ಬರಕ್ಕೆ ಮನೆ ಮದ್ದಾಗಿ ಬಳಕೆ ಮಾಡು ಅಜ್ವಾನವನ್ನು ಮಲಗುವ ಮುನ್ನ ಕುದಿಸಿ ಕುಡಿಯಿರಿ. ಇಲ್ಲದಿದ್ದರೆ ಸೋಂಪು ಬೆರೆಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಹೊಟ್ಟೆ ಉಬ್ಬರದಂತಹ ಸಮಸ್ಯೆಗೆ ಕಡಿವಾಣ ಹಾಕಲು ಸಹಾಯ ಮಾಡುತ್ತದೆ.
ಅರಿಶಿನ
ಭಾರತೀಯರು ಪ್ರಾಚೀನ ಕಾಲದಿಂದಲೂ ಬಳಕೆ ಮಾಡುತ್ತಿರುವ ಅರಿಶಿನದಲ್ಲಿ ಉತ್ಕರ್ಷಣ ನಿರೋಧಕವಿದ್ದು, ಇದು ಉರಿಯೂತ ಮತ್ತು ದೇಹದ ಕೊಬ್ಬು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹಸಿವಿನ ಚಪಲವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಇದು ಪ್ರಬಲವಾದ ಆಂಟಿಆಕ್ಸಿಡೆಂಟ್ ಆಗಿದ್ದು, ಹೊಟ್ಟೆಯ ಬೊಜ್ಜು ಕರಗಿಸಲು ನೆರವಾಗುತ್ತದೆ.
ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜವು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ, ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ತೂಕ ನಿರ್ವಹಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಲಗುವ ಮುನ್ನ ಈ ಮೂರು ಪದಾರ್ಥವನ್ನು ಕಡಿಮೆ ಉರಿಯಲ್ಲಿ ಕುದಿಸಿ ಆನಂತರ ಸೋಸಿ ಕುಡಿಯುವುದು ಸರಿಯಾದ ವಿಧಾನವಾಗಿದೆ
ಮೂರು ಪದಾರ್ಥದ ನೀರಿನಿಂದ ಸಿಗುವ ಲಾಭ
ಇದು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುವ ಮೂಲಕ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪರೋಕ್ಷವಾಗಿ ಈಸ್ಟ್ರೋಜೆನ್ ಪ್ರಾಬಲ್ಯವನ್ನು ನಿರ್ವಹಿಸಲು ನೆರವಾಗುತ್ತದೆ.
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮತ್ತು ಇನ್ಸುಲಿನ್ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಮೂಲಕ, ಈ ಚಹಾವು ತೂಕ ಇಳಿಸುವ ಪ್ರಯತ್ನಗಳಿಗೆ ಬೆಂಬಲ ನೀಡುತ್ತದೆ, ವಿಶೇಷವಾಗಿ ಮಹಿಳೆಯರಿಗೆ ಇದು ಹೆಚ್ಚು ಪ್ರಯೋಜನಕಾರಿ.
ಇದು ಉರಿಯೂತದ ಪರಿಣಾಮಗಳನ್ನು ಹೊಂದಿದ್ದು, ದೇಹದಲ್ಲಿನ ಉರಿಯೂತ ಮತ್ತು ನೀರಿನಂತ್ಯ ಉಳಿಯುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,
ಈ ಚಹಾವು ನಿಮ್ಮ ಆರೋಗ್ಯ ದಿನಚರಿಗೆ ಅತ್ಯುತ್ತಮ ಸೇರ್ಪಡೆಯಾಗಿದ್ದರೂ, ಇದರ ಸಂಪೂರ್ಣ ಪ್ರಯೋಜನ ಪಡೆಯಲು ನಿಯಮಿತವಾಗಿ ಕುಡಿಯುವುದು ಬಹಳ ಮುಖ್ಯ, (ಏಜೆನ್ಸೀಸ್).