ರಕ್ತಹೀನತೆ ಗುಣಪಡಿಸಲು ಈ ಕಬ್ಬಿಣಾಂಶಭರಿತ ಹಣ್ಣುಗಳನ್ನು ಸೇವಿಸಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

Untitled design (10)
Published on

ಕಬ್ಬಿಣಾಂಶವು ದೇಹಕ್ಕೆ ಬಹಳ ಮುಖ್ಯವಾಗಿದೆ. ಇದು ಹಿಮೋಗ್ಲೋಬಿನ್ ತಯಾರಿಸಲು ಸಹಾಯ ಮಾಡುತ್ತದೆ. ಇದು ರಕ್ತಹೀನತೆಯನ್ನು ನಿವಾರಿಸುತ್ತದೆ. ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ನೀವು ದೌರ್ಬಲ್ಯ, ಆಯಾಸ, ತಲೆತಿರುಗುವಿಕೆ ಅಥವಾ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ಕಬ್ಬಿಣಾಂಶಭರಿತ ಆಹಾರಕ್ರಮವನ್ನು ಅನುಸರಿಸುವುದು ಉತ್ತಮ.(Health Tips)

ಆಹಾರಕ್ರಮದಲ್ಲಿ ಹೆಚ್ಚು ಬದಲಾವಣೆ ಮಾಡಿಕೊಳ್ಳಲು ಇಚ್ಛಿಸದಿದ್ದರೆ ನಿಮಗಿಷ್ಟದ ಆಹಾರವನ್ನು ಸವಿಯುತ್ತಲೇ ಕೆಲವೊಂದು ಹಣ್ಣುಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ. ಕಬ್ಬಿಣಾಂಶಭರಿತ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಕಬ್ಬಿಣಾಂಶ ದೊರೆತು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಾಗಾದ್ರೆ ಯಾವ ಹಣ್ಣುಗಳಲ್ಲಿ ಕಬ್ಬಿಣಾಂಶ ಲಭಿಸುತ್ತದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕಬ್ಬಿಣಾಂಶಭರಿಯ ಹಣ್ಣುಗಳಿವು

ಕಪ್ಪು ದ್ರಾಕ್ಷಿ

ಇದು ಕಬ್ಬಿಣಾಂಶ ಮತ್ತು ವಿಟಮಿನ್ ‘ಸಿ’ಯ ಉತ್ತಮ ಮೂಲವಾಗಿದ್ದು ರಕ್ತಹೀನತೆಯನ್ನು ನಿವಾರಿಸುತ್ತದೆ.

ದಾಳಿಂಬೆ

ಇದರಲ್ಲಿ ಕಬ್ಬಿಣಾಂಶ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಇರುವುದರಿಂದ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸೀಬೆಹಣ್ಣು

ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಇದ್ದು, ಇದು ದೇಹವು ಕಬ್ಬಿಣಾಂಶವನ್ನು ತ್ವರಿತವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಸ್ಟ್ರಾಬೆರಿ

ಇದರಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಇದ್ದು, ಇದು ದೇಹದಲ್ಲಿ ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

ಸೇಬು

ಸೇಬಿನಲ್ಲಿ ಕಬ್ಬಿಣಾಂಶ, ನಾರು ಮತ್ತು ಉತ್ಕರ್ಷಣ ನಿರೋಧಕಗಳು ಇದ್ದು, ಇದು ದೇಹವನ್ನು ಆರೋಗ್ಯವಾಗಿಡುತ್ತದೆ.

ಪೀಚ್

ಇದರಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net