ಸ್ವಲ್ಪ ನಡೆದರೂ ಸುಸ್ತಾಗುತ್ತಾ? ನಿಮ್ಮ ನರಗಳನ್ನು ಬಲಗೊಳಿಸುವ ಅತ್ಯುತ್ತಮ ಆಹಾರಗಳು ಇಲ್ಲಿವೆ ನೋಡಿ... Nerve Strength

Nerve Strength
Published on

Nerve Strength : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ ಅಭ್ಯಾಸಗಳು ಸಹ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗುತ್ತವೆ. ಇಂದಿನ ಆಧುನಿಕ ಆಹಾರ ಪದ್ಧತಿಯಿಂದಾಗಿ ಅನೇಕ ಜನರು ನರ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಸ್ವಲ್ಪ ದೂರ ನಡೆದರು ಸಾಕು ಕೈ-ಕಾಲುಗಳು ಸೆಳೆಯುವುದು, ಸಣ್ಣ ತೂಕವನ್ನು ಸಹ ಎತ್ತಲು ಸಾಧ್ಯವಾಗದಿರುವುದು, ಬೇಗನೆ ಆಯಾಸ ಮತ್ತು ಸ್ನಾಯು ನೋವು ಮುಂತಾದ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿವೆ.

ನರ ಸಂಬಂಧಿತ ಅನೇಕ ಸಮಸ್ಯೆಗಳನ್ನು ಇಂದು ಜನರನ್ನು ಬಾಧಿಸುತ್ತಿವೆ. ಈ ಸಮಸ್ಯೆಯನ್ನು ಹೋಗಲಾಡಿಸಬೇಕಾದರೆ, ಮೊದಲು ಉತ್ತಮವಾದ ಆಹಾರವನ್ನು ಸೇವಿಸಬೇಕು. ಇದರೊಂದಿಗೆ ಪ್ರತಿನಿತ್ಯ ವ್ಯಾಯಾಮಗಳನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ನರಗಳ ಬಲ ಹೆಚ್ಚಾಗುತ್ತದೆ ಮತ್ತು ನಿಮ್ಮಲ್ಲಿ ದೈಹಿಕ ದೃಢತೆಯನ್ನು ಕಾಣಬಹುದು. ದೇಹದ ನರ ಮಂಡಲವನ್ನು ಬಲವಾಗಿಸುವ ಅನೇಕ ಆಹಾರಗಳಿವೆ. ಅವುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ತಪ್ಪದೇ ಸೇರಿಸಿಕೊಂಡರೆ, ನಿಮ್ಮ ನರ ದೌರ್ಬಲ್ಯ ತಕ್ಷಣವೇ ಮಾಯವಾಗಿಬಿಡುತ್ತದೆ.

ಕುಂಬಳಕಾಯಿ ಬೀಜಗಳು ನರಗಳ ಬಲಕ್ಕೆ ಉತ್ತಮವಾಗಿ ಕೆಲಸ ಮಾಡುತ್ತವೆ. ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣ, ಮೆಗ್ನೀಸಿಯಂ ಮತ್ತು ತಾಮ್ರದ ಗುಣಗಳಿವೆ. ಈ ಬೀಜಗಳನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ನರಗಳ ದೌರ್ಬಲ್ಯವನ್ನು ಸುಲಭವಾಗಿ ತೊಡೆದುಹಾಕಬಹುದು.

ಬ್ಲೂಬೆರ್ರಿಗಳು ಸಹ ನರಗಳನ್ನು ಶಕ್ತಿಯುತಗೊಳಿಸುವಲ್ಲಿ ಉತ್ತಮ ಆಹಾರವಾಗಿದೆ. ಬ್ಲೂಬೆರ್ರಿಗಳಲ್ಲಿ ಆಂಥೋಸಯಾನಿನ್​ಗಳೆಂಬ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಈ ಕಾರಣದಿಂದಾಗಿ, ಅವು ನರಗಳನ್ನು ಯಾವುದೇ ಹಾನಿಯಿಂದ ರಕ್ಷಿಸುತ್ತವೆ ಮತ್ತು ನರ ಮಂಡಲವನ್ನು ಬಲಪಡಿಸುತ್ತವೆ.

ಸಿಟ್ರಸ್ ಹಣ್ಣುಗಳು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ವಿವಿಧ ಋತುಗಳಲ್ಲಿ ಬರುವ ಸಿಟ್ರಸ್ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.

ಹಸಿರು ತರಕಾರಿಗಳು ವಿಟಮಿನ್ ಬಿನಲ್ಲಿ ಸಮೃದ್ಧವಾಗಿವೆ. ಇದಲ್ಲದೆ, ಅವು ದೇಹಕ್ಕೆ ಅಗತ್ಯವಿರುವ ಎಲ್ಲ ಜೀವಸತ್ವಗಳನ್ನು ಹೇರಳವಾಗಿ ಒದಗಿಸುತ್ತವೆ. ಇವುಗಳ ಜೊತೆಗೆ, ಒಣ ಹಣ್ಣುಗಳು, ಮೊಟ್ಟೆಗಳು ಮತ್ತು ಹಾಲಿನಂತಹ ಆಹಾರವನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು.

ಒಮೆಗಾ 3 ಕೊಬ್ಬಿನಾಮ್ಲಗಳು ವಿಶೇಷವಾಗಿ ನರಗಳಿಗೆ ಒಳ್ಳೆಯದು. ಇವು ನರಗಳನ್ನು ಬಲಪಡಿಸುತ್ತವೆ. ಈ ಕೊಬ್ಬಿನಾಮ್ಲಗಳು ಮೀನುಗಳಲ್ಲಿ ಹೇರಳವಾಗಿವೆ. ಆದ್ದರಿಂದ ಅವುಗಳನ್ನು ಆಗಾಗ್ಗೆ ತಿನ್ನುವುದು ಒಳ್ಳೆಯದು. ಈ ಆಹಾರಗಳೊಂದಿಗೆ ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net