

ಬೆಂಗಳೂರು: ಬೆವರು ಕೆಲವೊಮ್ಮೆ ಅಲರ್ಜಿ ರೂಪದಲ್ಲಿ ಕಾಡುತ್ತವೆ. ಕಿರಿಕಿ ಉಂಟು ಮಾಡಬಹುದು. ದುರ್ವಾಸನೆಯಿಂದ ಮುಜುಗರ ಉಂಟು ಮಾಡಬಹುದು. ಈ ಸಮಸ್ಯೆಗಳಿಗೆ ನಾವು ಮನೆಯಲ್ಲಿಯೇ ಕೆಲವು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
1) ನಿಂಬೆ ಗಿಡದ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿದರೆ ದೇಹದಲ್ಲಿ ಬೆವರಿನ ವಾಸನೆ ತಡೆಯುವುದಷ್ಟೇ ಅಲ್ಲ ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.
2) ರಾತ್ರಿಯಲ್ಲಿ, ಹತ್ತಿಯಿಂದ ಬೆವರು ಹೆಚ್ಚಿರುವ ಪ್ರದೇಶಗಳಲ್ಲಿ ತಲಾ ಒಂದು ಚಮಚ ನಿಂಬೆ ರಸ ಮತ್ತು ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ ಹಚ್ಚಿ. 20 ರಿಂದ 30 ನಿಮಿಷಗಳ ನಂತರ, ನೀರಿನಿಂದ ತೊಳೆಯಿರಿ.
3) ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲವು ಬೆವರು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ರಾತ್ರಿ, ಸ್ನಾನದ ನಂತರ, ಬೆವರುವ ಪ್ರದೇಶಗಳಿಗೆ ಸ್ವಲ್ಪ ಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚಿ.ಮರುದಿನ ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ.
4) ನೀರಿನ ಪ್ರಮಾಣ ಮಹತ್ವದ್ದು. ದಿನಕ್ಕೆಂಟು ಗ್ಲಾಸ್ ನೀರು ಕುಡಿಯಲೇಬೇಕು. ಇದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಿ ಬೆವರಿನ ಸಮಸ್ಯೆ ನಿರ್ವಹಣೆಗೆ ನೆರವಾಗುತ್ತದೆ.
5) ಧಾನ್ಯಗಳು, ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಶರೀರ ಹಗುರವಾದಂತೆನಿಸಿ, ಬೆವರುವ ಪ್ರಮಾಣವೂ ಕಡಿಮೆಯಾಗುತ್ತದೆ.
6) ಪ್ರತಿದಿನ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಈಗಾಗಲೇ ಬಳಸಿರುವ ಬಟ್ಟೆಗಳನ್ನು ಮತ್ತೇ ಬಳಸುವುದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ಇದು ದಾರಿ ಮಾಡಿಕೊಡುತ್ತದೆ. ಇದರಿಂದ ಮೈತುರಿಕೆ, ಬೆವರಿನ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.
ಗಮನಿಸಿ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.