ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

Untitled design - 2024-12-04T183330.226
Published on

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ ಭಾಸವಾಗುತ್ತದೆ. ಯಾವುದೇ ಕೆಲಸ ಮಾಡಲು ಅಥವಾ ನಿದ್ರೆ ಮಾಡಲು ಸಹ ಕಷ್ಟವಾಗುತ್ತದೆ. ಕೆಲವೊಮ್ಮೆ ಅದರಿಂದ ಚಿಂತಿತರಾಗಬಹುದು. ಆಯಾಸಕ್ಕೆ ಅಥವಾ ಹೆಚ್ಚು ಕೆಲಸ ಮಾಡಿದ್ದರಿಂದ ನೋವು ಕಾಣಿಸಿಕೊಂಡಿದೆ ಎಂದು ನಿರ್ಲಕ್ಷಿಸುವುದು ಬೇಡ. ಪಾದದ ಕೆಳಭಾಗದಲ್ಲಿನ ನೋವು ಈ ಕೆಳಗಿನ ಕಾಯಿಲೆಯ ಲಕ್ಷಣವಾಗಿರುತ್ತದೆ. (Health Tips)

ಅಂಗಾಲಿನಲ್ಲಿ ನೋವುಂಟಾದರೆ ಈ ಕಾಯಿಲೆಯ ಲಕ್ಷಣ ಆಗಿರಬಹುದು

  • ಸಂಧಿವಾತ: ಸಂಧಿವಾತದಿಂದ ಬಳಲುತ್ತಿರುವವರಿಗೆ ಕೀಲುಗಳಲ್ಲಿ ಊತ, ಪಾದಗಳಲ್ಲಿ ಊತ ಮತ್ತು ಪಾದದ ಕೆಳಭಾಗದ ನೋವಿನ ಸಮಸ್ಯೆ ಇರುತ್ತದೆ.
  • ಮಧುಮೇಹ: ಮಧುಮೇಹ ರೋಗ ಇರುವವರಲ್ಲಿ ಪಾದದ ಕೆಳಭಾಗದಲ್ಲಿ ನೋವಿನ ಸಮಸ್ಯೆಯೂ ಹೆಚ್ಚಾಗಿ ಕಂಡುಬರುತ್ತದೆ. ಇದರ ಜತೆಗೆ ಜುಮ್ಮೆನಿಸುವಿಕೆ, ಬಿಸಿ ಅಥವಾ ಸುಡುವ ಸಂವೇದನೆಯು ಕಂಡುಬರುತ್ತದೆ.
  • ಪ್ಲಾಂಟರ್ ಫ್ಯಾಸಿಟಿಸ್: ಪ್ಲಾಂಟರ್ ಫ್ಯಾಸಿಟಿಸ್ ಸಹ ಪಾದದ ಕೆಳಭಾಗದಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು. ಪ್ಲಾಂಟರ್ ಫ್ಯಾಸಿಯಾ ಎಂಬ ಸ್ನಾಯು ಉರಿಯೂತವಾದಾಗ ಈ ಸ್ಥಿತಿಯು ಸಾಮಾನ್ಯವಾಗಿ ಹೀಲ್ ಬಳಿ ಉಂಟಾಗುತ್ತದೆ.
  • ಬರ್ಸಿಟಿಸ್​​: ಅಂಗಾಲಿನಲ್ಲಿ ನೋವನ್ನು ಉಂಟುಮಾಡಬಹುದು. ಬರ್ಸಿಟಿಸ್​ನಲ್ಲಿನ ಬುರ್ಸಾದಲ್ಲಿ ಊತವಿದೆ ಅಂದರೆ ಕೀಲುಗಳ ಬಳಿ ನೀರು ತುಂಬಿದೆ ಎಂದು ಅರ್ಥ. ಈ ಊತವು ಪಾದಗಳು ಮತ್ತು ಕೆಳಭಾಗಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net